ಬ್ಯಾಡ್ಮಿಂಟನ್‌ ರಾಷ್ಟ್ರೀಯ ಚಾಂಪಿಯನ್‌ಶಿಪ್‌: ಸೆಮಿ ಫೈನಲ್ ತಲುಪಿದ ಸೈನಾ, ಕಶ್ಯಪ್‌, ವರ್ಮಾ

ಗುವಾಹಟಿಯಲ್ಲಿ ನಡೆಯುತ್ತಿರುವ 83ನೇ ಹಿರಿಯರ ಬ್ಯಾಡ್ಮಿಂಟನ್‌ ರಾಷ್ಟ್ರೀಯ ಚಾಂಪಿಯನ್‌ಶಿಪ್‌ ನಲ್ಲಿ ಮಾಜಿ ಚಾಂಪಿಯನ್‌ ಗಳಾದ ಸೈನಾ ನೆಹ್ವಾಲ್‌....
ಸೈನಾ ನೆಹ್ವಾಲ್, ಪರುಪಳ್ಳಿ ಕಶ್ಯಪ್
ಸೈನಾ ನೆಹ್ವಾಲ್, ಪರುಪಳ್ಳಿ ಕಶ್ಯಪ್
Updated on
ಗುವಾಹಾಟಿ: ಗುವಾಹಟಿಯಲ್ಲಿ ನಡೆಯುತ್ತಿರುವ 83ನೇ ಹಿರಿಯರ ಬ್ಯಾಡ್ಮಿಂಟನ್‌ ರಾಷ್ಟ್ರೀಯ ಚಾಂಪಿಯನ್‌ಶಿಪ್‌ ನಲ್ಲಿ ಮಾಜಿ ಚಾಂಪಿಯನ್‌ ಗಳಾದ ಸೈನಾ ನೆಹ್ವಾಲ್‌, ಪರುಪಳ್ಳಿ ಕಶ್ಯಪ್‌ ಹಾಗೂ ಸೌರಬ್‌ ವರ್ಮಾ ಅವರು ಶುಕ್ರವಾರ ಸೆಮಿಫೈನಲ್ ತಲುಪಿದ್ದಾರೆ.
ಇಂದು ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಭಾರತದ ಮಾಜಿ ನಂ. 1 ಆಟಗಾರ್ತಿ ಮುಂಬೈನ ನೇಹಾ ಪಂಡಿತ್‌ ಅವರನ್ನು ಸೈನಾ ನೆಹ್ವಾಲ್‌ ಅವರು 21-10, 21-10 ಅಂತರದಿಂದ ಸೋಲಿಸಿದರು.
ಸೈನಾ ನೆಹ್ವಾಲ್ ಅವರು ಸೆಮಿ ಫೈನಲ್ ನಲ್ಲಿ ನಾಗ್ಪುರದ ವೈಷ್ಣವಿ ಭಾಲೆ ಅವರನ್ನು ಎದುರಿಸಲಿದ್ದಾರೆ.
ಪುರುಷರ ಕ್ವಾರ್ಟರ್‌ ಫೈನಲ್‌ನಲ್ಲಿ 2012ರ ಚಾಂಪಿಯನ್‌ ಹಾಗೂ ಸೈನಾ ನೆಹ್ವಾಲ್ ಪತಿ ಪರುಪಳ್ಳಿ ಕಶ್ಯಪ್‌ ಅವರು ಬೋದಿತ್‌ ಜೋಶಿ ಅವರನ್ನು 21-18, 21-16 ಅಂತರದಿಂದ ಮಣಿಸಿ ಸೆಮಿಫೈನಲ್‌ ತಲುಪಿದ್ದಾರೆ.
ಇನ್ನು ಮತ್ತೊಂದು ಪುರುಷರ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸೌರಭ್‌ ವರ್ಮಾ ಅವರು, ಬಿ. ಸಾಯಿ ಪ್ರಣೀತ್‌ ಅವರನ್ನು 21-11, 21-23, 21-18 ಅಂತರದಲ್ಲಿ ಸೋಲಿಸಿ ಅಂತಿಮ ನಾಲ್ಕರ ಘಟ್ಟಕ್ಕೆ ತಲುಪಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com