ಕ.ಪ್ರ.ವಾರ್ತೆ ಹಾಸನ ಮೇ 4
ಕ್ಷುಲ್ಲಕ ಕಾರಣಕ್ಕೆ ಒಂದು ಗುಂಪು ಮತ್ತೊಂದು ಗುಂಪಿನ ಮೇಲೆ ಹಲ್ಲೆ ಮಾಡಿರುವ ಘಟನೆ ಶನಿವಾರ ನಡೆದಿದೆ. ನಗರದ ಚಿಪ್ಪಿನಕಟ್ಟೆಯಲ್ಲಿ ಸಮೀರ್, ಶಹಬಾಸ್, ಹತಾಉಲ್ಲಾ, ಸೈಯದ್ ಇರ್ಫಾನ್ ಸೇರಿದಂತೆ ಆರು ಮಂದಿಯ ಮೇಲೆ ಹಲ್ಲೆ ನಡೆಸಲಾಗಿದೆ. ಮೌಲ್ವಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದ ಪರಿಣಾಮ ಜಮೀಲ್, ವಾಸಿಂ, ಮುಜಾಹಿತ್ ಮಕ್ಕಳು, ಶಾಹಿದ್, ರಿಹಾನ್ ಸೇರಿದಂತೆ ಇತರರು 6 ಮಂದಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದೇ ರೀತಿ ಪದೆ ಪದೇ ಜಗಳ ತೆಗೆದು ನಿವಾಸದಲ್ಲಿ ತೊಂದರೆ ನೀಡುತ್ತಿದ್ದಾರೆ ಎಂದು ಹಲ್ಲೆಗೊಳಗಾದವರು ಆರೋಪಿಸಿದ್ದಾರೆ. ಈ ವಿಚಾರವಾಗಿ ನಗರದ ಪೆನ್ಷ್‌ನ್ ಮೊಹಲ್ಲಾ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.