ಹಾಕಿ ಚಾಂಪಿಯನ್ಸ್ ಟ್ರೋಫಿ: 2-1 ಅಂತರದಿಂದ ಅರ್ಜೆಂಟಿನ ವಿರುದ್ಧ ಭಾರತದ ಗೆಲುವು

ನೆದರ್ಲ್ಯಾಂಡ್ ನಲ್ಲಿ ನಡೆಯುತ್ತಿರುವ ಎಫ್ಐಹೆಚ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತನ್ನ ಗೆಲುವನ್ನು ಮುಂದುವರೆಸಿದ್ದು, ಅರ್ಜೆಂಟಿನಾ ವಿರುದ್ಧ 2-1 ಅಂತರದಿಂದ ಗೆಲುವು ಸಾಧಿಸಿದೆ.
ಹಾಕಿ ಚಾಂಪಿಯನ್ಸ್ ಟ್ರೋಫಿ: 2-1 ಅಂತರದಿಂದ ಅರ್ಜೆಂಟಿನ ವಿರುದ್ಧ ಭಾರತದ ಗೆಲುವು
ಹಾಕಿ ಚಾಂಪಿಯನ್ಸ್ ಟ್ರೋಫಿ: 2-1 ಅಂತರದಿಂದ ಅರ್ಜೆಂಟಿನ ವಿರುದ್ಧ ಭಾರತದ ಗೆಲುವು
ನೆದರ್ಲ್ಯಾಂಡ್ಸ್: ನೆದರ್ಲ್ಯಾಂಡ್ ನಲ್ಲಿ ನಡೆಯುತ್ತಿರುವ ಎಫ್ಐಹೆಚ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತನ್ನ ಗೆಲುವನ್ನು ಮುಂದುವರೆಸಿದ್ದು,  ಅರ್ಜೆಂಟಿನಾ ವಿರುದ್ಧ 2-1 ಅಂತರದಿಂದ ಗೆಲುವು ಸಾಧಿಸಿದೆ. 
ಜೂ.23 ರಂದು ನಡೆದ ಪಂದ್ಯದಲ್ಲಿ ಭಾರತ ಪಾಕ್ ವಿರುದ್ಧ 4-0 ಅಂತರದಿಂದ ಗೆದ್ದಿತ್ತು. ಜೂ.24 ರಂದು ನಡೆದ ಪಂದ್ಯದಲ್ಲಿ ಭಾರತ 2-1 ಅಂತರದಿಂದ ಗೆದ್ದಿದೆ. ಎರಡನೇ ಕ್ವಾರ್ಟರ್ ವರೆಗೂ ಗೋಲ್ ದಾಖಲಿಸಲು ಹೆಣಗುತ್ತಿದ್ದ ಭಾರತಕ್ಕೆ ಹರ್ಮನ್ಪ್ರೀತ್ ಸಿಂಗ್ 17 ನೇ ನಿಮಿಷದಲ್ಲಿ ಗೋಲ್ ದಾಖಲಿಸಲು ನೆರವಾದರು. ನಂತರ ಮನ್ದೀಪ್ ಸಿಂಗ್ 28 ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ 2 ನೇ ಗೋಲ್ ದಾಖಲಿಸಿದರು. 
ವಿಶ್ವದಲ್ಲಿ 2ನೇ ಶ್ರೇಷ್ಠ ಹಾಕಿ ತಂಡವಾಗಿರುವ ಅರ್ಜೆಂಟೀನಾ 30 ನೇ ನಿಮಿಷದಲ್ಲಿ ಭಾರತದ ವಿರುದ್ಧ ಕೇವಲ ಒಂದು ಗೋಲ್ ದಾಖಲಿಸಿ ಭಾರತದ ವಿರುದ್ಧ ಸೋಲೊಪ್ಪಿಕೊಂಡಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com