ಹಿಂದು-ಮುಸ್ಲಿಂ ಮುಖ್ಯವಲ್ಲ; ನಾನು ಪ್ರತಿನಿಧಿಸುತ್ತಿರುವುದು ಸಮುದಾಯವನ್ನಲ್ಲ, ಬದಲಿಗೆ ಭಾರತ ದೇಶವನ್ನು: ನಿಖತ್ ಜರೀನ್
ಕ್ರೀಡಾಪಟುವಾಗಿ ನಾನು ಭಾರತವನ್ನು ಪ್ರತಿನಿಧಿಸುತ್ತೇನೆ, ನನಗೆ ಹಿಂದೂ-ಮುಸ್ಲಿಂ ಮುಖ್ಯವಲ್ಲ. ನಾನು ಸಮುದಾಯವನ್ನು ಪ್ರತಿನಿಧಿಸುತ್ತಿಲ್ಲ ಬದಲಿಗೆ ನನ್ನ ದೇಶವನ್ನು ಪ್ರತಿನಿಧಿಸುತ್ತಿದ್ದೇನೆ ಇದು ವಿಶ್ವ ಚಾಂಪಿಯನ್ ಬಾಕ್ಸರ್ ನಿಖತ್ ಜರೀನ್ ಮಾತು. ಆಕೆಯ ಸಾಧನೆಗಳಿಗಿಂತ ಆಕೆಯ ಧಾರ್ಮಿಕ ಹಿನ್ನೆಲೆಯ ಬಗ್ಗೆ ಮಾತನಾಡುತ್ತಿರುವ ಬಗ್ಗೆ ಮಾಧ್ಯಮದವರು ಕೇಳಿದಾಗ ಈಕೆಯ ದಿಟ್ಟ
Published: 14th June 2022 12:11 PM | Last Updated: 14th June 2022 01:12 PM | A+A A-

ಭಾರತದ ಬಾಕ್ಸರ್ ನಿಖತ್ ಜರೀನ್
ನವದೆಹಲಿ: ಕ್ರೀಡಾಪಟುವಾಗಿ ನಾನು ಭಾರತವನ್ನು ಪ್ರತಿನಿಧಿಸುತ್ತೇನೆ, ನನಗೆ ಹಿಂದೂ-ಮುಸ್ಲಿಂ ಮುಖ್ಯವಲ್ಲ. ನಾನು ಸಮುದಾಯವನ್ನು ಪ್ರತಿನಿಧಿಸುತ್ತಿಲ್ಲ ಬದಲಿಗೆ ನನ್ನ ದೇಶವನ್ನು ಪ್ರತಿನಿಧಿಸುತ್ತಿದ್ದೇನೆ ಇದು ವಿಶ್ವ ಚಾಂಪಿಯನ್ ಬಾಕ್ಸರ್ ನಿಖತ್ ಜರೀನ್ ಮಾತು. ಆಕೆಯ ಸಾಧನೆಗಳಿಗಿಂತ ಆಕೆಯ ಧಾರ್ಮಿಕ ಹಿನ್ನೆಲೆಯ ಬಗ್ಗೆ ಮಾತನಾಡುತ್ತಿರುವ ಬಗ್ಗೆ ಮಾಧ್ಯಮದವರು ಕೇಳಿದಾಗ ಈಕೆಯ ದಿಟ್ಟ ಉತ್ತರವಿದು.
"ನನ್ನ ದೇಶಕ್ಕಾಗಿ ಪದಕ ಗೆಲ್ಲಲು ನನಗೆ ಸಂತೋಷವಾಗಿದೆ" ಎಂದು ತೆಲಂಗಾಣ ಮೂಲದ 25 ವರ್ಷದ ಕ್ರೀಡಾಪಟು ಸಂವಾದ ವೇಳೆ ಹೇಳಿದ್ದಾರೆ. ಕ್ರೀಡಾಕೂಟಗಳಲ್ಲಿ ಮಾನಸಿಕ ಒತ್ತಡವನ್ನು ನಿಭಾಯಿಸಲು ಬೆಂಬಲದ ಅಗತ್ಯವನ್ನು ಒತ್ತಿ ಹೇಳಿದರು.
ಜರೀನ್ ಕಳೆದ ತಿಂಗಳು ಟರ್ಕಿಯಲ್ಲಿ ನಡೆದ ಚಾಂಪಿಯನ್‌ಶಿಪ್‌ನ ಫ್ಲೈವೇಟ್ ವಿಭಾಗದಲ್ಲಿ ಥಾಯ್ಲೆಂಡ್‌ನ ಜಿಟ್‌ಪಾಂಗ್ ಜುತಾಮಾಸ್ ಅವರನ್ನು 5-0 ಅಂತರದಿಂದ ಸೋಲಿಸಿ ವಿಶ್ವ ಚಾಂಪಿಯನ್ ಕಿರೀಟವನ್ನು ಅಲಂಕರಿಸಿದ ಐದನೇ ಭಾರತೀಯ ಮಹಿಳೆಯಾಗಿದ್ದಾರೆ.
ಇದನ್ನೂ ಓದಿ: ನಿಮ್ಮ ಆಶೀರ್ವಾದವಿಲ್ಲದೆ ಗೆಲುವು ಅಪೂರ್ಣ: ಮೇರಿ ಕೋಮ್ ಜೊತೆ ನಿಖತ್ ಜರೀನ್ ಫೋಟೋ ವೈರಲ್
ಸಾಂಪ್ರದಾಯಿಕ ಸಮಾಜವಾದ ಮುಸ್ಲಿಂ ಸಮುದಾಯದಿಂದ ಬಂದಿರುವ ಜರೀನ್ ಬಾಕ್ಸಿಂಗ್‌ನಲ್ಲಿ ವೃತ್ತಿಜೀವನಕ್ಕೆ ಸಾಮಾಜಿಕ ಪಿಡುಗನ್ನು ಮೊದಲು ತೊಲಗಿಸಬೇಕು ಎಂದಿದ್ದಾರೆ.
ಭಾರತೀಯ ಕ್ರೀಡಾಪಟುಗಳಲ್ಲಿ ಮಾನಸಿಕ ಒತ್ತಡ ಬಹಳವಾಗಿದ್ದು, ಅದನ್ನು ನಿಭಾಯಿಸುವುದನ್ನು ಕ್ರೀಡಾಪಟುಗಳು ಕಲಿಯಬೇಕಿದೆ, ಈ ನಿಟ್ಟಿನಲ್ಲಿ ಆದ್ಯತೆ ತರಬೇತಿ ಮುಖ್ಯ ಎಂದಿದ್ದಾರೆ. ಭಾರತೀಯ ಅಥ್ಲೀಟ್‌ಗಳು ನಿಯಮಿತ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಪ್ರವೃತ್ತಿಯನ್ನು ಹೊಂದಿದ್ದಾರೆ ಆದರೆ ಒಲಿಂಪಿಕ್ಸ್ ಅಥವಾ ವಿಶ್ವ ಚಾಂಪಿಯನ್‌ಶಿಪ್‌ನಂತಹ ದೊಡ್ಡ ಹಂತದಲ್ಲಿ ಎಡವುತ್ತಾರೆ.
ನಮ್ಮ ಭಾರತೀಯ ಬಾಕ್ಸರ್‌ಗಳು ತುಂಬಾ ಪ್ರತಿಭಾವಂತರು, ನಾವು ಯಾರಿಗೂ ಕಡಿಮೆ ಇಲ್ಲ. ನಮ್ಮಲ್ಲಿ ಶಕ್ತಿ, ವೇಗ ಮತ್ತು ಶಕ್ತಿ..ಎಲ್ಲವೂ ಇದೆ ಎಂದರು. ಎತ್ತರಕ್ಕೆ ತಲುಪಿದಾಗ ಭಾರತೀಯ ಬಾಕ್ಸರ್‌ಗಳಿಗೆ ಮಾನಸಿಕ ಒತ್ತಡವನ್ನು ನಿಭಾಯಿಸಲು ತರಬೇತಿ ನೀಡಬೇಕು ಎಂದರು.
ಇದನ್ನೂ ಓದಿ: ವಿಶ್ವ ಬಾಕ್ಸಿಂಗ್ ಚಾಂಪಿಯನ್ ಷಿಪ್: ಭಾರತದ ನಿಖತ್ ಜರೀನ್ ಚಾಂಪಿಯನ್!
ಕಳೆದ ತಿಂಗಳು ಫ್ಲೈವೇಟ್ ಸ್ಪರ್ಧೆಯಲ್ಲಿ ವಿಶ್ವ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡ ಜರೀನ್, ಜುಲೈ 28 ರಿಂದ ಪ್ರಾರಂಭವಾಗುವ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್‌ಗೆ ಸಹ ಸ್ಥಾನ ಪಡೆದಿದ್ದಾರೆ.