ಗುರುದೇವೋಭವ

Updated on: 

ಅಕ್ಕರೆಯ 'ಅ'ಕಾರ ಸಿಕ್ಕರೆ
ವಿದ್ಯೆಯಿಲ್ಲಿ ಸಿಹಿ ಸಕ್ಕರೆ
ಬೇಕಿಲ್ಲಿ ಕಲಿಕೆ ಮಮಕಾರ
ಆಗಲೇ ಶಿಕ್ಷಣಕ್ಕೊಂದು ಆಕಾರ

ಶಿಕ್ಷಣವಲ್ಲ ಕಬ್ಬಿಣದ ಕಡಲೆ
ಅರಿತರೆ ಇದು ಹುರಿಗಾಳು
ಬೋಧನೆಯ ಹಾದಿಯೂ ಕಲೆ
ಜೊಳ್ಳು ಹೊರತಾಗಿರಲಿ ಕಾಳು

ಹತ್ತಾರು ಹೊತ್ತಗೆಗಳ ಹೊತ್ತು
ಆಗಿದೆ ಬೆನ್ನು ನೋವಿನ ಕತ್ತು
ತಿರುಗಿ ನೋಡುವ ಆ ಹೊತ್ತು
ಮಂದಹಾಸವ ಚೆಲ್ಲಿತ್ತು

ಆಗಲಿಲ್ಲ ಎಲ್ಲ ಶಿಕ್ಷಕ-ಶಿಕ್ಷಕಿ
ಕಲಿಸುವತ್ತ ಮುಖಾಮುಖಿ
ಶಿಕ್ಷಣ ವ್ಯವಸ್ಥೆಗೆ ದರ್ಪಣ
ವಿದ್ಯಾರ್ಥಿಗೆ ಎಲ್ಲಾ ಅರ್ಪಣ

ಅಂದು ದ್ರೋಣ, ಪರಶುರಾಮ
ಎಂದೆಲ್ಲ ಇತ್ತು ಹಲವು ನಾಮ
ಯಜ್ಞ-ಯಾಗ ಹಲವು ಹೋಮ
ಸಹಿತ ಶಿಕ್ಷಣಕ್ಕೆ ಮೀಸಲು ಗುರುಧಾಮ

ಇಂದು ರಾಧಾಕೃಷ್ಣನ್ ಸರ್ವಪಲ್ಲಿ
ಅವರಂತೆ ಇದ್ದಾರೆ ನಮ್ಮಲ್ಲೂ. ಇಲ್ಲಿ
ಭಕ್ತಿಗೆ ಲಲಾಮನಾಗಿರಲಿ
ಶಿಕ್ಷಣಕ್ಕೆ ಗುಲಾಮನಾಗಿರಲಿ

ಹಿರಿದು ಭಾವವಿ ಹೆತ್ತ ಮನ ಹಿರಿ ಹಿರಿ
ಬರಲೆಮ್ಮ ಶಿಕ್ಷಕರಿಗೂ ಪ್ರಶಸ್ತಿ ಗರಿ
ಹರಿದು ಸಂಭ್ರಮ ಸಂತೃಪ್ತ ಛರಿ
ಇರಲಿ ಆಗಿರಲಿ ಅವರು ಸಂಸ್ಥೆಯ ಸಿರಿ
- ಪುನರ್ವ (ಆದಿತ್ಯ ಪ್ರಸಾದ್ ಪಾಂಡೇಲು)
10ನೇ ತರಗತಿ, ಮಣಿಪಾಲ ಪದವಿಪೂರ್ವ ಕಾಲೇಜು, ಮಣಿಪಾಲ

ಮಾವು
ಮಾವು ಕಂಡಿತು ಕಣ್ಣಿಗೆ
ತಿನ್ನಲು ಚಪ್ಪರಿಸಿತು ನಾಲಿಗೆ
ತಿನ್ನಲು ಹೋದೆ ಮೆಲ್ಲಗೆ
ಕೊಚ್ಚೆ ಇತ್ತು ಹೆಚ್ಚಿಗೆ
ನೋಡದೆ ಕಾಲಿಟ್ಟು ಬಿದ್ದೆ ಅದರೊಳಗೆ

- ಸಂತೋಷ್ ಎಸ್.
8ನೇ ತರಗತಿ, ದಳವಾಯಿ ಶಾಲೆ, ನಂಜನಗೂಡು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com