ಡ್ರೈವಿಂಗ್ ಮಾಡುವಾಗ ಪೋನ್ ಬಳಕೆ: ಫುಟ್ಬಾಲ್ ಆಟಗಾರ ಡೇವಿಡ್ ಬೆಕ್ಹಾಮ್ ಗೆ 6 ತಿಂಗಳು ಬ್ಯಾನ್!

ಖ್ಯಾತ ಫುಟ್ಬಾಲ್ ಸೂಪರ್ ಸ್ಟಾರ್ ಡೇವಿಡ್ ಬೆಕ್ಹಾಮ್ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ.

Published: 10th May 2019 12:00 PM  |   Last Updated: 10th May 2019 12:51 PM   |  A+A-


David Beckham gets 6-month ban for using phone while driving

ಸಂಗ್ರಹ ಚಿತ್ರ

Posted By : SVN SVN
Source : The New Indian Express
ಲಂಡನ್: ಖ್ಯಾತ ಫುಟ್ಬಾಲ್ ಸೂಪರ್ ಸ್ಟಾರ್ ಡೇವಿಡ್ ಬೆಕ್ಹಾಮ್ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ.

ಮೂಲಗಳ ಪ್ರಕಾರ ಕಳೆದ ನವೆಂಬರ್ 21ರಂದು ಲಂಡನ್ ನಲ್ಲಿ 44 ವರ್ಷದ ಬೆಕ್ಹಾಮ್ ತಮ್ಮ ಐಶಾರಾಮಿ ಬೆಂಟ್ಲಿ ಕಾರನ್ನು ಚಲಾಯಿಸುವಾಗ ಮೊಬೈಲ್ ನಲ್ಲಿ ಮಾತನಾಡುತ್ತಾ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ದಕ್ಷಿಣ ಲಂಡನ್ ನ ಬ್ರೋಮ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸತತ ಆರು ತಿಂಗಳ ಸುಧೀರ್ಘ ವಿಚಾರಣೆ ಬಳಿಕ ತನ್ನ ತೀರ್ಪು ನೀಡಿದ್ದು, ಬೆಕ್ಹಾಮ ಅವರ ಚಾಲನಾ ಪರವಾನಗಿಯನ್ನು 6 ತಿಂಗಳ ಕಾಲ ಅಮಾನತು ಮಾಡಿ ಆದೇಶ ಹೊರಡಿಸಿದೆ.

ಇದಕ್ಕೂ ಮೊದಲು 2018ರಲ್ಲಿ ಬೆಕ್ಹಾಮ್ ಮತ್ತೊಂದು ಪ್ರಕರಣದಲ್ಲಿ ಸಿಲುಕಿದ್ದರು. 40 ಮೈಲಿ ವೇಗದಲ್ಲಿ ಚಲಿಸಬೇಕಾದ ರಸ್ತೆಯಲ್ಲಿ 59 ಮೈಲಿ ವೇಗದಲ್ಲಿ ಚಲಿಸಿ ರಸ್ತೆ ನಿಯಮ ಉಲ್ಲಂಘನೆ ಮಾಡಿ ಸಿಕ್ಕಿಬಿದ್ದಿದ್ದರು. 
Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp