ಬಹುಕಾಲದ ಗೆಳತಿಯನ್ನು ವರಿಸಲು ರಫೆಲ್ ನಡಾಲ್ ಸಜ್ಜು

ಮಾಜಿ ನಂಬರ್ ಒನ್ ಟೆನಿಸ್ ಆಟಗಾರ ರಫೆಲ್ ನಡಾಲ್ ತಮ್ಮ ಬಹುಕಾಲದ ಗೆಳತಿ ಕ್ಸಿಸ್ಕಾ ...
ರಫೆಲ್ ನಡಾಲ್ ಮತ್ತು ಕ್ಸಿಸ್ಕಾ ಪೆರೆಲ್ಲೊ
ರಫೆಲ್ ನಡಾಲ್ ಮತ್ತು ಕ್ಸಿಸ್ಕಾ ಪೆರೆಲ್ಲೊ
Updated on: 

ಲಂಡನ್: ಮಾಜಿ ನಂಬರ್ ಒನ್ ಟೆನಿಸ್ ಆಟಗಾರ ರಫೆಲ್ ನಡಾಲ್ ತಮ್ಮ ಬಹುಕಾಲದ ಗೆಳತಿ ಕ್ಸಿಸ್ಕಾ ಪೆರೆಲ್ಲೊ ಅವರನ್ನು ವರಿಸಲಿದ್ದಾರೆ.

ಇವರಿಬ್ಬರ ನಿಶ್ಚಿತಾರ್ಥ ಇತ್ತೀಚೆಗೆ ನಡೆದಿದೆ. 32 ವರ್ಷದ ರಫೆಲ್ ನಡಾಲ್ ಇತ್ತೀಚೆಗೆ ಪೆರೆಲ್ಲೊಗೆ ನಿಶ್ಚಿತಾರ್ಥದ ಉಂಗುರ ತೊಡಿಸಿ ಮದುವೆಗೆ ಪ್ರಸ್ತಾವನೆ ಮುಂದಿಟ್ಟರು. ಸದ್ಯದಲ್ಲಿಯೇ ಜೋಡಿ ಹಸೆಮಣೆಗೆ ಏರಲಿದೆ.

ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ ಮುಕ್ತ ಗ್ರಾಂಡ್ ಸ್ಲಾಂ ಪಂದ್ಯದಲ್ಲಿ ಸೈನ್ ನ ರಫೆಲ್ ನಡಾಲ್ ವಿಶ್ವದ ನಂಬರ್ 1 ಆಟಗಾರ ನೊವೊಕ್ ಜೊಕೊವಿಚ್ ಅವರ ಎದುರು ಸೋಲನುಭವಿಸಿದ್ದರು.

ರಫೆಲ್ ನಡಾಲ್ ಇದುವರೆಗೆ ತಮ್ಮ ವೃತ್ತಿ ಬದುಕಿನಲ್ಲಿ 17 ಪ್ರಮುಖ ಟೈಟಲ್ ಗಳನ್ನು ಗೆದ್ದುಕೊಂಡಿದ್ದು 8 ಗ್ರಾಂಡ್ ಸ್ಲಾಮ್ ಗಳಲ್ಲಿ ರನ್ನರ್ ಅಪ್ ಆಗಿದ್ದಾರೆ. ಕಿಂಗ್ ಆಫ್ ಕ್ಲೇ ಎಂದು ಅಭಿಮಾನಿಗಳಿಂದ ಕರೆಯಲ್ಪಡುವ ರಫೆಲ್ ನಡಾಲ್ ಒಟ್ಟು 11 ಫ್ರಾನ್ಸ್ ಮುಕ್ತ ಪ್ರಶಸ್ತಿಗಳನ್ನು ಗಳಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com