ಪ್ರಧಾನ ಸುದ್ದಿ

ಉತ್ತಮ ಸೇವೆ: 28 ಮಂದಿಗೆ ರಾಷ್ಟ್ರಪತಿ ಪ್ರಶಸ್ತಿ

Published On :

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ 28 ಮಂದಿಗೆ 2013ನೇ ಸಾಲಿನ ರಾಷ್ಟ್ರಪತಿ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ವಿಜೇತರ ವಿವರ ಹೀಗಿದೆ.
ಶೌರ್ಯ ಪ್ರಶಸ್ತಿ: ಕಾರ್ಕಳದ ಎಎನ್‌ಎಫ್‌ನ ಡಿವೈಎಸ್ಪಿ ಎ.ಎಚ್. ಶಂಕರ್, ಪೇದೆ ನವೀನ್ ಜಿ. ನಾಯಕ್ ಹಾಗೂ ಪೇದೆ ಬಿ.ಡಿ.ಪ್ರದೀಪ್
ಗಣ್ಯ ಪ್ರಶಸ್ತಿ: ಯಲಹಂಕ ಪಿಡಿಎಂಎಸ್ ವಿಭಾಗದ ಎಸ್ಪಿ ವಿಶ್ವನಾಥ ಶೆಟ್ಟಿ
ಶ್ಲಾಘನೀಯ ಪ್ರಶಸ್ತಿ:  ಮಂಡ್ಯದ ಸಹಾಯಕ ಎಸ್ಪಿ ಎ.ಎನ್. ರಾಜಣ್ಣ, ಬೆಂಗಳೂರು ಸಿಐಡಿ ವಿಭಾಗ ಡಿವೈಎಸ್ಪಿ ಕೆ. ಅಶೋಕ್ ಕುಮಾರ್, ಗುಪ್ತಚರ ವಿಭಾಗದ ಡಿವೈಎಸ್ಪಿ ಸಿ.ಎಚ್. ಗಂಗಾಧರ್, ಬೆಳಗಾವಿ ಕೆಎಲ್‌ಎನ ಡಿವೈಎಸ್ಪಿ ಗಣಪತಿ ಆರ್.ಪಾಟೀಲ್, ಮೈಸೂರಿನ ಡಿವೈಎಸ್ಪಿ ಟಿ. ಸಿದ್ದಪ್ಪ, ಕಾರ್ಕಳದ ಎಎನ್‌ಎಫ್‌ನ ವಿಶ್ವನಾಥ್ ಎಸ್. ನಾಯಕ್, ನೆಲಮಂಗಲದ ಡಿವೈಎಸ್ಪಿ ಆರ್. ಮಲ್ಲೇಶ್, ರಾಮನಗರದ ಡಿವೈಎಸ್ಪಿ ಎನ್.ಎಂ. ರಾಮಲಿಂಗಪ್ಪ, ಮಂಗಳೂರು ಕೆಎಸ್‌ಆರ್‌ಪಿ 7ನೇ ಬೆಟಾಲಿಯನ್‌ನ ಆರ್‌ಪಿಐ ಯು.ಜಿ. ಚಿದಾನಂದ ಆರಾಧ್ಯ, ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದ ಪಿಐ ಬಿ.ಪಿ. ಸುರೇಶ್‌ಕುಮಾರ್, ಡಿಸಿಆರ್‌ಇ ವಿಭಾಗದ ಪಿಎಸ್‌ಐ ಎಂ.ಜಿ. ಶಿವಶಂಕರಪ್ಪ, ಉಡುಪಿ ಬ್ರಹ್ಮಾವರದ ಎಎಸ್‌ಐ ಶೀನಾ ಬಿಲ್ಲವ, ತುಮಕೂರು ಡಿಪಿಓದ ಮಹಿಳಾ ಎಎಸ್‌ಐ ಜಿ.ಟಿ. ಪಾರ್ವತಮ್ಮ, ಬೆಂಗಳೂರು ಅರಣ್ಯ ವಿಭಾಗದ ಮುಖ್ಯ ಪೇದೆ ಎಂ.ಎಸ್. ರಾಮಮೂರ್ತಿ, ರಾಜ್ಯ ಗುಪ್ತಚರ ಇಲಾಖೆಯ ಮುಖ್ಯಪೇದೆ ಆರ್. ಪದ್ಮರಾಜು, ಬೆಂಗಳೂರು ನಿಸ್ತಂತು ವಿಭಾಗದ ಮುಖ್ಯಪೇದೆ ಎಲ್.ರಾಜು, ಬೆಂಗಳೂರಿನ ಕೆಎಸ್‌ಆರ್‌ಪಿ 4ನೇ ಬೆಟಾಲಿಯನ್‌ನ ಮುಖ್ಯಪೇದೆ ಐ.ಪಿ.ಮಾದಯ್ಯ.

ಅಗ್ನಿಶಾಮಕ ದಳ
ವಿಶಿಷ್ಟ ಸೇವಾ ಪದಕ: ಬೆಂಗಳೂರು ಉತ್ತರ ವಲಯದ ಪ್ರಾದೇಶಿಕ ಅಗ್ನಿ ಶಾಮಕ ಅಧಿಕಾರಿ ಎನ್. ಶಶಿಧರ್, ಹುಬ್ಬಳ್ಳಿ ವಲಯದ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಫಕೀರಪ್ಪ ಎಚ್. ಕುರಕುಂದಿ, ಬೆಂಗಳೂರಿನ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಬಸವರಾಜು ಎಚ್.ಬಿ.
ಶ್ಲಾಘನೀಯ ಸೇವಾ ಪದಕ: ಮೈಸೂರು ವಲಯದ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಸಿ. ಬಸವಣ್ಣ, ಬೆಂಗಳೂರು ಅಂಜನಾಪುರದ ಅಗ್ನಿಶಾಮಕ ಠಾಣಾಧಿಕಾರಿ ಚಿಕ್ಕಣ್ಣ, ಶಿವಮೊಗ್ಗದ ಪ್ರಮುಖ ಅಗ್ನಿಶಾಮಕ -722 ಎಲ್.ಬಿ. ವೀರಭದ್ರಪ್ಪ, ಸರ್ಜಾಪುರ ರಸ್ತೆ ಅಗ್ನಿಶಾಮಕ ಠಾಣೆಯ ಅಗ್ನಿಶಾಮಕ-773 ಬಿ.ಎಂ. ರಾಮಕೃಷ್ಣ.

ಬಿದರಿ ಪುತ್ರಗೆ ಪದಕ
ತಮಿಳುನಾಡಿನ ತಿರುನಲ್ವೇಲಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ನಿವೃತ್ತ ಡಿ.ಜಿ. ಶಂಕರ ಬಿದರಿ ಅವರ ಪುತ್ರ ವಿಜಯೇಂದ್ರ ಬಿದರಿ ಅವರ ಉತ್ತಮ ಸೇವೆಗಾಗಿ ತಮಿಳುನಾಡು ಸರ್ಕಾರ ಮುಖ್ಯಮಂತ್ರಿಗಳ ಪ್ರಶಸ್ತಿ ನೀಡಿ ಗೌರವಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.