
ಪ್ಯಾರಿಸ್: 2024 ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮಹಿಳೆಯರ ಕುಸ್ತಿ ಸ್ಪರ್ಧೆಯ 50 ಕೆ.ಜಿ. ವಿಭಾಗದ ಫೈನಲ್‌ನಿಂದ ಅನರ್ಹಗೊಂಡಿರುವ ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಅವರು ಕ್ರೀಡಾ ಮಧ್ಯಸ್ಥಿಕೆ ನ್ಯಾಯ ಮಂಡಳಿ(CAS) ತೀರ್ಪು ಪ್ರಕಟಿಸುವವರೆಗೆ ಭಾರತಕ್ಕೆ ಮರಳುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಮಹಿಳೆಯರ 50 ಕೆಜಿ ಫೈನಲ್‌ನಿಂದ ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ವಿನೇಶ್ ಫೋಗಟ್ ಅವರು ಸಿಎಎಸ್ ಗೆ ಮೇಲ್ಮನವಿಯ ಸಲ್ಲಿಸಿದ್ದಾರೆ.
ಪ್ರಕರಣವನ್ನು ಆಲಿಸಿದ ಸಿಎಎಸ್ ತನ್ನ ನಿರ್ಧಾರವನ್ನು ಮಂಗಳವಾರ ಘೋಷಿಸಬೇಕಿತ್ತು. ಆದರೆ ಎರಡನೇ ಬಾರಿ ತೀರ್ಪನ್ನು ಆಗಸ್ಟ್ 16ಕ್ಕೆ ಮುಂದೂಡಿದೆ.
ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಪ್ರಕಾರ, ತೀರ್ಪು, ಆಗಸ್ಟ್ 13, ಮಂಗಳವಾರ ರಾತ್ರಿ 9:30 ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಇದೀಗ ಆಗಸ್ಟ್ 16 ಕ್ಕೆ ತೀರ್ಪು ನೀಡುವುದಾಗಿ ಪ್ರಕಟಿಸಲಾಗಿದೆ.
ಸಿಎಎಸ್ ತೀರ್ಪು ಪ್ರಕಟವಾಗುವವರೆಗೆ ವಿನೇಶ್ ಫೋಗಟ್ ಭಾರತಕ್ಕೆ ಬರುವುದಿಲ್ಲ ಎಂದು ಮೂಲಗಳು ಎಎನ್‌ಐಗೆ ತಿಳಿಸಿವೆ.
ನಿಗದಿಗಿಂತ 100 ಗ್ರಾಂ ಅಧಿಕ ತೂಕ ಹೊಂದಿದ್ದಕ್ಕೆ ಫೋಗಟ್ ಅವರನ್ನು ಪ್ಯಾರಿಸ್ ಒಲಿಂಪಿಕ್ಸ್ ಮಹಿಳೆಯರ ಕುಸ್ತಿ ಸ್ಪರ್ಧೆಯ 50 ಕೆ.ಜಿ. ವಿಭಾಗದ ಫೈನಲ್‌ನಿಂದ ಅನರ್ಹಗೊಳಿಸಲಾಗಿದೆ.
Advertisement