ಬ್ಯಾಡ್ಮಿಂಟನ್: ಸ್ಕಾಟೀಷ್ ಓಪನ್ ಮುಡಿಗೇರಿಸಿಕೊಂಡ ಲಕ್ಷ್ಯಸೇನ್, 3 ತಿಂಗಳಲ್ಲಿ ಇದು 4ನೇ ಪ್ರಶಸ್ತಿ!

ಭಾರತದ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯಸೇನ್ ಇಲ್ಲಿ ಮುಕ್ತಾಯವಾದ ಸ್ಕಾಟೀಷ್ ಓಪನ್ ಪುರುಷರ ಸಿಂಗಲ್ಸ್‌ ಪ್ರಶಸ್ತಿ ಮುಡಿಗೇರಿಸಿಕೊಂಡರು. ಇದರೊಂದಿಗೆ ಕೇವಲ ಮೂರು ತಿಂಗಳ ಅಂತರದಲ್ಲಿ ನಾಲ್ಕನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದರು.
ಲಕ್ಷ್ಯ ಸೇನ್
ಲಕ್ಷ್ಯ ಸೇನ್
Updated on: 

ಗ್ಲಾಸ್ಗೌ: ಭಾರತದ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯಸೇನ್ ಇಲ್ಲಿ ಮುಕ್ತಾಯವಾದ ಸ್ಕಾಟೀಷ್ ಓಪನ್ ಪುರುಷರ ಸಿಂಗಲ್ಸ್‌ ಪ್ರಶಸ್ತಿ ಮುಡಿಗೇರಿಸಿಕೊಂಡರು. ಇದರೊಂದಿಗೆ ಕೇವಲ ಮೂರು ತಿಂಗಳ ಅಂತರದಲ್ಲಿ ನಾಲ್ಕನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದರು.

ವಿಶ್ವದ 41ನೇ ಶ್ರೇಯಾಂಕಿತ ಲಕ್ಷ್ಯ ಸೇನ್ ಅವರು ಭಾನುವಾರ ತಡರಾತ್ರಿ 56 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ ಫೈನಲ್ಸ್‌ ಹಣಾಹಣಿಯಲ್ಲಿ ಬ್ರೆಜಿಲ್‌ನ ಯಗೋರ್ ಕೊಯೆಲ್ಹೋ ಅವರ ವಿರುದ್ಧ 18-21, 21-18, 21-19 ಅಂತರದಲ್ಲಿ ಗೆದ್ದು ಸ್ಕಾಟೀಷ್ ಪ್ರಶಸ್ತಿಗೆ ಭಾಜನರಾದರು. 

ಫೈನಲ್ಸ್‌ ಹಣಾಹಣಿಯ ಮೊದಲನೇ ಸೆಟ್‌ನ ಆರಂಭದಲ್ಲಿ ಲಕ್ಷ್ಯ ಸೇನ್ ಎಡವಿದ್ದರು. ಆದರೂ, 10-8 ಮುನ್ನಡೆ ಗಳಿಸಿದ್ದರು. ನಂತರ, ಎಚ್ಚೆತ್ತುಕೊಂಡು ಬ್ರೆಜಿಲ್ ಆಟಗಾರ ಆರು ನೇರ ಅಂಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡರು. ಇದರ ಫಲವಾಗಿ ಅವರು 21-18 ಅಂತರದಲ್ಲಿ ಮೊದಲನೇ ಸೆಟ್‌ನಲ್ಲಿ ಜಯ ಸಾಧಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com