3 ಸಾರಿ ನಪಾಸ್ ಆತ್ಮಹತ್ಯೆಗೆ ಶರಣು

Updated on: 

ಬೆಂಗಳೂರು: ಸಿಎ ಪರೀಕ್ಷೆಯಲ್ಲಿ ನಪಾಸಾದ ಕಾರಣಕ್ಕೆ ಮಹಿಳೆ ನೇಣಿಗೆ ಶರಣಾದ ಘಟನೆ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಕೆ.ಆರ್.ಪುರದ ಎ.ನಾರಾಯಣಪುರ ನಿವಾಸಿ ಶ್ವೇತಾ ಕೇಸರ್ (30) ಆತ್ಮಹತ್ಯೆ ಮಾಡಿಕೊಂಡವರು. ಅಹಮದಾಬಾದ್ ಮೂಲದ ಇವರು ವಿನಯ್ ಕೇಸರ್ ಎಂಬುವವರೊಂದಿಗೆ ವಿವಾಹವಾಗಿದ್ದು, ದಂಪತಿ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ವಿನಯ್ ಅವರು ಎನ್‌ಎಎಲ್‌ನಲ್ಲಿ ಏರೋನಾಟಿಕ್ ಎಂಜಿನಿಯರ್ ಆಗಿದ್ದರು.ಗೃಹಿಣಿಯಾಗಿದ್ದ ಶ್ವೇತಾ  ಚಾರ್ಟೆಡ್ ಅಕೌಂಟೆಂಟ್ (ಸಿಎ) ಪರೀಕ್ಷೆ ತೆಗೆದುಕೊಂಡಿದ್ದರು. ಎರಡು ಬಾರಿ  ಪರೀಕ್ಷೆಯಲ್ಲಿ ನಪಾಸಾಗಿದ್ದರಿಂದ ಮತ್ತೆ ಪರೀಕ್ಷೆ ಬರೆದಿದ್ದರು. ಮೂರನೇ ಬಾರಿಯ ಪರೀಕ್ಷೆ ಫಲಿತಾಂಶ ಸೋಮವಾರ ಬಂದಿದ್ದು, ಅವರು ನಪಾಸಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com