ಪ್ರಧಾನ ಸುದ್ದಿ

ದಿನ ಆರು, ಇನ್ನೂ ಪತ್ತೆಯಾಗದ ಅಧಿಕಾರಿ

ದಿನ ಆರು, ಇನ್ನೂ ಪತ್ತೆಯಾಗದ ಅಧಿಕಾರಿ
ಇಬ್ರಾಹಿಂ ಷರೀಫ್
Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ.1-
ಒಡಿಶಾದ ಭುವನೇಶ್ವರದ ಐಬಿಎಂ (ಇಂಡಿಯನ್ ಬ್ಯುರೋ ಆಫ್ ಮೈನ್ಸ್)ನಲ್ಲಿ ಅಸಿಸ್ಟೆಂಟ್ ಕಂಟ್ರೋಲರ್ ಆಗಿ ಸೇವೆ ಸಲ್ಲಿಸುತ್ತಿದ್ದ ಇಬ್ರಾಹಿಂ ಷರೀಫ್ ನಾಪತ್ತೆಯಾಗಿ ಆರು ದಿನಗಳಾದರೂ ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ. ಇದರಿಂದ ಜಿಲ್ಲೆಯ ಸಂಡೂರಿನಲ್ಲಿರುವ ಇವರ ಕುಟುಂಬ ತೀವ್ರ ಆತಂಕಕ್ಕೆ ಒಳಗಾಗಿದ್ದು, ಅವರ ಸಹೋದರರು ಭುವನೇಶ್ವರಕ್ಕೆ ತೆರಳು ಹುಟುಕಾಟದಲ್ಲಿ ತೊಡಗಿದ್ದಾರೆ.
ನ.25ರಂದು ಅವರು ಕಚೇರಿಗೆ ಹೋಗುವುದಾಗಿ ಹೇಳಿ ಷರೀಫ್ ಭುವನೇಶ್ವರದ ಕನನ ವಿಹಾರ್ ಪ್ರದೇಶದಲ್ಲಿರುವ ತಮ್ಮ ಮನೆಯಿಂದ ತೆರಳಿದ್ದರು. ಆದರೆ, ಕಚೇರಿಗೂ ಹೋಗಿಲ್ಲ. ಅವರ ಬೈಕ್ ಮಾತ್ರ ಸಿಕ್ಕಿದೆ.
ಸಂಡೂರು ತಾಲೂಕಿನ ಯಶವಂತನಗರದ ಗಿಡ್ಡುಸಾಬ್ ಹಾಗೂ ಬೇಗಂ ದಂಪತಿಯ ಎರಡನೇ ಮಗ ಷರೀಫ್. ಬಕ್ರೀದ್ಗೆ ಪತ್ನಿ ಸಲ್ಮಾರೊಂದಿಗೆ ಇವರು ಊರಿಗೆ ಆಗಮಿಸಿದ್ದರು. ಇದೀಗ ಅವರ ಅಪಹರಣದಿಂದ ಅವರ ಯಶವಂತ ನಗರದ ಮನೆಯಲ್ಲಿ ನೀರವ ಮೌನ ಆವರಿಸಿದೆ.
ಪಿಯುಸಿವರೆಗೂ ಸಂಡೂರಿನಲ್ಲಿಯೇ ಅಧ್ಯಯನ ಮಾಡಿದ ಷರೀಫ್ ಕೋಲಾರದಲ್ಲಿ ಡಿಪ್ಲೊಮಾ ಇನ್ ಮೈನಿಂಗ್ ಹಾಗೂ ಬಿಇ ಪದವಿ ಪಡೆದಿದ್ದರು. ಆರಂಭದಲ್ಲಿ ಸಂಡೂರಿನ ಕಂಪನಿಯೊಂದರದಲ್ಲಿಯೇ ಕೆಲಸಕ್ಕೆ ಸೇರಿದ್ದರು. ವಿದ್ಯಾಭ್ಯಾಸಕ್ಕೆ ತಕ್ಕಂತೆ ಗೋವಾದಲ್ಲಿ ಕೆಲಸ ಸಿಕ್ಕಿದ್ದರಿಂದ, ಅಲ್ಲಿ 4 ತಿಂಗಳ ಕಾಲ ಕಾರ್ಯನಿರ್ವಹಿಸಿದ್ದರು. ಬಳಿಕ 2011ರಲ್ಲಿ ಒಡಿಶಾದ ಭುವನೇಶ್ವರದ ಐಬಿಎಂನಲ್ಲಿ ಅಸಿಸ್ಟಂಟ್ ಕಂಟ್ರೋಲರ್ ಆಗಿ ಸೇರ್ಪಡೆಯಾಗಿ, ದಕ್ಷ ಅಧಿಕಾರಿಯೆಂದು ಹೆಸರು ಗಳಿಸಿದ್ದರು.

ಪ್ರಾಮಾಣಿಕತೆ ಮುಳುವಾಯಿತೇ?: ಷರೀಫ್ ಸೆಪ್ಟೆಂಬರ್ನಲ್ಲಿ ಖೇನ್ಝೋಹರ್ ಜಿಲ್ಲೆಯ ಬರ್ಬಿಲ್ ಎಂಬ ಪ್ರದೇಶದಲ್ಲಿ ಕೆಲವು ಗಣಿ ಪ್ರದೇಶಗಳನ್ನು ಪರಿಶೀಲಿಸಿದ್ದರು. ಅಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿದ್ದರು. ಅಲ್ಲಿಗೆ ಹೋಗಿ ಬಂದಾಗಿನಿಂದ ಅವರು ಒತ್ತಡದಲ್ಲಿರುವಂತೆ ಕಾಣುತ್ತಿದ್ದರು. ಪರಿಶೀಲನಾ ವರದಿಯನ್ನು ಗಣಿ ಕಂಪನಿಗಳ ಪರವಾಗಿ ನೀಡುವಂತೆಯೂ ಒತ್ತಡವಿತ್ತು. ಇದಕ್ಕೆ ಅವರು ಒಪ್ಪಿರಲಿಲ್ಲ ಎಂದು ಅವರ ಸಂಬಂಧಿಕರೊಬ್ಬರು ತಿಳಿಸಿದ್ದಾರೆ.

- ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.