ಪ್ರಧಾನ ಸುದ್ದಿ

ತಲಕಾಡಿನಲ್ಲಿ ಇಂದು ಪಂಚಲಿಂಗ ದರ್ಶನ

Published On :

ಮೈಸೂರು: ಪುರಾಣ ಪ್ರಸಿದ್ಧ ತಲಕಾಡಿನಲ್ಲಿ ಸೋಮವಾರ ನಡೆಯುವ ಪಂಚಲಿಂಗ ದರ್ಶನದಲ್ಲಿ ಪಾಲ್ಗೊಳ್ಳಲು ಸಹಸ್ರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ.  ನ.28 ರಿಂದಲೇ ಪಂಚಲಿಂಗ ದರ್ಶನ ಆರಂಭವಾಗಿದ್ದು, ಡಿ.7ರವರೆಗೆ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ. ಪ್ರಮುಖವಾಗಿ ಡಿ.2ರಂದು ಬೆಳಗ್ಗೆ 7.30 ರಿಂದ 9ರವರೆಗೆ ಮಹಾಭಿಷೇಕ ಪೂಜಾದಿಗಳ ನಂತರ ಬೆಳಗ್ಗೆ 9.30ರಿಂದ ರಾತ್ರಿ 12 ಗಂಟೆವರೆಗೆ ಪಂಚಲಿಂಗ ದರ್ಶನ ನಡೆಯಲಿದೆ. ಕಾರ್ತಿಕ ಮಾಸದಲ್ಲಿ ಐದು ಸೋಮವಾರಗಳು ಬಂದು, ಕೊನೆಯ ಸೋಮವಾರ ಅಮವಾಸ್ಯೆ ಬಂದಲ್ಲಿ ಜರಗುವ ಪಂಚಲಿಂಗ ದರ್ಶನದಿಂದ ಗಂಗರಸರ ರಾಜಧಾನಿಯಾಗಿದ್ದ ತಲಕಾಡು ಪುರಾಣ ಪ್ರಸಿದ್ಧಿ ಪಡೆದಿದೆ. ಹಿಂದೆ 13 ವರ್ಷಗಳಿಗೊಮ್ಮೆ ಜರುಗುತ್ತಿದ್ದ ಪಂಚಲಿಂಗ ದರ್ಶನ ಇತ್ತೀಚೆಗೆ ಮೂರು, ನಾಲ್ಕು, ಏಳು ವರ್ಷಗಳಿಗೂ ನಡೆಯುತ್ತಿದೆ.  ಬೆಳಗಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್, ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಮೊದಲಾದವರು ಸಹ ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.