ಯುಎಸ್ ಓಪನ್: ಎರಡನೇ ಸುತ್ತಿನಲ್ಲಿ ಸುಮಿತ್ ನಗಾಲ್ ಗೆ ಸೋಲು

ಭಾರತದ ಯುವ ಆಟಗಾರ ಸುಮಿತ್ ನಗಾಲ್ ನ್ಯೂಯಾರ್ಕ್ ನಲ್ಲಿ ನಡೆಯುತ್ತಿರುವ ಅಮೆರಿಕ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನಲ್ಲಿ ಸೋತು ಟೂರ್ನಿಯಿಂದ ನಿರ್ಮಿಸಿದ್ದಾರೆ.
ಯುಎಸ್ ಓಪನ್: ಎರಡನೇ ಸುತ್ತಿನಲ್ಲಿ ಸುಮಿತ್ ನಗಾಲ್ ಗೆ ಸೋಲು
Updated on

ನ್ಯೂಯಾರ್ಕ್: ಭಾರತದ ಯುವ ಆಟಗಾರ ಸುಮಿತ್ ನಗಾಲ್ ನ್ಯೂಯಾರ್ಕ್ ನಲ್ಲಿ ನಡೆಯುತ್ತಿರುವ ಅಮೆರಿಕ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನಲ್ಲಿ ಸೋತು ಟೂರ್ನಿಯಿಂದ ನಿರ್ಮಿಸಿದ್ದಾರೆ.

ಗುರುವಾರ ತಡರಾತ್ರಿ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ 124ನೇ ರಾಂಕಿನ ಸುಮಿತ್ 3-6, 3-6, 2-6 ನೇರ ಸೆಟ್ ಗಳಿಂದ ವಿಶ್ವದ 3ನೇ ರಾಂಕಿನ ಆಸ್ಟ್ರೀಯಾದ ಡಾಮಿನಿಕ್ ಥೀಮ್ ವಿರುದ್ಧ ಪರಾಭವಗೊಂಡರು.

ವಿಶೇಷವೆಂದರೆ ತನ್ನ 27 ನೇ ಹುಟ್ಟುಹಬ್ಬವನ್ನು ಗುರುವಾರ ಆಚರಿಸಿಕೊಳ್ಳಲಿದ್ದ ಡಾಮಿನಿಕ್ ಥೀಮ್ ಅವರಿಗೆ ಈ ಗೆಲುವು ಹುಟ್ಟುಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. 

ಇದಕ್ಕೆ ಮುನ್ನ ನಗಾಲ್  ಅಮೆರಿಕದ ಬ್ರಾಡ್ಲಿ ಕ್ಲಾನ್ ಅವರನ್ನು ಮಣಿಸಿ ಯುಎಸ್ ಓಪನ್ ಎರಡನೇ ಸುತ್ತಿಗೆ ಪ್ರವೇಶಿಸಿದ್ದರು. ಈ ಮೂಲಕ ಏಖು ವರ್ಷದ ಬಳಿಕ ಪ್ರತಿಷ್ಠಿತ ಗ್ರ್ಯಾಂಡ್ ಸ್ಲಾಂ ಟೂರ್ನಿಯ ಎರಡನೇ ಸುತ್ತಿಗೆ ಪ್ರವೇಶಿಸಿದ ಭಾರತೀಯ ಆಟಗಾರರೆನಿಸಿಕೊಂಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com