ಪ್ರೊ ಕಬಡ್ಡಿ 2018: ಯುಪಿ ಯೋಧಾ ಪಡೆಯನ್ನು ಬಗ್ಗುಬಡಿದ ಬೆಂಗಳೂರು ಬುಲ್ಸ್, ಸತತ 4ನೇ ಗೆಲುವು!

2018ರ ಪ್ರೊ ಕಬಡ್ಡಿ ಟೂರ್ನಿಯ ಆರನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತಂಡ ನಾಗಾಲೋಟ ಮುಂದುವರೆಸಿದೆ. ಇಂದು ನಡೆದ ಯುಪಿ ಯೋಧಾ ತಂಡ ವಿರುದ್ಧದ ಪಂದ್ಯದಲ್ಲಿ...
ಬೆಂಗಳೂರು ಬುಲ್ಸ್
ಬೆಂಗಳೂರು ಬುಲ್ಸ್
Updated on
ಗ್ರೇಟರ್ ನೋಯ್ಡಾ: 2018ರ ಪ್ರೊ ಕಬಡ್ಡಿ ಟೂರ್ನಿಯ ಆರನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತಂಡ ನಾಗಾಲೋಟ ಮುಂದುವರೆಸಿದೆ. ಇಂದು ನಡೆದ ಯುಪಿ ಯೋಧಾ ತಂಡ ವಿರುದ್ಧದ ಪಂದ್ಯದಲ್ಲಿ ಬುಲ್ಸ್ ಭರ್ಜರಿ ಗೆಲುವು ಸಾಧಿಸಿದೆ. 
ಯುಪಿ ಯೋಧಾ ತಂಡವನ್ನು 37-27 ಅಂಕಗಳಿಂದ ಮಣಿಸಿ ಬುಲ್ಸ್ ತಂಡ ಬಿ ವಲಯದಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು ಕಳೆದ ನಾಲ್ಕು ಪಂದ್ಯಗಳಲ್ಲೂ ಬುಲ್ಸ್ ತಂಡ ಸತತ ಗೆಲುವು ದಾಖಲಿಸಿದೆ. 
ಪಂದ್ಯದ ಮೊದಲಾರ್ಧದಲ್ಲಿ ಬೆಂಗಳೂರು ಬುಲ್ಸ್ ತಂಡ 19-11 ಅಂಕಗಳೊಂದಿಗೆ ಭರ್ಜರಿ ಮುನ್ನಡೆ ಕಾಯ್ದುಕೊಂಡಿತ್ತು. ದ್ವಿತೀಯಾರ್ಧದಲ್ಲಿ 16 ಅಂಕ ಸಂಪಾದಿಸಿ ಗೆಲುವಿನ ನಗೆ ಬೀರಿತು. 
ಬುಲ್ಸ್ ಪರ ಸ್ಟಾರ್ ರೈಡರ್ ಪವನ್ ಶೆರಾವತ್ ಸೂಪರ್ 10 ಅಂಕ ಪಡೆದು ಗೆಲುವಿನ ರೂವಾರಿ ಎನಿಸಿದರು. ರೋಹಿತ್ ಕುಮಾರ್ 7 ಮತ್ತು ಮಹೇಂದ್ರ ಸಿಂಗ್ 6 ಅಂಕ ಗಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com