70 ವಯಸ್ಸಿನಲ್ಲಿ 3ನೇ ಮದುವೆಯಾದ WWE ಲೆಜೆಂಡ್ ಹಲ್ಕ್ ಹೊಗನ್, 'ವಧು' ಯಾರು ಗೊತ್ತಾ?

ಅಮೆರಿಕದ ನಿವೃತ್ತ ವೃತ್ತಿಪರ ಫೈಟರ್ ಟೆರ್ರಿ ಜೀನ್ ಬೊಲಿಯಾ ಅಲಿಯಾಸ್ WWE ಲೆಜೆಂಡ್ ಹಲ್ಕ್ ಹೊಗನ್ 3ನೇ ಬಾರಿಗೆ ಮದುವೆಯಾಗಿದ್ದು, ತಮ್ಮ 45 ವರ್ಷದ ಗೆಳತಿ ಸ್ಕೈ ಡೈಲಿ ಅವರನ್ನು ವರಿಸಿದ್ದಾರೆ.
ಹಲ್ಕ್ ಹೊಗನ್ ಮತ್ತು ಸ್ಕೈ ಡೈಲಿ
ಹಲ್ಕ್ ಹೊಗನ್ ಮತ್ತು ಸ್ಕೈ ಡೈಲಿ

ವಾಷಿಂಗ್ಟನ್: ಅಮೆರಿಕದ ನಿವೃತ್ತ ವೃತ್ತಿಪರ ಫೈಟರ್ ಟೆರ್ರಿ ಜೀನ್ ಬೊಲಿಯಾ ಅಲಿಯಾಸ್ WWE ಲೆಜೆಂಡ್ ಹಲ್ಕ್ ಹೊಗನ್ 3ನೇ ಬಾರಿಗೆ ಮದುವೆಯಾಗಿದ್ದು, ತಮ್ಮ 45 ವರ್ಷದ ಗೆಳತಿ ಸ್ಕೈ ಡೈಲಿ ಅವರನ್ನು ವರಿಸಿದ್ದಾರೆ.

ಶುಕ್ರವಾರ ಫ್ಲೋರಿಡಾದಲ್ಲಿ ನಡೆದ ಆತ್ಮೀಯ ಸಮಾರಂಭದಲ್ಲಿ ಸ್ಕೈ ಡೈಲಿಯನ್ನು ಹಲ್ಕ್ ಹೊಗನ್ ವಿವಾಹವಾದರು ಎಂದು TMZ ವರದಿ ಮಾಡಿದೆ. ದಂಪತಿಗಳು ಚರ್ಚ್ ನಲ್ಲಿ ಕ್ರೈಸ್ತ ವಿಧಿವಿಧಾನದಂತೆ ವಿವಾಹವಾದರು. ಈ ತೀರಾ ಖಾಸಗಿ ವಿವಾಹಕ್ಕೆ ಆಪ್ತ ಕುಟುಂಬ ಮತ್ತು ಸ್ನೇಹಿತರನ್ನು ಮಾತ್ರ ಆಹ್ವಾನಿಸಲಾಗಿತ್ತು. ಆದಾಗ್ಯೂ, ಹಲ್ಕ್ ಹೊಗನ್ ಅವರ ಮಗಳು ಬ್ರೂಕ್, (35 ವರ್ಷ) ಮದುವೆಗೆ ಗೈರುಹಾಜರಾಗಿದ್ದರು.

ಇನ್ನು ಹಲ್ಕ್ ಹೊಗನ್ ಗೆ ಇದು ಮೂರನೇ ವಿವಾಹವಾಗಿದ್ದು, ಅವರ ನೂತನ ಪತ್ನಿ ವೃತ್ತಿಯಲ್ಲಿ ಯೋಗ ತರಬೇತುದಾರರು ಮತ್ತು ಅಕೌಂಟೆಂಟ್ ಆಗಿದ್ದಾರೆ. ಈ ಜೋಡಿ ಜುಲೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಫ್ಲೋರಿಡಾದ ಟ್ಯಾಂಪಾದಲ್ಲಿರುವ ರೆಸ್ಟೋರೆಂಟ್‌ನಲ್ಲಿ US$100,000 ಮೌಲ್ಯದ 'ಆರು-ಕ್ಯಾರೆಟ್' ವಜ್ರದ ನಿಶ್ಚಿತಾರ್ಥದ ಉಂಗುರವನ್ನು ಹಲ್ಕ್ ಹೊಗನ್ ಸ್ಕೈಡೈಲಿ ಅವರಿಗೆ ತೊಡಿಸಿ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ರೆಸ್ಲಿಂಗ್ ದಂತಕಥೆಯ ಮೂರನೇ ವಿವಾಹ
ಗಮನಾರ್ಹವಾಗಿ, ಅಮೆರಿಕದ ರೆಸ್ಲಿಂಗ್ ದಂತಕಥೆ ಹಲ್ಕ್ ಹೊಗನ್ ಗೆ ಇದು ಮೂರನೇ ವಿವಾಹವಾಗಿದ್ದು, 1983ರಲ್ಲಿ ಹಲ್ಕ್ ಹೊಗನ್ ಅವರು ಲಿಂಡಾ ಹೊಗನ್ ರನ್ನು ವಿವಾಹವಾಗಿದ್ದರು. ಅವರ ದಾಂಪತ್ಯ ಜೀವನ 2009ರಲ್ಲಿ ವಿಚ್ಛೇದನ ಪಡೆಯುವ ಮೂಲಕ ಅಂತ್ಯಗೊಂಡಿತ್ತು. ಬಳಿಕ 2010ರಲ್ಲಿ ಹಲ್ಕ್ ಹೊಗನ್ ಜೆನ್ನಿಫರ್ ಮ್ಯಾಕ್‌ಡೇನಿಯಲ್‌ರೊಂದಿಗೆ 2ನೇ ವಿವಾಹವಾಗಿದ್ದರು, ಆದರೆ ಅವರ ದಾಂಪತ್ಯ ಜೀವನ 2021ರಲ್ಲಿ ಅಂತ್ಯವಾಗಿತ್ತು. ಹಲ್ಕ್ ಹೊಗನ್ ಮೊದಲನೆ ಪತ್ನಿ ಲಿಂಡಾ ಹೊಗನ್ ಜೊತೆ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. 

ಸ್ಕೈ ಡೈಲಿಗೂ 3ನೇ ಮದುವೆ
ಅಂತೆಯೇ ಹಲ್ ಹೊಗನ್ ರ 3ನೇ ಪತ್ನಿ ಸ್ಕೈ ಡೈಲಿಗೂ ಇದು 3ನೇ ವಿವಾಹವಾಗಿದ್ದು, ಎರಡು ಬಾರಿ ವಿಚ್ಛೇದನ ಪಡೆದಿರುವ ಸ್ಕೈ ಡೈಲಿಗೆ ಒಂಬತ್ತು ವರ್ಷದ ಹುಡುಗಿ ಮತ್ತು 14 ಮತ್ತು 16 ವರ್ಷ ವಯಸ್ಸಿನ ಇಬ್ಬರು ಗಂಡು ಮಕ್ಕಳು ಸೇರಿ ಒಟ್ಟು ಮೂರು ಜನ ಮಕ್ಕಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com