Carlos Alcaraz
Carlos Alcaraz

ನೊವಾಕ್ ಜೊಕೋವಿಕ್ ಮಣಿಸಿ ಮೊದಲ ಬಾರಿ ವಿಂಬಲ್ಡನ್ ಮುಡಿಗೇರಿಸಿಕೊಂಡ ಕಾರ್ಲೋಸ್ ಅಲ್ಕರಾಜ್

ಟೆನಿಸ್ ನ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ಸ್ ನಲ್ಲಿ ಹಾಲಿ ಚಾಂಪಿಯನ್ ನೊವಾಕ್ ಜೊಕೋವಿಕ್ ನ್ನು ಮಣಿಸಿರುವ, ಮೊದಲ ಬಾರಿಗೆ ಫೈನಲ್ಸ್ ಪ್ರವೇಶಿಸಿದ್ದ ಕಾರ್ಲೋಸ್ ಅಲ್ಕರಾಜ್ ವಿಂಬಲ್ಡನ್ ನ್ನು ಮುಡಿಗೇರಿಸಿಕೊಂಡಿದ್ದಾರೆ.

ಲಂಡನ್: ಟೆನಿಸ್ ನ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ಸ್ ನಲ್ಲಿ ಹಾಲಿ ಚಾಂಪಿಯನ್ ನೊವಾಕ್ ಜೊಕೋವಿಕ್ ನ್ನು ಮಣಿಸಿರುವ, ಮೊದಲ ಬಾರಿಗೆ ಫೈನಲ್ಸ್ ಪ್ರವೇಶಿಸಿದ್ದ ಕಾರ್ಲೋಸ್ ಅಲ್ಕರಾಜ್ ವಿಂಬಲ್ಡನ್ ನ್ನು ಮುಡಿಗೇರಿಸಿಕೊಂಡಿದ್ದಾರೆ.
 
ಈ ಪಂದ್ಯ ಬ್ಯಾಟಲ್ ಆಫ್ ಜನರೇಷನ್ ಎಂದೇ ವಿಶ್ಲೇಷಿಸಲ್ಪಟ್ಟಿತ್ತು. ನೊವಾಕ್ ಜೊಕೋವಿಕ್ ಅತಿ ಹೆಚ್ಚು ಅನುಭವ ಹೊಂದಿದ್ದರೆ, ಕಾರ್ಲೋಸ್ ಅಲ್ಕರಾಜ್ ಅತ್ಯಂತ ಕಿರಿಯ ಹಾಗೂ ಮೊದಲ ಬಾರಿಗೆ ವಿಂಬಲ್ಡನ್ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದರು. 

5 ಸೆಟ್ ಗಳಲ್ಲಿ ನಾಕ್ ಜೊಕೋವಿಕ್ ಅವರನ್ನು ಮಣಿಸಿರುವ  ಕಾರ್ಲೋಸ್ ಅಲ್ಕರಾಜ್, ಕಳೆದ ವರ್ಷ ಯುಎಸ್ ಓಪನ್ ಟೈಟಲ್ ನ್ನು ಗೆದ್ದಿದ್ದರು ಈಗ ಪುರುಷರ ವಿಭಾಗದಲ್ಲಿ ವಿಂಬಲ್ಡನ್ ನ್ನು ಮುಡಿಗೇರಿಸಿಕೊಂಡ 3 ನೇ ಅತ್ಯಂತ ಕಿರಿಯ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com