ದಕ್ಷಿಣ ಏಷ್ಯನ್ ಕ್ರೀಡಾಕೂಟ: 71 ಪದಕ ಗಳಿಸಿದ ಭಾರತ, ಪದಕ ಪಟ್ಟಿಯಲ್ಲಿ ಟಾಪರ್!

 ಇಲ್ಲಿ ನಡೆಯುತ್ತಿರುವ 13ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳ ಪದಕ ಬೇಟೆ ಮುಂದುವರಿದಿದೆ. ಬುಧವಾರ ಮೂರನೇ ದಿನ ಮುಕ್ತಾಯಕ್ಕೆೆ ಭಾರತ 32 ಚಿನ್ನ ಸೇರಿದಂತೆ ಭಾರತ ಒಟ್ಟು 71 ಪದಕಗಳು ಪಡೆದು ಪದಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಠ್ಮಂಡು: ಇಲ್ಲಿ ನಡೆಯುತ್ತಿರುವ 13ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳ ಪದಕ ಬೇಟೆ ಮುಂದುವರಿದಿದೆ. ಬುಧವಾರ ಮೂರನೇ ದಿನ ಮುಕ್ತಾಯಕ್ಕೆೆ ಭಾರತ 32 ಚಿನ್ನ ಸೇರಿದಂತೆ ಭಾರತ ಒಟ್ಟು 71 ಪದಕಗಳು ಪಡೆದು ಪದಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು.

ಬುಧವಾರ ಭಾರತ 15 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿತು. ಇದರಲ್ಲಿ ಅಥ್ಲಿಟ್‌ಗಳಿಂದ ಐದು ಚಿನ್ನದ ಪದಕಗಳು ಕೊಡುಗೆ ಇದೆ. 32 ಚಿನ್ನ, 26 ಬೆಳ್ಳಿ ಹಾಗೂ 13 ಕಂಚಿನ ಪದಕಗಳು ಸೇರಿ ಭಾರತದ ಖಾತೆಗೆ 71 ಪದಕಗಳು ಸೇರ್ಪಡೆಯಾಗಿವೆ. 

ಅಥ್ಲೆಟಿಕ್ಸ್ ವಿಭಾಗದಿಂದ 10 (5 ಚಿನ್ನ, 3 ಬೆಳ್ಳಿ, 2 ಕಂಚು) ಪದಕಗಳು ಬಂದಿವೆ. ಟೇಬಲ್ ಟೆನಿಸ್ ನಿಂದ ಮೂರು ಚಿನ್ನ, ಮೂರು ಬೆಳ್ಳಿ ಹಾಗೂ ಎರಡು ಕಂಚು ಸೇರಿದಂತೆ ಆರು ಪದಕಗಳು ಸಂದಿವೆ. ಟೇಕ್ವಾಂಡೋ ವಿಭಾಗದಿಂದ ಆರು ( 3ಚಿನ್ನ, 2 ಬೆಳ್ಳಿ ಹಾಗೂ 1 ಕಂಚು) ಪದಕಗಳು, ಟ್ರಯಾಥ್ಲನ್ ನಿಂದ ಐದು (2 ಚಿನ್ನ, 2 ಬೆಳ್ಳಿ ಹಾಗೂ 1 ಕಂಚು) ಪದಕಗಳು ಹಾಗೂ ಖೋ ಖೋ ನಿಂದ ಎರಡು ಚಿನ್ನದ ಪದಕಗಳು ಭಾರತದ ಖಾತೆಗೆ ಬುಧವಾರ ಸೇರ್ಪಡೆಯಾಗಿವೆ.

ಭಾರತದ ಅಥ್ಲಿಟ್‌ಗಳು ಬುಧವಾರ ಪಾರಮ್ಯ ಸಾಧಿಸಿದರು. ಮಂಗಳವಾರ 10 ಪದಕ ಗೆದ್ದಿದ್ದ ಅಥ್ಲಿಟ್‌ಗಳು ಮೂರನೇ ದಿನವೂ 10 ಪದಕಗಳನ್ನು ಮುಡಿಗೇರಿಸಿಕೊಂಡರು. ಎರಡನೇ ದಿನ ಮಹಿಳೆಯರ 100ಮೀ. ವಿಭಾಗದಲ್ಲಿ ಮೊದಲನೇ ಚಿನ್ನ ಗೆದ್ದಿದ್ದ ಅರ್ಚನಾ ಸುಸೀಂದ್ರನ್ 200ಮೀ. ಓಟದಲ್ಲಿ ಅರ್ಚನಾ ಎರಡನೇ ಚಿನ್ನ ಮುಡಿಗೇರಿಸಿಕೊಂಡರು. ಚಂದ್ರಲೇಕಾ ಬೆಳ್ಳಿ ಪಡೆದರು. ಪುರುಷರ 10000 ಮೀ. ವಿಭಾಗದಲ್ಲಿ ಸುರೇಶ್ ಕುಮಾರ ಸ್ವರ್ಣ ಪದಕ ಪಡೆದರು.

ಶೂಟಿಂಗ್‌ನಲ್ಲಿ ಅನ್ನೂ ರಾಜ್, ಗೌರಿ ಶೆರನ್ ಮತ್ತು ನೀರಜ್ ಕುಮಾರ್ ತಂಡದಲ್ಲಿ ಚಿನ್ನ ಗೆದ್ದರು. ವೈಯಕ್ತಿಕ ಶೂಟಿಂಗ್ ಸ್ಪರ್ಧೆಗಳಲ್ಲಿ, ಅನ್ನೂ ಚಿನ್ನ ಗೆದ್ದರೆ, ಗೌರಿ ಬೆಳ್ಳಿ ಗೆದ್ದರು. ಟ್ರಯಥ್ಲಾನ್‌ನಲ್ಲಿ ಭಾರತ 4 ಮಿಶ್ರಿತ ರಿಲೇಯಿಂದ 4 ರಲ್ಲಿ ಚಿನ್ನ ಗೆದ್ದಿದೆ.

ಟೇಬಲ್ ಟೆನಿಸ್‌ನಲ್ಲಿ, ಪುರುಷರ ಮತ್ತು ಮಹಿಳೆಯರ ಡಬಲ್ಸ್ ವಿಭಾಗಗಳಲ್ಲಿ ಭಾರತೀಯ ಪ್ಯಾಡ್ಲರ್‌ಗಳು ಚಿನ್ನ ಮತ್ತು ಬೆಳ್ಳಿ ಪಡೆದರು.

ಬ್ಯಾಡ್ಮಿಂಟನ್‌ನಲ್ಲಿ, 8 ಭಾರತೀಯ ಶಟ್ಲರ್‌ಗಳು ಸಿಂಗಲ್ಸ್ ಮತ್ತು ಡಬಲ್ಸ್ ಸ್ಪರ್ಧೆಗಳಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದು ಅಲ್ಲಿ ಸಹ ಭಾರತಕ್ಕೆ ಪದಕಗಳು ಖಚಿಇತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com