ಮಲೇಷ್ಯಾ ಮಾಸ್ಟರ್ಸ್‌: ಕ್ವಾರ್ಟರ್ ಫೈನಲ್ ತಲುಪಿದ ಸೈನಾ ನೆಹ್ವಾಲ್, ಸಿಂಧು

ಭಾರತದ ಹಿರಿಯ ಬ್ಯಾಡ್ಮಿಂಟನ್ ಆಟಗಾರ್ತಿಯರಾದ ಪಿ.ವಿ ಸಿಂಧು ಹಾಗೂ ಸೈನಾ ನೆಹ್ವಾಲ್ ಅವರು ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಮಾಸ್ಟರ್ಸ್‌ ಟೂರ್ನಿಯ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. 
ಸೈನಾ ನೆಹ್ವಾಲ್ ಪಿವಿ ಸಿಂಧು
ಸೈನಾ ನೆಹ್ವಾಲ್ ಪಿವಿ ಸಿಂಧು
Updated on

ಕೌಲಾಲಂಪುರ: ಭಾರತದ ಹಿರಿಯ ಬ್ಯಾಡ್ಮಿಂಟನ್ ಆಟಗಾರ್ತಿಯರಾದ ಪಿ.ವಿ ಸಿಂಧು ಹಾಗೂ ಸೈನಾ ನೆಹ್ವಾಲ್ ಅವರು ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಮಾಸ್ಟರ್ಸ್‌ ಟೂರ್ನಿಯ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

ಗುರುವಾರ 38 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ಪ್ರೀ ಕ್ವಾರ್ಟರ್ ಫೈನಲ್ಸ್ ಹಣಾಹಣಿಯಲ್ಲಿ ಸೈನಾ ನೆಹ್ವಾಲ್ ಅವರು 25-23, 21-12 ಅಂತರದಲ್ಲಿ ಥಾಯ್ಲೆಂಡ್ ನ ಎನ್ ಸಿ ಯಂಗ್ ವಿರುದ್ಧ ಗೆದ್ದು ಅಂತಿಮ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ. 

ಮತ್ತೊಂದು ಮಹಿಳೆಯರ ಸಿಂಗಲ್ಸ್ ಅಂತಿಮ 16ರ ಹಂತದ ಪಂದ್ಯದಲ್ಲಿ ಪಾರಮ್ಯ ಮೆರೆದ ಒಲಿಂಪಿಕ್ಸ್ ಬೆಳ್ಳಿ ಪಶಸ್ತಿ ವಿಜೇತೆ ಪಿ.ವಿ ಸಿಂಧು ಅವರು ವಿಶ್ವದ 19ನೇ ಅಯಾ ಒಹೊರಿ ವಿರುದ್ಧ 21-19, 21-15 ಅಂತರದಲ್ಲಿ ಗೆದ್ದು ಕ್ವಾರ್ಟರ್ ಫೈನಲ್‌ ಗೆ ತಲುಪಿದರು.

ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಸವಾಲುಬಹುತೇಕ ಅಂತ್ಯವಾಗಿದೆ. ಭಾರತದ ಸಮೀರ್ ವರ್ಮಾ ಮಲೇಷ್ಯಾದ ಲೀ ಝೀ ಜಿಯಾ ವಿರುದ್ಧ 19-21, 20-22ರ ಅಂತರದಲ್ಲಿ ಸೋಲು ಕಂಡಿದ್ದಾರೆ. ಅದೇ ರೀತಿ ಇನ್ನೊಂದು ಪಂದ್ಯದಲ್ಲಿ ಭಾರತದ ಎಚ್‌ಎಸ್ ಪ್ರಣಯ್ ವಿಶ್ವದ ನಂ .1 ಆಟಗಾರ ಜಪಾನ್‌ನ ಕೆಂಟೊ ಮೊಮೊಟಾ ವಿರುದ್ಧ 14-21, 16-21ರ ಅಂತರದಲ್ಲಿ ಪರಾಜಿತರಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com