
ಚೀನಾದ ಮೊಕಿ ತರಬೇತಿ ನೆಲೆಯಲ್ಲಿ ನಡೆಯುತ್ತಿರುವ ಟೂರ್ನಮೆಂಟ್‌ನ ಮೊದಲ ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಚೀನಾ ಮೊದಲ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ಗೆ ಎಂಟ್ರಿ ಕೊಡುವ ಮೂಲಕ ಇತಿಹಾಸ ನಿರ್ಮಿಸಿದೆ.
ನಿಗದಿತ ಸಮಯದಲ್ಲಿ ಉಭಯ ತಂಡಗಳು 1-1 ಗೋಲುಗಳಿಂದ ಸಮಬಲ ಸಾಧಿಸಿದ್ದವು. ಇದರಿಂದಾಗಿ ಶೂಟ್‌ಔಟ್ ನೀಡಲಾಯಿತು. ಚೀನಾದ ಗೋಲ್‌ಕೀಪರ್ ವಾಂಗ್ ಕೈಯು ಪಾಕಿಸ್ತಾನದ ಎಲ್ಲಾ ನಾಲ್ಕು ಹೊಡೆತಗಳನ್ನು ಶೂಟ್-ಔಟ್‌ನಲ್ಲಿ ನಿಲ್ಲಿಸಿ ಆತಿಥೇಯರಿಗೆ ಹೀರೋ ಆಗಿ ಹೊರಹೊಮ್ಮಿದರು. ಪಾಕಿಸ್ತಾನದ ಯಾವುದೇ ಆಟಗಾರರು ಶೂಟೌಟ್‌ನಲ್ಲಿ ಒಂದು ಗೋಲು ಸಾಧಿಸಲು ಸಾಧ್ಯವಾಗಲಿಲ್ಲ, ಆದರೆ ಬೆನ್ಹೈ ಚೆನ್ ಮತ್ತು ಚಾಂಗ್ಲಿಯಾಂಗ್ ಲಿನ್ ಶೂಟ್-ಔಟ್ ನಲ್ಲಿ ತಲಾ ಒಂದು ಗೋಲು ಹೊಡೆಯುವ ಮೂಲಕ ಗೆಲುವು ತಂದುಕೊಟ್ಟರು.
ಇನ್ನು ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಕೋರಿಯಾ ಮುಖಾಮುಖಿಯಾಗಿವೆ. ಅದಾಗಲೇ 3 ಗೋಲುಗಳನ್ನು ಬಾರಿಸುವ ಮೂಲಕ ಭಾರತ ಮುನ್ನಡೆ ಸಾಧಿಸಿದ್ದರೆ ಕೊರಿಯಾ 1 ಗೋಲು ಹೊಡೆದಿದೆ. ಇನ್ನು ಭಾರತ ಫೈನಲ್ ಗೆ ಎಂಟ್ರಿ ಕೊಟ್ಟರೆ ಹಾಲಿ ಚಾಂಪಿಯನ್ಸ್ ತಂಡದ ವಿರುದ್ಧ ಚೀನಾ ಸೆಣೆಸಲಿದೆ.
Advertisement