
ಹುಲುನ್‌ಬುಯರ್(ಚೀನಾ): ಭಾರತೀಯ ಪುರುಷರ ಹಾಕಿ ತಂಡವು 2024ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ಗೆ ಟಿಕೆಟ್ ಕಾಯ್ದಿರಿಸಿದೆ. ಭಾರತ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾವನ್ನು 4-1 ಅಂತರದ ಗೋಲುಗಳಿಂದ ಗೆದ್ದುಕೊಂಡಿದೆ. ಭಾರತದ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್ ಎರಡು ಗೋಲು ಗಳಿಸಿದ್ದು ಒಟ್ಟಾರೆ ಟೂರ್ನಿಯಲ್ಲಿ 7 ಗೋಲು ದಾಖಲಿಸಿದ್ದಾರೆ.
ಭಾರತದ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್ 19 ಮತ್ತು 45ನೇ ನಿಮಿಷದಲ್ಲಿ ಗೋಲು ಗಳಿಸಿದರು. ಇವರಲ್ಲದೆ ಉತ್ತಮ್ ಸಿಂಗ್ (13ನೇ ನಿಮಿಷ) ಮತ್ತು ಜರ್ಮನ್‌ಪ್ರೀತ್ ಸಿಂಗ್ (32ನೇ ನಿಮಿಷ) ತಲಾ ಒಂದು ಗೋಲು ಗಳಿಸಿದರು. ಕೊರಿಯಾ ಪರ ಯಾಂಗ್ ಜಿಹುನ್ (33ನೇ ನಿಮಿಷ) ಪೆನಾಲ್ಟಿ ಕಾರ್ನರ್‌ನಿಂದ ಏಕೈಕ ಗೋಲು ದಾಖಲಿಸಿದರು. ಮಂಗಳವಾರ ನಡೆಯಲಿರುವ ಫೈನಲ್‌ನಲ್ಲಿ ಭಾರತ ಆತಿಥೇಯ ಚೀನಾವನ್ನು ಎದುರಿಸಲಿದೆ.
ಲೀಗ್ ಹಂತದ ಪಂದ್ಯದಲ್ಲಿ ಭಾರತ 3-0 ಗೋಲುಗಳಿಂದ ಚೀನಾವನ್ನು ಸೋಲಿಸಿತ್ತು. ಇದಕ್ಕೂ ಮೊದಲು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಚೀನಾ ಶೂಟೌಟ್ ಮೂಲಕ 2-0 ಗೋಲುಗಳಿಂದ ಪಾಕಿಸ್ತಾನವನ್ನು ಸೋಲಿಸಿತ್ತು. ನಿಗದಿತ ಸಮಯದ ನಂತರ ಉಭಯ ತಂಡಗಳು 1-1ರಲ್ಲಿ ಸಮಬಲ ಸಾಧಿಸಿದವು. ಮೂರನೇ ಸ್ಥಾನಕ್ಕಾಗಿ ಪಾಕಿಸ್ತಾನ ಮತ್ತು ಕೊರಿಯಾ ತಂಡಗಳು ಮುಖಾಮುಖಿಯಾಗಲಿವೆ.
Advertisement