ಒಂದು ಕಾಲದಲ್ಲಿ ಪಾಕಿಸ್ತಾನ ಭಾರತದ ಭಾಗವೇ ಆಗಿತ್ತು. ಸ್ವತಂತ್ರ ಸಂಗ್ರಾಮದಲ್ಲಿ ಒಟ್ಟಿಗೆ ಬ್ರಿಟಿಷರನ್ನು ಎದುರಿಸಿದ್ದರು. ಆದರೆ ದೇಶ ವಿಭಜನೆಯ ನಂತರ ಶತ್ರುಗಳಂತಾಗಿವೆ. ಆದರೆ ಕ್ರೀಡೆ ವಿಚಾರದಲ್ಲಿ ಉಭಯ ದೇಶಗಳು ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿದ ಘಟನೆಗಳು ಈ ಹಿಂದೆ ನಡೆದಿದ್ದವು. ಆದರೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯ ಭಾರತ ಮತ್ತು ಚೀನಾ ನಡುವೆ ನಡೆಯುತ್ತಿತ್ತು. ಈ ವೇಳೆ ಇಂತಹದೊಂದು ಘಟನೆ ಕಂಡುಬಂದಿದೆ.
ಇದನ್ನು ನೋಡಿದ ಎಲ್ಲರಿಗೂ ಆಶ್ಚರ್ಯ ಉಂಟಾಗಿತ್ತು. ವಾಸ್ತವವಾಗಿ, ಫೈನಲ್ ಪಂದ್ಯದವನ್ನು ವಿಕ್ಷೀಸಲು ಕ್ರೀಡಾಂಗಣದಲ್ಲಿ ಕುಳಿತಿದ್ದ ಪಾಕಿಸ್ತಾನ ಹಾಕಿ ತಂಡವು ಚೀನಾದ ಧ್ವಜವನ್ನು ಕೈಯಲ್ಲಿ ಹಿಡಿದಿತ್ತು. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದರಿಂದ ಭಾರತೀಯ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.
ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ತಂಡ ಶೂಟೌಟ್‌ನಲ್ಲಿ 2-0 ಗೋಲುಗಳಿಂದ ಚೀನಾ ವಿರುದ್ಧ ಸೋಲು ಅನುಭವಿಸಬೇಕಾಯಿತು. ಅದರ ಹೊರತಾಗಿಯೂ, ಅವರು ಭಾರತದ ವಿರುದ್ಧ ಚೀನಾವನ್ನು ಬೆಂಬಲಿಸಿದ್ದಾರೆ. ಫೈನಲ್ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ದಕ್ಷಿಣ ಕೊರಿಯಾದೊಂದಿಗೆ ಕಂಚಿನ ಪದಕದ ಪಂದ್ಯವನ್ನು ಆಡಿತ್ತು. ಇದರಲ್ಲಿ ಅವರು ಕೊರಿಯಾವನ್ನು 5-2 ರಿಂದ ಸೋಲಿಸಿತ್ತು.
ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಜಗಳ
ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಲೀಗ್ ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆದಿತ್ತು. ಇದರಲ್ಲಿ ಭಾರತ 2-1 ಗೋಲುಗಳಿಂದ ಪಾಕಿಸ್ತಾನವನ್ನು ಸೋಲಿಸಿತು. ಈ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ಜಗಳ ನಡೆದಿದೆ. ಪಾಕಿಸ್ತಾನದ ಆಟಗಾರ ಅಶ್ರಫ್ ಭಾರತದ ಜುಗರಾಜ್ ಸಿಂಗ್ ಅವರನ್ನು ಡಿ ಏರಿಯಾದಲ್ಲಿ ತಳ್ಳಿದರು. ಇದರಿಂದ ಜುಗರಾಜ್ ಬಿದ್ದು ನೋವಿನಿಂದ ನರಳುತ್ತಿದ್ದರು. ಇದಾದ ನಂತರ ಭಾರತ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಪಾಕ್ ಆಟಗಾರ ಅಶ್ರಫ್ ಎದುರು ಬಂದರು. ಪಾಕಿಸ್ತಾನದ ನಾಯಕ ರಾಣಾ ವಹೀದ್ ಜಗಳವನ್ನು ತಡೆಯಲು ಬಯಸಿದ್ದರು. ಆದರೆ ಇದಾದ ಬಳಿಕ ಜರ್ಮನ್‌ಪ್ರೀತ್ ಸಿಂಗ್ ಪಾಕ್ ಆಟಗಾರರ ಜತೆ ಕಣಕ್ಕಿಳಿದಿದ್ದರು. ಈ ಘರ್ಷಣೆಯಲ್ಲಿ ಅಂಪೈರ್ ನೆರವಿಗೆ ಬರಬೇಕಾಯಿತು.
Advertisement