ಸ್ಯಾಫ್ ಚಾಂಪಿಯನ್ಸ್ ಫೈನಲ್; ಕುವೈತ್ ಮಣಿಸಿದ ಭಾರತ, ದಾಖಲೆಯ 9ನೇ ಬಾರಿಗೆ ಟೀಂ ಇಂಡಿಯಾಗೆ ಕಿರೀಟ

ಸ್ಯಾಫ್ ಚಾಂಪಿಯನ್ಸ್ ಫೈನಲ್ ನಲ್ಲಿ ಭಾರತದ ಜೈತ್ರಯಾತ್ರೆ ಮುಂದುವರೆದಿದ್ದು, ಫೈನಲ್ ಪಂದ್ಯದಲ್ಲಿ ಕುವೈತ್ ಮಣಿಸಿದ ಟೀಂ ಇಂಡಿಯಾ 9ನೇ ಬಾರಿಗೆ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ.
ಕುವೈತ್ ಮಣಿಸಿದ ಭಾರತ
ಕುವೈತ್ ಮಣಿಸಿದ ಭಾರತ

ಬೆಂಗಳೂರು: ಸ್ಯಾಫ್ ಚಾಂಪಿಯನ್ಸ್ ಫೈನಲ್ ನಲ್ಲಿ ಭಾರತದ ಜೈತ್ರಯಾತ್ರೆ ಮುಂದುವರೆದಿದ್ದು, ಫೈನಲ್ ಪಂದ್ಯದಲ್ಲಿ ಕುವೈತ್ ಮಣಿಸಿದ ಟೀಂ ಇಂಡಿಯಾ 9ನೇ ಬಾರಿಗೆ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ.

ಇಂದು ನಡೆದ ಜಿದ್ದಾಜಿದ್ದಿಯ ಕಾದಾಟದಲ್ಲಿ ಬ್ಲ್ಯೂ ಟೈಗರ್ಸ್‌ ಖ್ಯಾತಿಯ ಭಾರತ ಫುಟ್‌ಬಾಲ್‌ ತಂಡ 2023ರ ಸಾಲಿನ ಸ್ಯಾಫ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದೆ. ಮಂಗಳವಾರ ಶ್ರೀಕಂಠೀರವ ಮೈದಾನದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ ಕುವೈತ್‌ ತಂಡವನ್ನು ಸೋಲಿಸಿ 9ನೇ ಬಾರಿಗೆ ಚಾಂಪಿಯನ್‌ ಆಯಿತು.

ನಿಗದಿತ ಅವಧಿಯಲ್ಲಿ ಪಂದ್ಯ 1-1 ಗೋಲುಗಳಿಂದ ಡ್ರಾ ಕಂಡಿದ್ದರೆ, ಫಲಿತಾಂಶ ನಿರ್ಣಯಕ್ಕಾಗಿ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತ 5-4 ಗೋಲುಗಳಿಂದ ಕುವೈತ್‌ ತಂಡವನ್ನು ಮಣಿಸಿತು. ಪೆನಾಲ್ಟಿ ಶೂಟೌಟ್‌ನ ತಲಾ ಐದು ಅವಕಾಶ ಮುಕ್ತಾಯವಾದಾಗ ಎರಡೂ ತಂಡಗಳು 4-4 ಗೋಲುಗಳ ಸಮಬಲ ಕಂಡಿತ್ತು. ಬಳಿಕ ನಡೆದ ಸಡನ್‌ ಡೆತ್‌ನಲ್ಲಿ ಕುವೈತ್‌ನ ಖಲೀದ್‌ ಎಲ್‌ ಅಬ್ರಾಹಂ ಗೋಲನ್ನು ಮಿಸ್‌ ಮಾಡಿದರೆ, ಭಾರತದ ಪರವಾಗಿ ಎನ್‌.ಮಹೇಶ್‌ ಸಿಂಗ್‌ ಗೋಲು ಸಿಡಿಸಿದರು. 

ಅದರೊಂದಿಗೆ ಭಾರತ ತಂಡ 9ನೇ ಬಾರಿಗೆ ಟ್ರೋಫಿ ಎತ್ತಿ ಹಿಡಿಯಿತು.ಅದಲ್ಲದೆ, ಭಾರತಕ್ಕೆ ಇದು ಸತತ 2ನೇ ಸ್ಯಾಫ್‌ ಗೆಲುವಾಗಿದೆ. ಕಳೆದ ಬಾರಿ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡ ಮಾಲ್ಡೀವ್ಸ್‌ ವಿರುದ್ಧ ಗೆಲುವು ಕಂಡಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com