ಯುವಜನ/ಮಕ್ಕಳು

ಬಾಟಲಿಯಲ್ಲಿ ಸುಳಿ

Published On :

ನೀರಿನ ಸುಳಿಯನ್ನು ನೋಡಿರುತ್ತೀರಿ ಆಶ್ಚರ್ಯಪಟ್ಟಿದ್ದೀರಿ ಅಲ್ವಾ? ಈಗ ನಾವೂ ನೀರಿನ ಬಾಟಲಿಯಲ್ಲೇ ಸುಳಿ ಏಳುವಂತೆ ಮಾಡಿ ಮಜಾ ತೆಗೆದುಕೊಳ್ಳೋಣ, ಏನಂತೀರಾ?
ಒಂದು ಪಾರದರ್ಶಕವಾದ ಪ್ಲಾಸ್ಟಿಕ್ ಬಾಟಲಿ, ನೀರು, ಡಿಶ್ ವಾಶಿಂಗ್ ಲಿಕ್ವಿಡ್, ಯಾವುದಾದರೂ ಸಣ್ಣ ಹೊಳೆಯುವ ವಸ್ತು ಇಷ್ಟಿದ್ದರೆ ಸಾಕು. ಬಾಟಲಿಗೆ ಮುಚ್ಚಳ ಬಿಗಿಯಾಗಿರಲಿ. ಬಾಟಲಿಯ ಮುಕ್ಕಾಲು ಭಾಗ ನೀರು ತುಂಬಿ. ಅದಕ್ಕೆ ಡಿಶ್ ವಾಶ್ ಲಿಕ್ವಿಡ್ ಮತ್ತು ಹೊಳೆಯುವ ವಸ್ತು (ಇದು ಸುಳಿ ಚೆನ್ನಾಗಿ ಕಾಣಲಿ ಎಂಬ ಕಾರಣಕ್ಕೆ ಅಷ್ಟೆ. ಇದಿಲ್ಲದೆಯೂ ಪ್ರಯೋಗ ಮಾಡಬಹುದು)ಗಳನ್ನು ಅದರೊಳಕ್ಕೆ ಹಾಕಿ. ಮುಚ್ಚಳ ಹಾಕಿದ ತಕ್ಷಣ ಬಾಟಲಿಯನ್ನು ತಿರುಗಿಸಿ ಹಿಡಿದುಕೊಳ್ಳಿ. ಅಂದರೆ ಅದರ ಕುತ್ತಿಗೆ ಕೆಳಗಡೆ ಬರಲಿ. ಈಗ ವರ್ತುಲಾಕಾರದಲ್ಲಿ ಒಮ್ಮೆ ಬಾಟಲಿಯನ್ನು ಜೋರಾಗಿ ತಿರುಗಿಸಿ. ಅದರೊಳಗೆ ಆವರ್ತನದ ರೀತಿಯಲ್ಲಿ ಸುಳಿಗಳು ಏಳುವುದನ್ನು ನೋಡುತ್ತೀರಿ. ಅಲ್ಲೊಂದು ಕೇಂದ್ರಾಭಿಗಾಮಿ ಬಲ ನಿರ್ಮಾಣವಾಗಿ, ಅದರ ಸುತ್ತ ಸುತ್ತುವಂತೆ ನೀರನ್ನು ಪ್ರೇರೇಪಿಸುತ್ತದೆ. ಸುಂಟರಗಾಳಿ ಅಥವಾ ನೀರಿನಲ್ಲಿ ಸುಳಿಗಳು ಏಳಲು ಅಲ್ಲಿ ನಿರ್ಮಾಣವಾಗುವ ಕೇಂದ್ರಶಕ್ತಿಯೇ ಕಾರಣ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.