ಹಾಕಿ: ಆಸ್ಟ್ರೇಲಿಯಾ ವಿರುದ್ಧ ಡ್ರಾ ಮಾಡಿಕೊಂಡ ಭಾರತದ ವನಿತೆಯರು

ಜಪಾನ್ ವಿರುದ್ಧ ಮೊದಲ ಪಂದ್ಯದಲ್ಲಿ ಭರ್ಜರಿ  ಜಯ ಸಾಧಿಸಿದ್ದ ಭಾರತ ಮಹಿಳಾ ಹಾಕಿ ತಂಡ ಒಲಿಂಪಿಕ್ಸ್  ಟೆಸ್ಟ್ ದ್ವಿತೀಯ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಆಸ್ಟ್ರೇಲಿಯಾ ವಿರುದ್ಧ 2-2 ಅಂತರದಲ್ಲಿ ಡ್ರಾ ಮಾಡಿಕೊಂಡಿದೆ.
ಮಹಿಳಾ ಹಾಕಿ ತಂಡ
ಮಹಿಳಾ ಹಾಕಿ ತಂಡ

ಟೋಕಿಯೋ: ಜಪಾನ್ ವಿರುದ್ಧ ಮೊದಲ ಪಂದ್ಯದಲ್ಲಿ ಭರ್ಜರಿ  ಜಯ ಸಾಧಿಸಿದ್ದ ಭಾರತ ಮಹಿಳಾ ಹಾಕಿ ತಂಡ ಒಲಿಂಪಿಕ್ಸ್  ಟೆಸ್ಟ್ ದ್ವಿತೀಯ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಆಸ್ಟ್ರೇಲಿಯಾ ವಿರುದ್ಧ 2-2 ಅಂತರದಲ್ಲಿ ಡ್ರಾ ಮಾಡಿಕೊಂಡಿದೆ.

ಇಂದು ನಡೆದ ಪಂದ್ಯದಲ್ಲಿ ವಂದನಾ ಕಟಾರಿಯಾ 36 ನೇ ನಿಮಿಷ ಹಾಗೂ ಗುರ್ಜೀತ್ ಕೌರ್  ಅವರು 59 ನೇ ನಿಮಿಷದಲ್ಲಿ ಗಳಿಸಿದ ಎರಡು ಗೋಲುಗಳ ಸಹಾಯದಿಂದ ಭಾರತದ ವನಿತೆಯರು, ಸಮಬಲ ಸಾಧಿಸಿ ಡ್ರಾ ಮಾಡಿಕೊಂಡರು.  ಮೊದಲನೇ ಪಂದ್ಯದಲ್ಲಿ  ಭಾರತ 2-1 ಅಂತರದಲ್ಲಿ ಜಪಾನ್ ವಿರುದ್ಧ ಗೆದ್ದು ಪಾರಮ್ಯ ಮೆರೆದಿತ್ತು.

ವಿಶ್ವದ 10 ನೇ ಶ್ರೇಯಾಂಕದ ಭಾರತ ಹಾಗೂ ಆಸ್ಟ್ರೇಲಿಯಾ ಎರಡು ತಂಡಗಳು ಆರಂಭದಿಂದಲೂ ಆಕ್ರಮಣಕಾರಿ ಆಟ ಪ್ರದರ್ಶನ ನೀಡಿದ್ದವು. ಆರಂಭದಲ್ಲೇ ಉಭಯ ತಂಡಗಳಿಗೆ ಪೆನಾಲ್ಟಿ ಕಾರ್ನರ್ ಸಿಕ್ಕಿತ್ತು. ಇದನ್ನು ಆಸ್ಟ್ರೇಲಿಯಾ ಮಾತ್ರ ಸದುಪಯೋಗಪಡಿಸಿಕೊಂಡಿತು. 

14 ನೇ ನಿಮಿಷದಲ್ಲಿ ಕೈಟ್ಲಿನ್ ನೋಬ್ಸ್  ಹಾಗೂ 43 ನೇ ನಿಮಿಷದಲ್ಲಿ ಗ್ರೇಸ್ ಸ್ಟೆವಾರ್ಟ್  ಎರಡು ಗೋಲುಗಳನ್ನು ಗಳಿಸುವ ಮೂಲಕ ಭಾರತಕ್ಕೆ ತೀವ್ರ ಪೈಪೋಟಿ ನೀಡಿದರು. ಕೊನೆಗೆ  ಭಾರತ ಎರಡು ಗೋಲು ಗಳಿಸುವ ಮೂಲಕ ಸಮಬಲ ಸಾಧಿಸಿ ಡ್ರಾ ಮಾಡಿಕೊಂಡಿತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com