ಸ್ಯಾಫ್ ಫುಟ್‌ಬಾಲ್‌ ಟೂರ್ನಿ: ಲೆಬನಾನ್‌ ಮಣಿಸಿ ಫೈನಲ್‌ಗೆ ಭಾರತ ಲಗ್ಗೆ

ಸ್ಯಾಫ್ ಫುಟ್‌ಬಾಲ್‌ ಟೂರ್ನಿಯಲ್ಲಿ ಭಾರತದ ಜೈತ್ರ ಯಾತ್ರೆ ಮುಂದುವರೆದಿದ್ದು, ಲೆಬನಾನ್‌ ತಂಡವನ್ನು ಮಣಿಸಿದ ಚೆಟ್ರಿ ನೇತೃತ್ವದ ಭಾರತ ತಂಡ ಫೈನಲ್ ಗೆ ಲಗ್ಗೆ ಇಟ್ಟಿದೆ.
ಚೆಟ್ರಿ ಬಳಗಕ್ಕೆ ಭರ್ಜರಿ ಜಯ
ಚೆಟ್ರಿ ಬಳಗಕ್ಕೆ ಭರ್ಜರಿ ಜಯ

ಬೆಂಗಳೂರು: ಸ್ಯಾಫ್ ಫುಟ್‌ಬಾಲ್‌ ಟೂರ್ನಿಯಲ್ಲಿ ಭಾರತದ ಜೈತ್ರ ಯಾತ್ರೆ ಮುಂದುವರೆದಿದ್ದು, ಲೆಬನಾನ್‌ ತಂಡವನ್ನು ಮಣಿಸಿದ ಚೆಟ್ರಿ ನೇತೃತ್ವದ ಭಾರತ ತಂಡ ಫೈನಲ್ ಗೆ ಲಗ್ಗೆ ಇಟ್ಟಿದೆ.

ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ಸೇರಿದ್ದ ಸುಮಾರು 20 ಸಾವಿರ ಪ್ರೇಕ್ಷಕರನ್ನು ಮೈನವಿರೇಳಿಸುವಂತೆ ಮಾಡಿದ ಆತಿಥೇಯ ತಂಡ, ದಾಖಲೆಯ 13ನೇ ಬಾರಿಗೆ ಪ್ರಶಸ್ತಿ ಸುತ್ತು ತಲುಪಿದೆ. ಪೆನಾಲ್ಟಿ ಶೂಟೌಟ್‌ನಲ್ಲಿ ಲೆಬನಾನ್‌ ತಂಡವನ್ನು 4–2 ರಲ್ಲಿ ಮಣಿಸಿದ ಭಾರತ ತಂಡ, ಸ್ಯಾಫ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಫೈನಲ್ ಪ್ರವೇಶಿಸಿತು. ನಿಗದಿತ ಹಾಗೂ ಹೆಚ್ಚುವರಿ ಅವಧಿಯ ಆಟದಲ್ಲಿ ಗೋಲು ದಾಖಲಾಗದ ಕಾರಣ ಪೆನಾಲ್ಟಿ ಶೂಟೌಟ್‌ ಮೊರೆಹೋಗಲಾಯಿತು. ಭಾರತ ತಂಡದ ಪರ ನಾಯಕ ಸುನಿಲ್ ಚೆಟ್ರಿ, ಅನ್ವರ್‌ ಅಲಿ, ಮಹೇಶ್‌ ಸಿಂಗ್‌ ಮತ್ತು ಉದಾಂತ ಸಿಂಗ್‌ ಅವರು ಶೂಟೌಟ್‌ನಲ್ಲಿ ಚೆಂಡನ್ನು ಗುರಿ ಸೇರಿಸಿದರು.

ಲೆಬನಾನ್‌ ತಂಡದ ಪರ ಹಸನ್‌ ಮತೂಕ್‌ ಅವರ ಮೊದಲ ಕಿಕ್ಅನ್ನು ಭಾರತದ ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್‌ ಸಂಧು ಎಡಕ್ಕೆ ನೆಗೆದು ತಡೆದರು. ಎರಡು ಮತ್ತು ಮೂರನೇ ಕಿಕ್‌ಗಳಲ್ಲಿ ಗೋಲುಗಳು ಬಂದವು. ಖಲೀಲ್‌ ಬದೆರ್‌ ಅವರ ನಾಲ್ಕನೇ ಕಿಕ್‌ನಲ್ಲಿ ಚೆಂಡು ಗೋಲ್‌ಪೋಸ್ಟ್‌ ಮೇಲಿಂದ ಹೊರಕ್ಕೆ ಹೋಗುತ್ತಿದ್ದಂತೆಯೇ, ಭಾರತದ ಆಟಗಾರರು ಸಂಭ್ರಮಿಸಿದರು. ಪ್ರೇಕ್ಷಕರು ಕುಣಿದು, ಗೆಲುವಿನ ಕೇಕೆ ಹಾಕಿದರು.  

13ನೇ ಬಾರಿ ಫೈನಲ್‌ ಪ್ರವೇಶ 
ಭಾರತ ತಂಡ ಸ್ಯಾಫ್ ಚಾಂಪಿಯನ್‌ಷಿಪ್‌ನಲ್ಲಿ 13 ನೇ ಬಾರಿ ಫೈನಲ್ ಪ್ರವೇಶಿಸಿದೆ. ಒಟ್ಟಾರೆಯಾಗಿ ಇದು 14ನೇ ಟೂರ್ನಿ ಆಗಿದ್ದು, ಒಮ್ಮೆ ಮಾತ್ರ ಪ್ರಶಸ್ತಿ ಸುತ್ತು ತಲುಪಲು ವಿಫಲವಾಗಿತ್ತು. 1995 ರಲ್ಲಿ ಮೂರನೇ ಸ್ಥಾನ ಗಳಿಸಿತ್ತು. ಭಾರತ ತಂಡ 8 ಬಾರಿ ಚಾಂಪಿಯನ್ ಹಾಗೂ 4 ಸಲ ರನ್ನರ್ಸ್ ಆಪ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com