ಪ್ರಧಾನ ಸುದ್ದಿ

ಪಾರ್ಟಿ, ಚಿಯರ್ ಗರ್ಲ್ಸ್‌ಗೆ ನಿಷೇಧ ?

ಪಾರ್ಟಿ, ಚಿಯರ್ ಗರ್ಲ್ಸ್‌ಗೆ ನಿಷೇಧ ?
Published On :

ನವದೆಹಲಿ: 'ಐಪಿಎಲ್ ಪಂದ್ಯಗಳ ನಂತರ ನಡೆಯುವ ಲೇಟ್‌ನೈಟ್ ಪಾರ್ಟಿಗಳು ಹಾಗೂ ಚಿಯರ್ ಗರ್ಲ್ಸ್‌ಗಳನ್ನು ನಿಷೇಧಿಸಿದರೆ, ದೇಶದ ದೊಡ್ಡ ಕ್ರಿಕೆಟ್ ಪಂದ್ಯಾವಳಿಗೆ ಅಂಟಿಕೊಂಡಿರುವ ಕಳಂಕವನ್ನು ತೊಡೆದುಹಾಕಬಹುದು' ಎಂದು ಬಿಸಿಸಿಐನ ಮಧ್ಯಂತರ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಅಭಿಪ್ರಾಯಪಟ್ಟಿದ್ದಾರೆ.
ಬಿಸಿಸಿಐಗೆ ಮಧ್ಯಂತರ ಅಧ್ಯಕ್ಷರಾಗಿ ಆಯ್ಕೆಯಾದ ನಂತರ, ಇದೇ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ ಅವರು, ಭಾರತೀಯ ಕ್ರಿಕೆಟ್ ಕಳೆದುಕೊಂಡಿರುವ ಹೆಸರನ್ನು ಮತ್ತೆ ಸ್ಥಾಪಿಸುವುದಾಗಿ ತಿಳಿಸಿದರು.
ಈ ನಿಟ್ಟಿನಲ್ಲಿ, ಹಲವಾರು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದ ಅವರು, ಈ ನಿಟ್ಟಿನಲ್ಲಿ ಮೊದಲು ಐಪಿಎಲ್‌ನ ತಡರಾತ್ರಿ ಪಾರ್ಟಿಗಳನ್ನು ಹಾಗೂ ಚಿಯರ್ ಗರ್ಲ್‌ಗಳನ್ನು ನಿಷೇಧಿಸಲು ಚಿಂತನೆ ನಡೆಸಿರುವುದಾಗಿ ತಿಳಿಸಿದರು. 'ಯಾವುದೋ ಒಂದು ಮ್ಯಾಜಿಕ್ ಮೂಲಕ ನಾವು ಕ್ರಿಕೆಟ್‌ಗೆ ಅಂಟಿಕೊಂಡಿರುವ ಕಳಂಕವನ್ನು ತೊಡೆದು ಹಾಕಲು ಸಾಧ್ಯವಿಲ್ಲ. ಸೂಕ್ತ ಕ್ರಮಗಳನ್ನು ಕೈಗೊಳ್ಳುವುದರಿಂದ ಇದನ್ನು ಸಾಧಿಸಬಹುದು. ಈ ನಿಟ್ಟಿನಲ್ಲಿ ನಾವು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ' ಎಂದು ತಿಳಿಸಿದರು.
ಶಿರ್ಕೆ, ಜಗದಾಳೆಗೆ ಮತ್ತಷ್ಟು ಸಮಯ: ಏತನ್ಮಧ್ಯೆ, ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ರಾಜಿನಾಮೆ ಸಲ್ಲಿಸಿದ್ದ ಸಂಜಯ್ ಜಗದಾಳೆ ಹಾಗೂ ಖಜಾಂಚಿ ಹುದ್ದೆಗೆ ರಾಜಿನಾಮೆ ಸಲ್ಲಿಸಿದ್ದ ಅಜಯ್ ಶಿರ್ಕೆ ಅವರ ಮನವೊಲಿಕೆಗೆ ಪ್ರಯತ್ನಿಸಲಾಗಿದೆ ಎಂದು ಹೇಳಿದ ದಾಲ್ಮಿಯಾ, ಬಿಸಿಸಿಐನ ಈ ಪ್ರಮುಖ ಹುದ್ದೆಗಳಿಗೆ ವಾಪಸ್ಸಾಗುವಂತೆ ಅವರನ್ನು ಕೇಳಿಕೊಳ್ಳಲಾಗಿದೆ. ಭಾನುವಾರ ನಡೆದ ಕಾರ್ಯಕಾರಣಿ ಸಭೆಯಲ್ಲಿ ಅವರು ಸಲ್ಲಿಸಿರುವ ರಾಜಿನಾಮೆ ಹಿಂಪಡೆಯುಂತೆ ಸೂಚಿಸಲಾಗಿತ್ತು. ಅದಕ್ಕಾಗಿ 24 ಗಂಟೆಗಳ ಗಡುವನ್ನೂ ನೀಡಲಾಗಿತ್ತು.
ಆದರೆ, ಅವರಿಂದ ಯಾವ ಉತ್ತರವೂ ಸಿಕ್ಕಿಲ್ಲ. ಸಂಧಾನ ಪ್ರಕ್ರಿಯೆಗಳು ಮುಂದುವರೆದಿದ್ದು, ಅವರಿಗೆ ತಮ್ಮ ರಾಜಿನಾಮೆಯನ್ನು ಹಿಂಪಡೆಯಲು ಇನ್ನೂ 24 ಗಂಟೆಗಳನ್ನು ನೀಡಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.