ಪ್ಯಾರಿಸ್ ಒಲಿಂಪಿಕ್ಸ್‌ಗೆ ವರ್ಣರಂಜಿತ ತೆರೆ: 126 ಪದಕದೊಂದಿಗೆ ಅಗ್ರಸ್ಥಾನದಲ್ಲಿ ಅಮೆರಿಕ, 6 ಪದಕಕ್ಕೆ ಭಾರತ ತೃಪ್ತಿ!

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ (ಯುಎಸ್‌ಎ) ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸ್ಪರ್ಧೆಯ ಕೊನೆಯ ದಿನದಂದು ಅಮೆರಿಕಾ ತನ್ನ ಸಾಂಪ್ರದಾಯಿಕ ಎದುರಾಳಿ ಚೀನಾವನ್ನು ಒಲಿಂಪಿಕ್ಸ್‌ನಲ್ಲಿ ಅಲ್ಪ ಅಂತರದಿಂದ ಹಿಂದೆ ಹಾಕಿತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ (ಯುಎಸ್‌ಎ) ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸ್ಪರ್ಧೆಯ ಕೊನೆಯ ದಿನದಂದು ಅಮೆರಿಕಾ ತನ್ನ ಸಾಂಪ್ರದಾಯಿಕ ಎದುರಾಳಿ ಚೀನಾವನ್ನು ಒಲಿಂಪಿಕ್ಸ್‌ನಲ್ಲಿ ಅಲ್ಪ ಅಂತರದಿಂದ ಹಿಂದೆ ಹಾಕಿತು.

ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳೆಯರ ಬ್ಯಾಸ್ಕೆಟ್‌ಬಾಲ್‌ನ ಅಂತಿಮ ಪಂದ್ಯದಲ್ಲಿ ಆತಿಥೇಯ ರಾಷ್ಟ್ರ ಫ್ರಾನ್ಸ್ ವಿರುದ್ಧ ಯುನೈಟೆಡ್ ಸ್ಟೇಟ್ಸ್ 67-66 ರೋಚಕ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಬಾಸ್ಕೆಟ್‌ಬಾಲ್ ತಂಡ ಚಿನ್ನದ ಪದಕ ಗೆದ್ದುಕೊಂಡಿತು. ಇದರೊಂದಿಗೆ ಅಮೆರಿಕ ಸತತ ನಾಲ್ಕನೇ ಒಲಿಂಪಿಕ್ಸ್‌ನಲ್ಲಿ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಅಮೆರಿಕ ಮತ್ತು ಚೀನಾ ನಡುವೆ 'ಪದಕದ ಓಟ'

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 40 ಚಿನ್ನ, 44 ಬೆಳ್ಳಿ ಮತ್ತು 42 ಕಂಚು ಸೇರಿದಂತೆ 126 ಪದಕಗಳೊಂದಿಗೆ ಯುನೈಟೆಡ್ ಸ್ಟೇಟ್ಸ್ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಚೀನಾ ತನ್ನ ಒಲಿಂಪಿಕ್ ಅಭಿಯಾನವನ್ನು 40 ಚಿನ್ನದ ಪದಕಗಳೊಂದಿಗೆ ಒಟ್ಟು 91 ಪದಕಗಳೊಂದಿಗೆ ಕೊನೆಗೊಳಿಸಿತು. ಒಲಿಂಪಿಕ್ಸ್‌ನುದ್ದಕ್ಕೂ ಅಮೆರಿಕ ಮತ್ತು ಚೀನಾದಂತಹ ಎರಡು ಕ್ರೀಡಾ ಮಹಾಶಕ್ತಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.

ಡೈವಿಂಗ್ ಮತ್ತು ಕಲಾತ್ಮಕ ಈಜುಗಳಂತಹ ಪೂಲ್ ಈವೆಂಟ್‌ಗಳಲ್ಲಿ ಚೀನಾ ಪ್ರಾಬಲ್ಯ ಹೊಂದಿತ್ತು. ಮತ್ತೊಂದೆಡೆ, ಯುಎಸ್ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡಿತು. ಅಥ್ಲೆಟಿಕ್ಸ್‌ನಲ್ಲಿ ಮಾತ್ರ 14 ಚಿನ್ನ, 11 ಬೆಳ್ಳಿ ಮತ್ತು 9 ಕಂಚು ಗೆದ್ದಿತು. ಎಂಟು ಚಿನ್ನ ಸೇರಿದಂತೆ 28 ಪದಕಗಳನ್ನು ಗೆದ್ದುಕೊಂಡಿರುವ ಅಮೆರಿಕ ಈಜುಕೊಳದಲ್ಲೂ ಶಕ್ತಿ ಪ್ರದರ್ಶಿಸಿತು.

ಭಾರತದ ಖಾತೆಗೆ ಆರು ಪದಕ

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಜಪಾನ್ 20 ಚಿನ್ನ ಸೇರಿದಂತೆ 45 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸಿತು. ಆಸ್ಟ್ರೇಲಿಯಾ 18 ಚಿನ್ನದ ಪದಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಪಡೆದುಕೊಂಡರೆ, ಆತಿಥೇಯ ಫ್ರಾನ್ಸ್ 16 ಚಿನ್ನದ ಪದಕಗಳೊಂದಿಗೆ ಟಾಪ್-5 ಅನ್ನು ಸೇರಿಕೊಂಡಿತು. ಗ್ರೇಟ್ ಬ್ರಿಟನ್ 14 ಚಿನ್ನದ ಪದಕಗಳೊಂದಿಗೆ ಏಳನೇ ಸ್ಥಾನ ಗಳಿಸಿತು.

ಸಂಗ್ರಹ ಚಿತ್ರ
Olympics 2024: ಚಿನ್ನ ಗೆದ್ದಿದ್ದ ಪಾಕಿಸ್ತಾನ ಅಥ್ಲೀಟ್ Arshad Nadeem ಸುಮಾರು 3 ಕೋಟಿ ರೂ ತೆರಿಗೆ ಕಟ್ಟಬೇಕೇ?

ಭಾರತ ತಂಡವು ಒಂದು ಬೆಳ್ಳಿ ಮತ್ತು ಐದು ಕಂಚಿನೊಂದಿಗೆ 71ನೇ ಸ್ಥಾನದಲ್ಲಿದೆ. ಆದಾಗ್ಯೂ, ಕುಸ್ತಿಪಟು ವಿನೇಶ್ ಫೋಗಟ್ ಅವರು ಮಹಿಳೆಯರ 50 ಕೆಜಿ ಕುಸ್ತಿ ಫೈನಲ್‌ನಲ್ಲಿ ಅನರ್ಹಗೊಳಿಸುವುದರ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ. ಅದರ ತೀರ್ಪು ಆಗಸ್ಟ್ 13ರಂದು ಹೊರಬರಲಿದೆ.

ಪಾಕಿಸ್ತಾನವು ಈ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಅಥ್ಲೆಟಿಕ್ಸ್‌ನಲ್ಲಿ ತನ್ನ ಮೊದಲ ವೈಯಕ್ತಿಕ ಒಲಿಂಪಿಕ್ ಚಿನ್ನದ ಪದಕದೊಂದಿಗೆ 62ನೇ ಸ್ಥಾನವನ್ನು ಗಳಿಸಿತು. ಈ ಬಾರಿ ಒಲಿಂಪಿಕ್ ಪದಕ ಪಟ್ಟಿಯಲ್ಲಿ ಪಾಕಿಸ್ತಾನ ಭಾರತಕ್ಕಿಂತ ಮೇಲೇರಿದೆ ಎಂಬುದು ಗಮನಿಸಬೇಕಾದ ಸಂಗತಿ. ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಅರ್ಷದ್ ನದೀಮ್ ಗೆಲುವು ಸಾಧಿಸಿದ್ದು ಪಾಕಿಸ್ತಾನಕ್ಕೆ ಐತಿಹಾಸಿಕ ಕ್ಷಣವಾಗಿದೆ. ಆದರೆ 100ಕ್ಕೂ ಹೆಚ್ಚು ದೇಶಗಳು ಪದಕಗಳ ಖಾತೆಯನ್ನು ತೆರೆಯಲು ಸಾಧ್ಯವಾಗಲಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com