ಯುವಜನ/ಮಕ್ಕಳು

ಸಾಕು ಪ್ರೀತಿ

ಸಾಕು ಪ್ರೀತಿ
Published On :

ರಘು ಪುಟ್ಟ ಬಾಲಕ. ಇವನ ಅಳು ನಿಲ್ಲಿಸಬೇಕಾದರೆ ಯಾವುದಾದರೂ ಪ್ರಾಣಿಯನ್ನು ಕರೆಯಬೇಕು. ಆಗ ಅಳು ನಿಲ್ಲಿಸುತ್ತಿದ್ದ. ರಘುವಿಗೆ ವಿಪರೀತ ಪ್ರಾಣಿಪ್ರೀತಿ. ಹೇಗೆ ಹುಟ್ಟಿತು ತಿಳಿಯದು. ಒಟ್ಟಿನಲ್ಲಿ ಬೆಕ್ಕು, ನಾಯಿ, ಹಸು, ಕರು, ಒಂಟೆ, ಆನೆ, ಜಿಂಕೆ, ಕತ್ತೆ, ಕುದುರೆ, ಮಂಗ ಇವುಗಳನ್ನೆಲ್ಲ ಆತನ ಮುಂದೆ ದಿನವು ಹೆಸರಿಸಬೇಕು. ಇಲ್ಲವೆಂದರೆ, ಅವನ ಅಳು ನಿಲ್ಲಿಸಲಿಕ್ಕಾಗದು.
ಈತನ ತಂದೆ ಗೋಪಾಲ, ತಾಯಿ ಅನುಸೂಯಗೆ ಚಿಂತೆ ಕಾಡತೊಡಗಿತು. ಮನೆ ಕೆಲಸ ಮಾಡಿಕೊಂಡು ಕೆಲಸಕ್ಕೆ ಹೋಗಬೇಕಾದವರಿಗೆ, ಮಗ ರಘುವಿನ ಅಕ್ಕರೆಯ ಪ್ರಾಣಿಗಳ ಜಪಿಸುತ ಕೂಡುವುದು ತುಂಬ ಕಷ್ಟವಾಯಿತು. ಆದರೂ ಮಗನನ್ನು ಅಳಿಸುವುದಕ್ಕೆ ಯಾವ ಪಾಲಕರು ಒಪ್ಪರು. ರಘುವಿನಂಥ ಮಗುವಿನಿಂದ ಪ್ರಾಣಿ ಪ್ರಪಂಚಕ್ಕೆ ಜಯ ಸಿಕ್ಕಿದ್ದು ಸಂತಸವೇ ಆಗಿದೆ. ರಘುವಿನಂಥವರು ಪ್ರತಿ ಮನೆಯಲ್ಲಿದ್ದರೆ ಎಲ್ಲರಿಗೂ ಪ್ರಾಣಿಗಳ ಮೇಲೆ ಪ್ರೀತಿ ಹುಟ್ಟುತ್ತದೆ. ಆದರೂ ರಘು ತಂದೆ ತಾಯಿಯ ಪ್ರೀತಿ ಗೆದ್ದು ಪ್ರಾಣಿಗಳ ಕುರಿತು ಯೋಚಿಸುವಂತೆ ಮಾಡಿದ್ದು ರಘುವಿನ ಗುಣ ಮೆಚ್ಚಲೇಬೇಕು.
ತಕ್ಷಣವೇ ರಘುವಿನ ತಂದೆ ಮಗನ ನೆಮ್ಮದಿಗಾಗಿ ಒಂದು ಹಸುವನ್ನು ಮನೆಗೆ ಕೊಂಡು ತಂದರು. ಅದಕ್ಕೆ ಆರೈಕೆ ಮಾಡುತ್ತ ರಘುವನ್ನು ಬೆಳೆಸಿದರು. ಪುಟ್ಟ ಬಾಲಕ ರಘು ಯುವಕನಾಗಿ ಬೆಳೆದ. ಪ್ರಾಣಿಗಳ ರಕ್ಷಿಸುವಲ್ಲಿ ಪಾತ್ರ ಹಿರಿದಾಯಿತು. ಮಗುವಿನ ಹಠ, ಪ್ರಾಣಿ ಮೇಲಿನ ದಯೆ, ಮೂಕ ಪ್ರಾಣಿಗಳ ಸಾಕಾಣಿಕೆಗೆ ಪ್ರೇರೇಪಿಸಿತು. ಒಬ್ಬರ ಅನುಕರಣೆ ಮತ್ತೊಬ್ಬರಿಗೆ ಮಾದರಿ ಆಗುವಲ್ಲಿ ಯಶಸ್ವಿಯಾಯಿತು. ಮಾತು ಬಾರದ ಮೂಕ ಪ್ರಾಣಿಗಳ ಹಾವಭಾವದಿಂದ ರಘುವಿನಂಥ ಮಕ್ಕಳಿಗೆ ಕೃತಜ್ಞತೆ ಸಲ್ಲಿಸುವಲ್ಲಿ ಎಂದೂ ಹಿಂದೆ ಬೀಳಲಾರವು. ಮನೆಗೊಂದು ರಘುವಿನಂಥ ಮಗುವಿರಲಿ, ಸಾಕು ಪ್ರಾಣಿಗಳು ಮನೆಗೊಂದಾದರೂ ಇರಲಿ.

- ಅಕ್ಬರ್ ಸಿ. ಕಾಲಿಮಿರ್ಜಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.