ಇಂಡೋನೇಷಿಯಾ ಮಾಸ್ಟರ್ಸ್: ಚೀನಾ ಎದುರಾಳಿಯನ್ನು ಮಣಿಸಿದ ಸೈನಾ ಫೈನಲ್ ಗೆ ಲಗ್ಗೆ

ಇಂಡೋನೇಷಿಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಅನುಭವಿ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್ ಸುತ್ತು ಪ್ರವೇಶಿಸಿದ್ದಾರೆ.
ಸೈನಾ ನೆಹ್ವಾಲ್
ಸೈನಾ ನೆಹ್ವಾಲ್
ಜಕಾರ್ತಾ: ಇಂಡೋನೇಷಿಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಅನುಭವಿ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್ ಸುತ್ತು ಪ್ರವೇಶಿಸಿದ್ದಾರೆ.
ಚೀನಾದ ಹಿ ಬಿಂಗ್ಜಿಯಾವೋ ಅವರ ವಿರುದ್ಧ ಕಠಿಣ ಸ್ಪರ್ಧೆಯಲ್ಲಿ ಗೆದ್ದು ಸೈನಾ ಪಂದ್ಯಾವಳಿಯ ಅಂತಿಮ ಸುತ್ತು ಪ್ರವೇಶಿಸಿದ್ದಾರೆ. ಆರನೇ ಶ್ರೇಯಾಂಕಿತೆ ಚೀನಾ ಆಟಗಾರ್ತಿಯ ವಿರುದ್ಧ ಸೈನಾ 18-21 21-12 21-18  ಸೆಟ್ ಗಳಿಂದ ಗೆಲುವು ಸಾಧಿಸಿದ್ದಾರೆ.
ವಿಶ್ವದ ಅಗ್ರ ಎಂಟನೇ ಶ್ರೇಯಾಂಕಿತರಾಗಿರುವ ಸೈನಾ ತಮ್ಮ ಅಂತಿಮ ಸುತ್ತಿನ ಪಂದ್ಯದಲ್ಲಿ ಚೀನಾದ   ಚೆನ್ ಯೂಫೀ ಅಥವಾಮೂರು ಬಾರಿಯ ವಿಶ್ವ ಚಾಂಪಿಯನ್ ಸ್ಪೇನ್ ನ ರೋಲಿನಾ ಮರಿನ್ ಅವರನ್ನು ಎದುರಿಸಬೇಕಿದೆ.
2018ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ, ಏಷ್ಯನ್ ಗೇಮ್ಸ್ ನಲ್ಲಿ ಕಂಚು ಗೆದ್ದಿದ್ದ ಸೈನಾ ಕಳೆದ ವರ್ಷ ಡೆನ್ಮಾರ್ಕ್, ಇಂಡೋನೇಷಿಯಾ ಮಾಸ್ಟರ್ಸ್ ಮತ್ತು ಸೈಯದ್ ಮೋದಿ ಇಂಟರ್ ನ್ಯಾಷನಲ್ ಪಂದ್ಯಾವಳಿಯಲ್ಲಿ ಫೈನಲ್ ತಲುಪಿ ಸಾಧನೆ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com