ರುಪೀಂದರ್ ಪಾಲ್ ಸಿಂಗ್ ಬೆನ್ನಲ್ಲೇ ಬಿರೇಂದ್ರ ಲಾಕ್ರ ಕೂಡಾ ಅಂತಾರಾಷ್ಟ್ರೀಯ ಹಾಕಿಗೆ ನಿವೃತ್ತಿ

ರೂಪೀಂದರ್ ಪಾಲ್ ಸಿಂಗ್ ಅಂತಾರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ, ಮತ್ತೋರ್ವ ಭಾರತೀಯ ಹಾಕಿ ಆಟಗಾರ ಬಿರೇಂದ್ರ ಲಾಕ್ರ ಕೂಡಾ ಗುರುವಾರ ಹಾಕಿ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ್ದಾರೆ. 
ಬಿರೇಂದ್ರ ಲಾಕ್ರ
ಬಿರೇಂದ್ರ ಲಾಕ್ರ
Updated on: 

ನವದೆಹಲಿ: ರೂಪೀಂದರ್ ಪಾಲ್ ಸಿಂಗ್ ಅಂತಾರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ, ಮತ್ತೋರ್ವ ಭಾರತೀಯ ಹಾಕಿ ಆಟಗಾರ ಬಿರೇಂದ್ರ ಲಾಕ್ರ ಕೂಡಾ ಗುರುವಾರ ಹಾಕಿ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ್ದಾರೆ. 

ಹಾಕಿ ಇಂಡಿಯಾದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಲಕ್ರಾ ನಿವೃತ್ತಿಯನ್ನು ಪ್ರಕಟಿಸಲಾಗಿದೆ. ಸಾಲಿಡ್ ಡಿಪೆಂಡರ್ ಮತ್ತು ಭಾರತದ ಹಾಕಿ ತಂಡದ ಪ್ರಭಾವಶಾಲಿ ಆಟಗಾರರಲ್ಲಿ ಒಬ್ಬರಾಗಿದ್ದ ಒಡಿಶಾದ ಸ್ಟಾರ್ ರಾಷ್ಟ್ರೀಯ ತಂಡದಿಂದ ನಿವೃತ್ತ ಘೋಷಿಸಿರುವುದಾಗಿ ಹಾಕಿ ಇಂಡಿಯಾ ಟ್ವೀಟ್ ಮಾಡಿದೆ.

31 ವರ್ಷದ ಡಿಪೆಂಡರ್ ಲಾಕ್ರ ಇತ್ತೀಚಿಗೆ ಟೋಕಿಯೊದಲ್ಲಿ ನಡೆದ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚು ಪದಕ ಗೆದ್ದ ಟೀಂ ಇಂಡಿಯಾದ ಭಾಗವಾಗಿದ್ದರು. 2014 ರ ಚಿನ್ನದ ಪದಕ ವಿಜೇತ ಇಂಚಿಯಾನ್ ಏಷ್ಯನ್ ಗೇಮ್ಸ್ ತಂಡದ ಭಾಗವಾಗಿದ್ದರು ಅಲ್ಲದೇ,  2018 ಜಕಾರ್ತದಲ್ಲಿ ಕಂಚು ಗೆದ್ದ ತಂಡದಲ್ಲಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com