ಗುಬ್ಬಿ ಗುಬ್ಬಿ
ಗುಬ್ಬಚ್ಚಿ
ಕೊಡುವೆನು ಬಾ
ಅಪ್ಪಚ್ಚಿ ॥
ಕಾಡು ಮೇಡು
ಹುಡುಕಿದೆನು
ಪಕ್ಷಿ ಪ್ರಾಣಿ
ಕೇಳಿದೆನು ॥
ಊರು ಕೇರಿ
ಸುತ್ತಿದೆನು
ಹುಡುಕಿ ಹುಡುಕಿ
ಬಳಲಿದೆನು ॥
ಎಲ್ಲಿ ನೀನು
ಅವಿತಿರುವೆ
ರೂಪ ಏಕೆ
ತೋರದಿಹೆ ॥
ನಿನ್ನ ಕಿಚಿಕಿಚಿ
ಆನಂದ
ರೂಪವಂತು
ಬಹು ಚಂದ ॥
ಕಾಳು ನೀರು
ಸಿಗದೋಯ್ತೆ ?
ನಿನ್ನ ಗೂಡು
ಹಾಳಾಯ್ತೆ ?
ಬಾರೆ ಗುಬ್ಬಿ
ಆಡೋಣ
ರಾಗಿ ರೊಟ್ಟಿ
ತಿನ್ನೋಣ ॥
- ಕವಿತಾಕೃಷ್ಣ