ಗಾಯದ ಸಮಸ್ಯೆಯೊಂದಿಗೇ ಟೆನ್ನಿಸ್ ಗೆ ಆ್ಯಂಡಿಮರ್ರೆ ನೋವಿನ ವಿದಾಯ

ಟೆನ್ನಿಸ್ ಲೋಕದ ಬ್ರಿಟೀಷ್ ದಂತಕಥೆ ಆ್ಯಂಡಿ ಮರ್ರೆ ಆಸ್ಟ್ರೇಲಿಯನ್ ಓಪನ್ ನ ತಮ್ಮ ಮೊದಲ ಪಂದ್ಯದಲ್ಲೇ ನೀರಸ ಸೋಲು ಕಾಣುವ ಮೂಲಕ ತಮ್ಮ ವೃತ್ತಿಜೀವನಕ್ಕೆ ನೋವಿನ ವಿದಾಯ ಹೇಳಿದ್ದಾರೆ.
ಆ್ಯಂಡಿ ಮರ್ರೆ ವಿದಾಯ
ಆ್ಯಂಡಿ ಮರ್ರೆ ವಿದಾಯ
ಸಿಡ್ನಿ: ಟೆನ್ನಿಸ್ ಲೋಕದ ಬ್ರಿಟೀಷ್ ದಂತಕಥೆ ಆ್ಯಂಡಿ ಮರ್ರೆ ಆಸ್ಟ್ರೇಲಿಯನ್ ಓಪನ್ ನ ತಮ್ಮ ಮೊದಲ ಪಂದ್ಯದಲ್ಲೇ ನೀರಸ ಸೋಲು ಕಾಣುವ ಮೂಲಕ ತಮ್ಮ ವೃತ್ತಿಜೀವನಕ್ಕೆ ನೋವಿನ ವಿದಾಯ ಹೇಳಿದ್ದಾರೆ.
ಈ ಹಿಂದೆಯೇ ಆ್ಯಂಡಿಮರ್ರೆ ತಾವು ಆಸ್ಟ್ರೇಲಿಯನ್ ಓಪನ್ ಟೂರ್ನಿ ಬಳಿಕ ವಿದಾಯ ಘೋಷಣೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ಇಂದು ಟೂರ್ನಿಯ ತಮ್ಮ ಮೊದಲ ಪಂದ್ಯ ಎದುರಿಸಿದ ಮರ್ರೆ ಸ್ಪೈನ್ ಮೂಲದ 22ನೇ ಶ್ರೇಯಾಂಕದ ಆಟಗಾರ ರಾಬರ್ಟೊ ಬಟಿಸ್ಟಾ ಅಗಟ್ ವಿರುದ್ಧ 6-4, 6-4, 6-7 (5), 6-7 (4), 6-2 ನೇರ ಸೆಟ್ ಗಳ ಅಂತರದಲ್ಲಿ ಸೋಲು ಕಂಡರು.
ಪಂದ್ಯದ ಆರಂಭದಲ್ಲೇ ಸೊಂಟದ ನೋವಿನಿಂದ ಬಳಲಿದ ಮರ್ರೆ ಮೊದಲೆರಡು ಸೆಟ್ ಗಳಲ್ಲಿ ಹಿನ್ನಡೆ ಅನುಭವಿಸಿದರು. ಆದರೆ ಮೂರು ಮತ್ತು ನಾಲ್ಕನೇ ಸೆಟ್ ನಲ್ಲಿ ದಿಟ್ಟ ಉತ್ತರ ನೀಡಿದ್ದ ಮರ್ರೆ  6-7 (5), 6-7 (4) ಅಂತರದಲ್ಲಿ ಮೇಲುಗೈ ಸಾಧಿಸಿ ಪಂದ್ಯದಲ್ಲಿ ಸಮಬಲ ಸಾಧಿಸಿದರು. ಆದರೆ ಅಂತಿಮ ಸೆಟ್ ನಲ್ಲಿ ಮತ್ತೆ ಸೊಂಟದ ನೋವಿಗೆ ತುತ್ತಾದ ಮರ್ರೆ ಅಂತಿಮ ಸೆಟ್ ಅನ್ನು 6-2  ಪಾಯಿಂಟ್ಲ್ ಅಂತರದಲ್ಲಿ ಕೈ ಚೆಲ್ಲುವ ಮೂಲಕ ತಮ್ಮ ಮೊದಲ ಪಂದ್ಯದಲ್ಲೇ ಸೋಲು ಕಂಡರು.
ಆ ಮೂಲಕ ಮರ್ರೆ ಟೆನ್ನಿಸ್ ಕ್ರೀಡೆಗೆ ವಿದಾಯ ಹೇಳಿದ್ದು, ಮರ್ರೆ ವಿದಾಯಕ್ಕೆ ಟೆನ್ನಿಸ್ ಲೋಕ ಗೌರವ ಸಲ್ಲಿಕೆ ಮಾಡಿದೆ. ಈ ಬಗ್ಗೆ ಮಾತನಾಡಿರುವ ಸ್ಪೈನ್ ನ ಟೆನ್ನಿಸ್ ದಂತಕಥೆ, ಮರ್ರೆಯಂತಹ ಪ್ರತಿಭಾನ್ವಿತ ಆಟಗಾರ ಮತ್ತು ಸ್ನೇಹ ಜೀವಿಯನ್ನು ತಾವು ನೋಡಿಲ್ಲ. ಅವರ ಮುಂದಿನ ಜೀವನಕ್ಕೆ ಶುಭವಾಗಲಿ ಎಂದು ಶುಭ ಕೋರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com