ರಾಷ್ಟ್ರೀಯ ಸೀನಿಯರ್​ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್​: ಸೈನಾ ನೆಹ್ವಾಲ್, ಸೌರಭ್ ವರ್ಮಾ ಚಾಂಪಿಯನ್!

ಗೌಹಾಟಿಯಲ್ಲಿ ನಡೆಯುತ್ತಿರುವ 83ನೇ ರಾಷ್ಟ್ರೀಯ ಸೀನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್​ಷಿಪ್​ಮಹಿಳಾ ಸಿಂಗಲ್ಸ್ ಪಂದ್ಯದ ಫೈನಲ್ ನಲ್ಲಿ ಪಿವಿ ಸಿಂಧೂ ಅವರನ್ನು ಮಣಿಸಿದ ಸೈನಾ ನೆಹ್ವಾಲ್....
ರಾಷ್ಟ್ರೀಯ ಸೀನಿಯರ್​ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್​: ಸಿಂಧೂ ಮಣಿಸಿದ ಸೈನಾಗೆ ಪ್ರಶಸ್ತಿ
ರಾಷ್ಟ್ರೀಯ ಸೀನಿಯರ್​ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್​: ಸಿಂಧೂ ಮಣಿಸಿದ ಸೈನಾಗೆ ಪ್ರಶಸ್ತಿ
Updated on
ಗೌಹಾಟಿ: ಗೌಹಾಟಿಯಲ್ಲಿ ನಡೆಯುತ್ತಿರುವ 83ನೇ ರಾಷ್ಟ್ರೀಯ ಸೀನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್​ಷಿಪ್​ಮಹಿಳಾ ಸಿಂಗಲ್ಸ್ ಪಂದ್ಯದ ಫೈನಲ್ ನಲ್ಲಿ ಪಿವಿ ಸಿಂಧೂ ಅವರನ್ನು ಮಣಿಸಿದ ಸೈನಾ ನೆಹ್ವಾಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ರಿಯೋ ಒಲಂಪಿಕ್ ಪ್ಬೆಳ್ಳಿ ಪದಕ ವಿಜೇತೆಯಾಗಿದ್ದ ಸಿಂಧೂ ಅವರನ್ನು ಲಂಡನ್ ಒಲಂಪಿಕ್ ಕಂಚಿನ ಪದಕ ವಿಜೇತೆಯಾದ ಸೈನಾ  21-18, 21-15 ಸೆಟ್ ಗಳಿಂದ ಮಣಿಸಿ ಪ್ರಶಸ್ತಿ ಗಳಿಸಿದ್ದಾರೆ.
ಸೈನಾ ನೆಹ್ವಾಲ್ ಇಂದಿನ ಜಯದೊಡನೆ ಸತತ ಎರಡನೇ ಬಾರಿಗೆ ರಾಷ್ಟ್ರೀಯ ಸೀನಿಯರ್​ ಬ್ಯಾಡ್ಮಿಂಟನ್​ ಚಾಂಪಿಯನ್ ಎನಿಸಿದ್ದಾರೆ. ಈ ಹಿಂದೆ ನಾಗ್ಪುರದಲ್ಲಿ ನಡೆದಿದ್ದ ಪಂದ್ಯಾವಳಿಯಲ್ಲಿ ಸಹ ಸಿಂಧೂ ಅವರನ್ನು ಸೋಲಿಸಿ ಸೈನಾ ಚಾಂಪಿಯನ್ ಆಗಿದ್ದರು.
ಇದಕ್ಕೆ ಮುನ್ನ ಶುಕ್ರವಾರದಂದು ನಡೆದಿದ್ದ ಸೆಮಿಫೈನಲ್ ಹಣಾಹಣಿಯಲ್ಲಿ ಸಿಂಧೂ 4ನೇ ಶ್ರೇಯಾಂಕಿತೆ ಅಶ್ಮಿತಾ ಚಾಲಿಹಾ ಅವರ ವಿರುದ್ಧ 21-10, 22-20 ಸೆಟ್ ಗಳಿಂದ ಜಯ ಸಾಧಿಸಿದ್ದರು. ಇತ್ತ ಸೈನಾ ನೆಹ್ವಾಲ್ ಸಹ ವೈಷ್ಣವಿ ಭಾಲೆ ಅವರನ್ನು  21-15, 21-14 ಸೆಟ್ ಗಳಿಂದ ಮಣಿಸಿದ್ದರು.
ಸೌರಭ್​ ವರ್ಮಾ ಚಾಂಪಿಯನ್ 
ಪುರುಷರ ವಿಭಾಗದಲ್ಲಿ  ಸೌರಭ್​ ವರ್ಮಾ ಏಷ್ಯನ್​ ಜೂನಿಯರ್​ ಚಾಂಪಿಯನ್​ ಲಕ್ಷ್ಯ ವಿರುದ್ಧ 21-18, 21-13 ಅಂತರದಿಂದ ಜಯ ದಾಖಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com