ಪ್ರಧಾನ ಸುದ್ದಿ

ತುಂಗಾ ತೀರದಲ್ಲಿ ಬದುಕು ಅ'ಭದ್ರಾ'

Published On :

ಕ.ಪ್ರ.ವಾರ್ತೆ   ಬೆಂಗಳೂರು   ಆ. 5
ರಾಜ್ಯದಲ್ಲಿ ವರುಣನ ಆರ್ಭಟ ಸೋಮವಾರವೂ ಮುಂದುವರಿದಿದೆ. ತುಂಗಭದ್ರಾ ಜಲಾಶಯದಿಂದ ಪ್ರಸಕ್ತ ಸಾಲಿನಲ್ಲಿ ಇದೇ ಮೊದಲ ಬಾರಿಗೆ 1.55 ಲಕ್ಷ ಕ್ಯುಸೆಕ್ಗಿಂತ ಅಧಿಕ ನೀರು ಹರಿಸಲಾಗುತ್ತಿದ್ದು, ಅಚ್ಚುಕಟ್ಟು ಪ್ರದೇಶದಲ್ಲಿ ಪ್ರವಾಹ ಸ್ಥಿತಿ ಗಂಭೀರವಾಗಿದೆ. ದಕ್ಷಿಣ ಕನ್ನಡ, ಉಡುಪಿ, ಕೊಡಗಿನಲ್ಲಿಯೂ ಮಳೆಯ ಅಬ್ಬರ ಮತ್ತೆ ಹೆಚ್ಚಾಗಿದ್ದು ಅಲ್ಲಲ್ಲಿ ಮನೆ ಬಿದ್ದಿರುವುದು ಸೇರಿದಂತೆ ಸಣ್ಣ ಪುಟ್ಟ ಅವಘಡಗಳು ಸಂಭವಿಸಿವೆ.
ಮಹಾರಾಷ್ಟ್ರದಲ್ಲಿ ಮಳೆ ಕಡಿಮೆಯಾಗುತ್ತಿರುವುದರಿಂದ ಕೃಷ್ಣಾ ನದಿಂು ನೀರಿನ ಮಟ್ಟ ಇಳಿಮುಖವಾಗುತ್ತಿದೆ. ಆದರೆ, ರಾಜಾಪುರ ಮತ್ತು ದೂಧಗಂಗಾ ಬ್ಯಾರೇಜ್ಗಳಿಂದ 1.86 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಹಿಪ್ಪರಗಿ ಜಲಾಶಂುದಿಂದ 2.22 ಲಕ್ಷ ಕ್ಯುಸೆಕ್ ನೀರು ಬಿಡಲಾಗುತ್ತಿದೆ. ಕೃಷ್ಣಾ ನದಿ ತೀರದಲ್ಲಿರುವ ಚಿಕ್ಕೋಡಿ ತಾಲೂಕಿನ ಎಂಟು, ರಾಂುಬಾಗ ತಾಲೂಕಿನ ಆರು, ಅಥಣಿ ತಾಲೂಕಿನ ನಾಲ್ಕು ಹಾಗೂ ಗೋಕಾಕ ತಾಲೂಕಿನ ಒಂದು ಸೇತುವೆ ಸೇರಿ 19 ಸೇತುವೆಗಳು ಜಲಾವೃತಗೊಂಡಿವೆ. ಜಿಲ್ಲೆಂು ಹುಕ್ಕೇರಿ ತಾಲೂಕಿನಲ್ಲಿ ವಿವಿಧೆಡೆ 5 ಮನೆಗಳು ಕುಸಿದಿವೆ.
ಇಳಿದ ಪ್ರವಾಹ ಪರಿಸ್ಥಿತಿ: ತುಂಗಭದ್ರಾ ನದಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿರುವುದರಿಂದ ದಾವಣಗೆರೆ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ತಿಳಿಯಾಗಿದೆ. ಕೊಪ್ಪಳದ ಮುನಿರಾಬಾದ್ನಲ್ಲಿರುವ ತುಂಗಾಭದ್ರಾ ಜಲಾಶಯದ 33 ಗೇಟ್ಗಳನ್ನು ತೆರೆಯಲಾಗಿದೆ. 12 ದಿನಗಳಿಂದ ಜಗತ್ಪ್ರಸಿದ್ಧ ಹಂಪಿ ಸ್ಮಾರಕಗಳು ಜಲಾವೃತಗೊಂಡಿದ್ದು, ಇದರಿಂದ ಪ್ರವಾಸೋದ್ಯಮಕ್ಕೆ ಭಾರಿ ಧಕ್ಕೆಯುಂಟಾಗಿದೆ.
10 ದಿನಗಳಿಂದ ಕಂಪ್ಲಿ ಸೇತುವೆ ಜಲಾವೃತಗೊಂಡಿದ್ದು, ಹೊಸಪೇಟೆ ಹಾಗೂ ಹೈದರಾಬಾದ್ ಕರ್ನಾಟಕದ ನಗರಗಳಾದ ಗುಲ್ಬರ್ಗ, ರಾಯಚೂರು ನಡುವಿನ ಸಂಪರ್ಕ ಕಡಿದು ಹೋಗಿದೆ. ಕಂಪ್ಲಿಯ ಕೋಟೆ ಪ್ರದೇಶಕ್ಕೆ ನೀರು ನುಗ್ಗಿದ್ದು, ಗಂಗಾವತಿ ತಾಲೂಕಿನ ಪ್ರಸಿದ್ಧ ಪಂಪಾಸರೋವರ ಹಾಗೂ ಅಲ್ಲಿಯ ವಿಜಯಲಕ್ಷ್ಮೀ ದೇವಸ್ಥಾನ ಜಲಾವೃತಗೊಂಡಿವೆ.
ತಳವಾರ ಘಟ್ಟದಲ್ಲಿರುವ ಗಣೇಶ ದೇವಸ್ಥಾನಕ್ಕೆ ನೀರು ನುಗ್ಗಿದ್ದು, ಪ್ರಸಿದ್ಧ ಚಿಂತಾಮಣಿ ದೇವಸ್ಥಾನದ ಹತ್ತಿರ ನೀರು ಹರಿಯುತ್ತಿದೆ. ನವವೃಂದಾವನಗಡ್ಡೆ ಜಲಾವೃತಗೊಂಡಿದ್ದು, 15 ದಿನಗಳಿಂದ 9 ಯತಿವರೇಣ್ಯರ ವೃಂದಾವನಗಳಿಗೆ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ರದ್ದುಗೊಂಡಿವೆ.
ತುಂಬಿ ಹರಿಯುತ್ತಿದೆ ನೇತ್ರಾವತಿ: ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ನದಿ ತುಂಬಿ ಹರಿಯುತ್ತಿದ್ದು, ನದಿ ತಟದ ಪ್ರದೇಶಗಳಲ್ಲಿ ನೆರೆ ಭೀತಿ ಆವರಿಸಿದೆ. ಮಂಗಳೂರು ಮಹಾನಗರ ಪಾಲಿಕೆ ಚಾಲಕ ಕೃಷ್ಣ ಎಂಬವರ ಮನೆ ಕಾಂಪೌಂಡ್ ಬಿದ್ದಿದ್ದು, ಕೆಲಹೊತ್ತು ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ಸುಳ್ಯ ತಾಲೂಕಿನ ಮುರುಳ್ಯದ ಇದುಂಗುಳಿ ನಿವಾಸಿ ಯಶೋದಾ ರಮೇಶ ಎಂಬವರು ಹೊಸದಾಗಿ ಕಟ್ಟಿಸಿದ ಗೃಹಪ್ರವೇಶ ಆಗದ ಮನೆ ಧರೆಗುಳಿದಿದೆ.
ಘಟಪ್ರಭಾ ಜಲಾಶಂು ಭರ್ತಿ: ಬೆಳಗಾವಿ ಜಿಲ್ಲೆಯ ಪ್ರಮುಖ ಜಲಾಶಯಗಳಲ್ಲೊಂದಾದ ಹಿಡಕಲ್ (ರಾಜಾ ಲಖಮಗೌಡ) ಜಲಾಶಯ ಬಹುತೇಕ ಭರ್ತಿಯಾಗಿದ್ದು, ಸೋಮವಾರದಿಂದ 10 ಸಾವಿರ ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.



ಯಡಕುರಿಯಾ ಸುತ್ತುವರಿದ ಕಾವೇರಿ-ಕಬಿನಿ
ಕಾವೇರಿ-ಕಬಿನಿ ಜಲಾಶಯಗಳು ಭರ್ತಿಯಾಗಿ ನೀರು ನುಗ್ಗುತ್ತಿರುವ ಪರಿಣಾಮ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಯಡಕುರಿಯಾ ಗ್ರಾಮ ಜಲಾವೃತಗೊಂಡು, ನಡುಗಡ್ಡೆಯಾಗಿದೆ. ಎಲ್ಲ ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ಗ್ರಾಮಸ್ಥರು ಪರದಾಡುತ್ತಿದ್ದಾರೆ.
ಮಡಿಕೇರಿ ಬಳಿ ಮತ್ತೆ ರಸ್ತೆ ಕುಸಿತ
ಮಡಿಕೇರಿ ಬಳಿಯ ಕೊಯನಾಡಿನಲ್ಲಿ ಕಳೆದ ವಾರವಷ್ಟೇ ಬಿರುಕು ಬಿಟ್ಟು ಸರಿ ಮಾಡಿದ್ದ ರಸ್ತೆ ಮತ್ತೆ ಬಿರುಕು ಬಿಟ್ಟಿದ್ದು, ಹೆದ್ದಾರಿ ಸಂಪೂರ್ಣ ಹಾನಿಗೊಳಗಾಗಿದೆ. ಈ ಹಿನ್ನೆಲೆಯಲ್ಲಿ ಮಡಿಕೇರಿ- ಮಂಗಳೂರು ಹೆದ್ದಾರಿಯಲ್ಲಿ ಎಲ್ಲ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು, ಮಡಿಕೇರಿ- ಕರಿಕೆ ಮಾರ್ಗವಾಗಿ ಮಂಗಳೂರು ಪ್ರಯಾಣಿಕರು ಸಾಗಬೇಕಾಗಿದೆ.


ನಡುಗಡ್ಡೆಯಾದ ಜೋಯಿಡಾ ಗ್ರಾಮಗಳು
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಹಲವಾರು ಗ್ರಾಮಗಳು ಕಾಳಿ ನದಿಯ ಹಿನ್ನೀರಿನಿಂದಾಗಿ ನಡುಗಡ್ಡೆಯಾಗಿವೆ. ಯಾವುದೇ ಸಂಪರ್ಕ ಸಾಧನ ನೀಡದ ಕಾರಣ ಹೊರಜಗತ್ತಿನ ಸಂಪರ್ಕ ಕಡಿದುಕೊಂಡಿವೆ. ತಾಲೂಕಿನ ಬಜಾರಕೊಣಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ 9 ಗ್ರಾಮಗಳಲ್ಲಿರುವ 150 ಕುಟುಂಬಗಳು, ನಾಗೋಡಾ ಪಂಚಾಯಿತಿ ವ್ಯಾಪ್ತಿಯ ನಾಗೋಡಾ ಮತ್ತು ಪಾಂಜೇಲಿ ಗ್ರಾಮಗಳು ಸಂಪರ್ಕ ಕಡಿದುಕೊಳ್ಳುವ ಹಂತದಲ್ಲಿವೆ. ಈಗಾಗಲೇ ಸಂಪರ್ಕ ಕಡಿದುಕೊಂಡಿರುವ ಡಿಗ್ಗಿ ಸೇರಿದಂತೆ 9 ಗ್ರಾಮಗಳ 300ಕ್ಕೂ ಅಧಿಕ ಜನರು ಅತಂತ್ರ ಸ್ಥಿತಿ ಎದುರಿಸುತ್ತಿದ್ದಾರೆ. ಹಲವು ವರ್ಷಗಳಿಂದ ಸೇತುವೆ ಅಥವಾ ಶಾಶ್ವತ ಸಂಪರ್ಕ ಮಾರ್ಗ ಕಲ್ಪಿಸುವಂತೆ ಈ ಪ್ರದೇಶದ ಜನರು ಸರ್ಕಾರದ ಮೊರೆ ಹೋಗುತ್ತಲೇ ಇದ್ದಾರೆ. ಆದರೂ, ಆಡಳಿತದ ಚುಕ್ಕಾಣಿ ಹಿಡಿದವರು ಅತಂತ್ರ ಸ್ಥಿತಿಯಲ್ಲಿರುವವರ ಕಷ್ಟಕ್ಕೆ ಸ್ಪಂದಿಸುವ ಯಾವುದೇ ಪ್ರಯತ್ನ ಮಾಡಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.