ಮಳೆ ಗಾಳಿ: ಹಳ್ಳಕ್ಕೆ ಬಿದ್ದು ಮಹಿಳೆ ಸಾವು
ಬೆಂಗಳೂರು: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿದ್ದ ಮಳೆ ಬೆಳಗಾವಿಯಲ್ಲಿ ತುಸು ಶಾಂತವಾಗಿದ್ದರೆ, ಕರಾವಳಿ ಸೇರಿದಂತೆ ರಾಜ್ಯದ ಕೆಲವು ಭಾಗದಲ್ಲಿ ಆರ್ಭಟ ತುಸು ಜೋರಾಗಿಯೇ ಇತ್ತು. ಮಂಗಳೂರಿನ ಅತ್ತಾವರ ಪುಣಿ ಬಳಿ ತೋಡು ದಾಟುತ್ತಿದ್ದ ಮಹಿಳೆಯೊಬ್ಬಳು ಕೊಚ್ಚಿ ಹೋಗಿದ್ದಾರೆ.
ವಿಮಲ (50) ಮೃತಪಟ್ಟವರು. ನೇತ್ರಾವತಿ ನದಿ ಸೇರುವ ಧಕ್ಕೆ ಬಳಿ ಈಕೆಯ ಕಳೇಬರ ಪತ್ತೆಯಾಗಿದೆ. ಪತಿಯನ್ನು ಕಳೆದುಕೊಂಡ ಇವರು ಮಕ್ಕಳಿಲ್ಲದೆ ಒಂಟಿಯಾಗಿದ್ದರು. ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಜಿಲ್ಲೆಯ ಉಗಾರಖುರ್ದ ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಕನ್ನಡ ಶಾಲೆ ಕುಸಿದಿದೆ. ಮಳೆಯ ಕಾರಣ ಶಾಲೆಗೆ ರಜೆ ಘೋಷಿಸಲಾಗಿತ್ತು. ಆದ್ದರಿಂದ ಯಾವುದೇ ಅವಘಡ ಸಂಭವಿಸಿಲ್ಲ.
ದೇವಸ್ಥಾನಕ್ಕೆ ಹಾನಿ: ಉಡುಪಿ ಜಿಲ್ಲೆಯ ಕಾರ್ಕಳದ ಅನಂತಶಯನ ದೇವಸ್ಥಾನದ ಗೋಡೆ ಕುಸಿದು 3 ಲಕ್ಷ ಹಾನಿಯಾಗಿದೆ. ಈ ಸಂದರ್ಭದಲ್ಲಿ ಅಲ್ಲಿಯೇ ನಿಂತಿದ್ದ ಕಾರಿನ ಮೇಲೂ ಗೋಡೆ ಬಿದ್ದು 1.5 ಲಕ್ಷ ನಷ್ಟ ಸಂಭವಿಸಿದೆ.
ಕಾಬೆಟ್ಟು ಎಂಬಲ್ಲಿ ಬಿಫಾತೀಮ ಎಂಬವರ ಮನೆಯ ಮೇಲೆ ಮರ ಬಿದ್ದು ಚಾವಣಿ ಬಿರುಕು ಬಿಟ್ಟು 30 ಸಾವಿರ, 7 ವಿದ್ಯುತ್ ಕಂಬಗಳು ಬಿದ್ದು ಮೆಸ್ಕಾಂಗೆ 60 ಸಾವಿರ ನಷ್ಟ ಸಂಭವಿಸಿದೆ. ಕಲ್ಲೀಲು ಎಂಬಲ್ಲಿ ಗೋಕುಲ್ದಾಸ್ ಅವರ ಶೆಡ್ಡಿನ ಮಾಡಿನ 20 ಶೀಟುಗಳು ಹಾರಿಹೋಗಿ 10 ಸಾವಿರ ನಷ್ಟ ಸಂಭವಿಸಿದೆ.
ನಂಜಾರು ಗ್ರಾಮದ ರಾಧ ಬೆಳ್ಜಡ ಎಂಬವರ ಮನೆ ಮೇಲೆ ಮರ ಬಿದ್ದು ಸುಮಾರು 10 ಸಾವಿರ ನಷ್ಟ ಸಂಭವಿಸಿದೆ. ಶಿರ್ವ ಗ್ರಾಮದ ರತ್ನಾ ಎಂಬವರ ಮನೆ ಭಾಗಶಃ ಹಾನಿಯಾಗಿ 10 ಸಾವಿರ ನಷ್ಟವಾಗಿದೆ.
ಕುಂದಾಪುರ ತಾಲೂಕಿನ ಮಳವಳ್ಳಿ ಜನತಾ ಕಾಲೋನಿಯ ಪ್ರಕಾಶ್ ಮೊಗೇರ ಎಂಬವರ ಮನೆಯ 50 ಹೆಂಚುಗಳ ಹಾರಿ, ಸುಮಾರು 1,500 ನಷ್ಟವಾಗಿದೆ. ಕಾಳಾವರ ಗ್ರಾಮದ ಕಾಪೋಡ್ಲು ಎಂಬಲ್ಲಿ ಸಾವಿತ್ರಿ ಮೋಗೆರ ಮನೆಯ ಸಿಮೆಂಟಿನ ತಗಡು ಮಾಡು ಗಾಳಿಗೆ ಹಾರಿ ಹೋಗಿ ಸುಮಾರು 25 ಸಾವಿರ ನಷ್ಟವಾಗಿದೆ.
ಬಂಗ್ರಕೂಳೂರು ರಸ್ತೆ ಬದಿ ಚರಂಡಿಯ ಹೂಳು ತೆಗೆಯುತ್ತಿದ್ದ ಹಿಟಾಚಿ ಜೋರಾದ ಮಳೆಗೆ ಕೆಸರಿನಲ್ಲಿ ಹೂತುಹೋಗಿತ್ತು. ಸುಮಾರು ಒಂದು ಗಂಟೆ ಸತತ ಪ್ರಯತ್ನದಿಂದ ಕ್ರೇನ್ ಮೂಲಕ ಹಿಟಾಚಿಯನ್ನು ಮೇಲೆತ್ತಲಾಯಿತು.
ಕೊಡಗಿನಲ್ಲಿ ಸಾಧಾರಣ ಮಳೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

