ಐಎಸ್ಎಲ್: ಚೆನ್ನೈಯಿನ್ ಎಫ್ ಸಿ ವಿರುದ್ಧ ಬೆಂಗಳೂರು ಎಫ್ ಸಿ ಗೆ 1-0 ಗೋಲು ಜಯ

ನಾಯಕ ಸುನಿಲ್ ಛೆಟ್ರಿ (56ನೇ ನಿಮಿಷ)ಪೆನಾಲ್ಟಿ ಮೂಲಕ ಗಳಿಸಿದ ಏಕೈಕ ಗೋಲಿನಿಂದ ಚೆನ್ನೈಯಿನ್ ಎಫ್ ಸಿ ತಂಡವನ್ನು 1-0 ಗೋಲಿನಿಂದ ಮಣಿಸಿದ ಬೆಂಗಳೂರು ಎಫ್ ಸಿ ಹಿರೋ ಇಂಡಿಯನ್ ಸೂಪರ್ ಲೀಗ್ ನ ಏಳನೇ ಆವೃತ್ತಿಯಲ್ಲಿ ಮೊದಲ ಜಯ ಗಳಿಸಿದೆ.

Published: 05th December 2020 12:40 AM  |   Last Updated: 05th December 2020 12:40 PM   |  A+A-


Sunil_Chhetri1

ಸುನಿಲ್ ಛೆಟ್ರಿ

Posted By : Nagaraja AB
Source : UNI

ಗೋವಾ: ನಾಯಕ ಸುನಿಲ್ ಛೆಟ್ರಿ (56ನೇ ನಿಮಿಷ)ಪೆನಾಲ್ಟಿ ಮೂಲಕ ಗಳಿಸಿದ ಏಕೈಕ ಗೋಲಿನಿಂದ ಚೆನ್ನೈಯಿನ್ ಎಫ್ ಸಿ ತಂಡವನ್ನು 1-0 ಗೋಲಿನಿಂದ ಮಣಿಸಿದ ಬೆಂಗಳೂರು ಎಫ್ ಸಿ ಹಿರೋ ಇಂಡಿಯನ್ ಸೂಪರ್ ಲೀಗ್ ನ ಏಳನೇ ಆವೃತ್ತಿಯಲ್ಲಿ ಮೊದಲ ಜಯ ಗಳಿಸಿದೆ.

ಬಿಎಫ್ ಸಿ ಪೆನಾಲ್ಟಿ ವಲಯದಲ್ಲಿ ಚೆನ್ನೈ ಆಟಗಾರ ಮಾಡಿದ ಪ್ರಮಾದವನ್ನು ಗುರುತಿಸುವಲ್ಲಿ ರೆಫರಿ ಯಶಸ್ವಿಯಾದರು. ಇದರಿಂದ ಬಿಎಫ್ ಸಿಗೆ ಪೆನಾಲ್ಟಿ ಅವಕಾಶ ಲಭಿಸಿತು. ನಾಯಕ ಸುನಿಲ್ ಛೆಟ್ರಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು 56ನೇ ನಿಮಿಷದಲ್ಲಿ ತಂಡಕ್ಕೆ ಮುನ್ನಡೆ ಕಲ್ಪಿಸಿದರು.

ಚೆನ್ನೈಯಿನ್ ಗೋಲ್ ಕೀಪರ್ ವಿಶಾಲ್ ತೈತ್ ಚೆಂಡು ತಮ್ಮ ಎಡಭಾಗಕ್ಕೆ ಬರಬಹುದು ಎಂದು ಊಹಿಸಿದ್ದರು. ಆದರೆ, ಸುನಿಲ್ ಛೆಟ್ರಿ ಬಲಭಾಗಕ್ಕೆ ಚಂಡನ್ನು ತಳ್ಳುವಲ್ಲಿ ಸಫಲರಾದರು. ಇದು ಛೆಟ್ರಿ ಅವರ ಋತುವಿನ ಮೊದಲ ಗೋಲು. ಬೆಂಗಳೂರಿಗೆ 60ನೇ ಮತ್ತು ಚೆನ್ನೈಯಿನ್ ಗೆ 64ನೇ ನಿಮಿಷದಲ್ಲಿ ನೇರವಾಗಿ ಗೋಲು ಗಳಿಸುವ ಅವಕಾಶವಿತ್ತು. ಆದರೆ, ಇದರಲ್ಲಿ ಅಂಕ ಪಡೆಯುವಲ್ಲಿ ವಿಫಲವಾಯಿತು.

Stay up to date on all the latest ಕ್ರೀಡೆ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp