ಮಲೇಷ್ಯಾ ಓಪನ್: ಸೆಮಿ ಫೈನಲ್ ನಲ್ಲಿ ಮುಗ್ಗರಿಸಿದ ಪಿವಿ ಸಿಂಧು

ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಸೆಮಿ ಫೈನಲ್ ನಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು...
ಪಿವಿ ಸಿಂಧು
ಪಿವಿ ಸಿಂಧು
Updated on
ಕೌಲಾಲಂಪುರ: ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಸೆಮಿ ಫೈನಲ್ ನಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ವಿಶ್ವದ ನಂಬರ್ 1 ಆಟಗಾರ್ತಿ ಚೀನಾದ ತೈ ತ್ಸು ಯಿಂಗ್ ವಿರುದ್ಧ ಸೋಲಿನ ಆಘಾತ ಅನುಭವಿಸಿದರು.
ಇಂದು ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ನಲ್ಲಿ ಪಿವಿ ಸಿಂಧು - ತೈ ತ್ಸು ಯಿಂಗ್ ವಿರುದ್ಧ 15-21, 21-19, 11-21ರ ನೇರ ಗೇಮ್ ಗಳಿಂದ ಸೋಲು ಅನುಭವಿಸಿದರು.
ಮೊದಲ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದ ಸಿಂಧು ದ್ವಿತೀಯ ಸುತ್ತು ವಶಡಿಸಿಕೊಂಡರೂ ನಿರ್ಣಾಯಕ ಸುತ್ತಿನಲ್ಲಿ ಮತ್ತೆ ಎಡವಿದ ಪರಿಣಾಮ ಫೈನಲ್ ಮುಖ ಕಾಣದೆ ಹಿಂತಿರುಗಬೇಕಾಯಿತು.
ಪಿವಿ ಸಿಂಧು ನಿನ್ನೆ ಸ್ಪೇನ್ ನ ಕರೊಲಿನ ಮರಿನ್ ವಿರುದ್ಧ  22-20, 21-19 ನೇರ ಸೆಟ್ ಗಳಿಂದ ಗೆದ್ದು ಸೆಮಿಫೈನಲ್ ಗೆ ಪ್ರವೇಶಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com