ದೋಷಾರೋಪ
ಐವರ ವಿರುದ್ಧ 13 ಸೆಕ್ಷನ್ಗಳನ್ವಯ ಆರೋಪ /5 ರಿಂದ ಪ್ರಕರಣದ ವಿಚಾರಣೆ
ನವದೆಹಲಿ: ದೆಹಲಿಯಲ್ಲಿ 23 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಕೊಲೆಗೈದ 5 ಮಂದಿ ಕಾಮುಕರ ವಿರುದ್ಧ ಶನಿವಾರ ದೆಹಲಿಯ ತ್ವರಿತಗತಿ ನ್ಯಾಯಾಲಯ ದೋಷಾರೋಪ ನಿಗದಿಪಡಿಸಿದೆ
ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಈ ಗ್ಯಾಂಗ್ರೇಪ್ ಪ್ರಕರಣ ನಡೆದು ಒಂದು ತಿಂಗಳ ಬಳಿಕ ಭಾರತೀಯ ದಂಡ ಸಂಹಿತೆಯ 13 ಸೆಕ್ಷನ್ಗಳ ಅನ್ವಯ ದೋಷಾರೋಪ ಪಟ್ಟಿ ಮಾಡಲಾಗಿದೆ. ಸಾಮೂಹಿಕ ಅತ್ಯಾಚಾರ, ಸಾಕ್ಷ್ಯನಾಶ, ಕ್ರಿಮಿನಲ್ ಸಂಚು, ಡಕಾಯಿತಿ, ಅಸಹಜ ಲೈಂಗಿಕ ಕ್ರಿಯೆ ಸೇರಿದಂತೆ ಹಲವು ಆರೋಪಗಳನ್ನು ಈ ಐವರು ಆರೋಪಿಗಳ ಮೇಲೆ ಹೊರಿಸಲಾಗಿದೆ. ಸಾಕೇತ್ನ ತ್ವರಿತಗತಿ ನ್ಯಾಯಾಲಯದಲ್ಲಿ ಫೆ.5ರಂದು ಪ್ರಕರಣದ ವಿಚಾರಣೆ ಆರಂಭವಾಗಲಿದೆ.
ಬಿಜೆಪಿ ಬೆಂಬಲ, ಸಿಪಿಎಂ ವಿರೋಧ
ಮಹಿಳಾ ಸಂಘಟನೆಗಳ ಜತೆ ಕೈಜೋಡಿಸಿರುವ ಎಡಪಕ್ಷ ಸರ್ಕಾರದ ಅಧ್ಯಾದೇಶವು ಕಠಿಣವಾಗಿಲ್ಲ ಎಂದಿದೆ. ಆದರೆ ಕೇಂದ್ರದ ನಿರ್ಧಾರವನ್ನು ಬಿಜೆಪಿ ಸ್ವಾಗತಿಸಿದೆ. ಇದರ ಜತೆಗೆ ಪೊಲೀಸರ ಗಸ್ತು ಕಾರ್ಯವನ್ನು ಮತ್ತಷ್ಟು ಬಲಪಡಿಸಬೇಕೆಂದು ಅದು ಕೇಂದ್ರ ಸರ್ಕಾರಕ್ಕೆ ಸಲಹೆ ಮಾಡಿದೆ.
ಪತ್ನಿ ಮೇಲಿನ ರೇಪ್ಗೆ 7 ವರ್ಷ ಸಜೆ
ಪತಿ-ಪತ್ನಿ ಪ್ರತ್ಯೇಕವಾಗಿರುವ ಸಂದರ್ಭದಲ್ಲಿ ಪತ್ನಿಯ ಮೇಲೆ ಪತಿ ನಡೆಸುವ ಅತ್ಯಾಚಾರವನ್ನೂ ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಅಪರಾಧಿಗೆ 7 ವರ್ಷಗಳವರೆಗೆ ಶಿಕ್ಷೆ ವಿಧಿಸಲಾಗುವುದು ಎಂದು ಪ್ರಸ್ತಾಪಿತ ಅಧ್ಯಾದೇಶದಲ್ಲಿ ತಿಳಿಸಿದೆ. ಪ್ರಸ್ತುತ ಈ ಅಪರಾಧಕ್ಕೆ 2 ವರ್ಷ ಜೈಲನ್ನು ವಿಧಿಸಲಾಗುತ್ತಿದೆ. ಈ ಅವಧಿಯನ್ನು ಸರ್ಕಾರ 7 ವರ್ಷಕ್ಕೇರಿಸಿ ಅಧ್ಯಾದೇಶದಲ್ಲಿ ಪ್ರಕಟಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

