ದಾಖಲೆ ಬರೆದ ಜಾಕೋವಿಕ್, ವಿಂಬಲ್ಡನ್ ನಲ್ಲಿ 8ನೇ ಬಾರಿಗೆ ಸೆಮಿಫೈನಲ್ ಪ್ರವೇಶ

ಬ್ರಿಟನ್ ನಲ್ಲಿ ನಡೆಯುತ್ತಿರುವ 2018ನೇ ಸಾಲಿನ ವಿಂಬಲ್ಡನ್ ಟೂರ್ನಿಯಲ್ಲಿ 3 ಬಾರಿ ಚಾಂಪಿಯನ್ ನುವಾಕ್ ಜಾಕೋವಿಕ್ ಜಪಾನ್ ನ ಕೀ ನಿಶಿಕೋರಿ ಅವರನ್ನು ಮಣಿಸಿ ಸೆಮಿಫೈನಲ್ ತಲುಪಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ಬ್ರಿಟನ್ ನಲ್ಲಿ ನಡೆಯುತ್ತಿರುವ 2018ನೇ ಸಾಲಿನ ವಿಂಬಲ್ಡನ್ ಟೂರ್ನಿಯಲ್ಲಿ 3 ಬಾರಿ ಚಾಂಪಿಯನ್ ನುವಾಕ್ ಜಾಕೋವಿಕ್ ಜಪಾನ್ ನ ಕೀ ನಿಶಿಕೋರಿ ಅವರನ್ನು ಮಣಿಸಿ ಸೆಮಿಫೈನಲ್ ತಲುಪಿದ್ದಾರೆ.
ಲಂಡನ್ ನಲ್ಲಿ ಇಂದು ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಾಕೋವಿಕ್ ಕೀ ನಿಶಿಕೋರಿ ಅವರನ್ನು 6-3, 3-6, 6-2, 6-2 ಸೆಟ್ ಗಳ ಅಂತರದಲ್ಲಿ ಮಣಿಸಿ ಭರ್ಜರಿ ಜಯ ಸಾಧಿಸಿದರು. ಜಾಕೋವಿಕ್ ಗೆ ಇದು 8ನೇ ವಿಂಬಲ್ಡನ್ ಸೆಮಿಫೈನಲ್ ಆಗಿದ್ದು, 2016ರ ಪ್ರೆಂಚ್ ಓಪನ್ ಬಳಿಕದ ಮೊದಲ ವಿಂಬಲ್ಡನ್ ಸೆಮಿಫೈನಲ್ ಪ್ರವೇಶವಾಗಿದೆ.
ಜಾಕೋವಿಕ್ ಗೆ ಇದು 32ನೇ ಗ್ರಾಂಡ್ ಸ್ಲಾಮ್ ಆಗಿದ್ದು, ಸೆಮಿಫೈನಲ್ ನಲ್ಲಿ ಜಾಕೋವಿಕ್ ವಿಶ್ವದ ನಂಬರ್ ಒನ್ ಆಟಗಾರ ರಾಫೆಲ್ ನಡಾಲ್ ಅಥವಾ 5ನೇ ಶ್ರೇಯಾಂಕದ ಜುವಾನ್ ಮಾರ್ಟಿನ್ ಡೆಲ್ ಪೋಟ್ರೋ ಅವರನ್ನು ಎದುರಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com