ದೂರಬೇಡ ಗೆಳತಿ...

'ಹಾಯ್ ಗೆಳೆಯಾ ಏನ್ ಮಾಡ್ತಿದ್ದೀಯಾ? ಯಾಕಿವತ್ತು ನನ್ಗೆ ಕಾಲೇ ಮಾಡ್ಲಿಲ್ಲ? ಕಾಲೇಜ್ ಮುಗಿದಾಕ್ಷಣ ನನ್ನ ಮರೆತೇ ಬಿಟ್ಟೆಯಾ?'
ನಾನು ದ್ವಿತೀಯ ಬಿ.ಎ. ಓದುತ್ತಿದ್ದ ಸಂದರ್ಭದಲ್ಲಿ ಅಪರಿಚಿತವಾಗಿ ಸಿಕ್ಕ ಗೆಳತಿ ವರ್ಷದ ಹಿಂದೆ ಹೇಳಿದ್ದ ಮಾತುಗಳಿವು.
ನಾನು ಪದವಿ ಓದಿದ್ದು ಬಾಲಕರ ಕಾಲೇಜಿನಲ್ಲಿ. ಹಾಗಾಗಿ ಹುಡುಗಿಯರ ಜತೆ ಹೆಚ್ಚು ಒಡನಾಟವೇ ಇರಲಿಲ್ಲ. ಒಂದಿಬ್ಬರು ಸ್ನೇಹಿತರ ಜತೆ ಒಂದಷ್ಟು ಸಮಯವನ್ನು ಕಳೆಯುತ್ತಿದ್ದುದು ಬಿಟ್ಟರೆ ಒಂಟಿಯಾಗಿದ್ದುದೇ ಜಾಸ್ತಿ. ಆದರೆ, ಎರಡು ವರ್ಷಗಳ ಹಿಂದೆ ಈಕೆ ಅಚಾನಕ್ ಆಗಿ ಸಿಕ್ಕಳು. ಒಳ್ಳೆಯ ಗೆಳತಿಯಾದಳು.
ಪದವಿಯ ಕೊನೆಯ ದಿನಗಳಲ್ಲಿ ಈಕೆಯ ಬಳಿ ಆಟೋಗ್ರಾಫ್ ಕೇಳಲು ಹೋಗಿದ್ದೆ. ಆಗ 'ಇನ್ನು ಮುಂದೆ ನನ್ನನ್ನು ಮರೆತೇ ಬಿಡ್ತಿಯಾ?' ಎಂದು ನೋವು ತೋಡಿಕೊಂಡಿದ್ದಳು. 'ಎಷ್ಟೇ ದೂರ ಇದ್ರೂ ನಿನ್ನ ಗೆಳೆಯನಾಗಿಯೇ ಇರ್ತೇನೆ' ಎಂದು ಸಮಾಧಾನ ಮಾಡಿದ್ದೆ ನಾನು. ಪದವಿ ಮುಗಿಸಿದ ಎರಡು ತಿಂಗಳ ಕಾಲ ಮನೆಯಲ್ಲೇ ಇರಬೇಕಾಯ್ತು. ಈ ಎರಡು ತಿಂಗಳು ನಾವು ದೂರವಿದ್ದರೂ ಮೆಸೇಜ್, ಕರೆಗಳ ಮೂಲಕ ನಮ್ಮ ಸ್ನೇಹವನ್ನು ಜೀವಂತವಾಗಿಯೇ ಇರಿಸಿದ್ದೆವು. ಒಂದು ದಿನ ಕರೆ ಮಾಡದಿದ್ದರೂ 'ಕಾಲೇಜ್ ಮುಗಿದಾಕ್ಷಣ ನನ್ನನ್ನು ಮರೆತೇ ಬಿಟ್ಟೆಯಾ' ಎಂದು ಗೆಳತಿ ಬೇಸರ ತೋಡಿಕೊಳ್ಳುತ್ತಿದ್ದಳು. ಆವಾಗೆಲ್ಲ ನಾನು 'ಇಲ್ಲ ಕಣಮ್ಮಾ...' ಅಂತ ಸಮಾಧಾನ ಮಾಡುತ್ತಿದ್ದೆ.
ಎರಡು ತಿಂಗಳ ಬಳಿಕ ನನಗೆ ಮೈಸೂರಲ್ಲೇ ಸ್ನಾತಕೋತ್ತರ ಪದವಿಗೆ ಸೀಟು ಸಿಕ್ಕಾಗ ಇಬ್ಬರೂ ಪಟ್ಟ ಖುಷಿ ಅಷ್ಟಿಷ್ಟಲ್ಲ. ಈಗ ಅವಳ ಪದವಿ ಮುಗಿಯುವ ಸಮಯ. ಇನ್ನು ಮುಂದೆ ನಮ್ಮ ಎರಡು ವರ್ಷದ ಸ್ನೇಹಕ್ಕೆ ಕೊನೆ ಬೀಳುವುದೇ ಎನ್ನುವ ಆತಂಕ ನನ್ನನ್ನು ಕಾಡಲು ಶುರುವಾಗಿದೆ. 'ಕಾಲೇಜ್ ಮುಗಿದಾಕ್ಷಣ ನನ್ನನ್ನು ಮರೆತೇ ಬಿಡ್ತೀಯಾ? ಎಂದು ನಾನೀಗ ಅವಳನ್ನು ಕೇಳುವ ಕಾಲ ಬಂದಿದೆ.
ಯಾಕೆಂದರೆ ನನ್ನ ಗೆಳತಿ ಈವರೆಗೆ ಇದ್ದದ್ದು ಹಾಸ್ಟೆಲ್‌ನಲ್ಲಿ. ಇನ್ನು ಮುಂದೆ ಮನೆಯಲ್ಲಿರುತ್ತಾಳೆ. ಹಾಸ್ಟೆಲ್‌ನಲ್ಲಿ ಇದ್ದಂತೆ ಮನೆಯಲ್ಲಿ ಇರೋದು ಕಷ್ಟ. ಆದರೂ ಅವಳೆಷ್ಟೇ ದೂರ ಇರಲಿ. ನಮ್ಮಿಬ್ಬರ ಸ್ನೇಹ ಮಾತ್ರ ಯಾವತ್ತೂ ದೂರವಾಗದಿರಲಿ ಎನ್ನುವುದಷ್ಟೇ ನನ್ನ ಪ್ರಾರ್ಥನೆ.
-ರಾಜು ಆರ್., ತಲಕಾಡು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


