ಪುತ್ರನ ಶಿಕ್ಷಣಕ್ಕೆ ನಕಲಿ ಪ್ರಮಾಣ ಪತ್ರ ಸೃಷ್ಟಿ
ಮೈಸೂರು: ಮಗಳಿಗೆ ಎಂಜಿನಿಯರಿಂಗ್ ಸೀಟು ಕೊಡಿಸಲು ನಕಲಿ ದಾಖಲೆ ಸೃಷ್ಟಿಸಿರುವ ಆರೋಪದಿಂದ ಇಕ್ಕಟ್ಟಿಗೆ ಸಿಲುಕಿರುವ ಮರಿಬಾಶೆಟ್ಟಿ ಅವರು ಈಗ ಮತ್ತೊಂದು ಆರೋಪ ಕೇಳಿ ಬರುತ್ತಿದೆ. ಇದರಿಂದ 2009ರಲ್ಲಿ ಪ್ರಕಟವಾದ ಏಕಲವ್ಯ ಪ್ರಶಸ್ತಿ ಪುರಸ್ಕೃತರಲ್ಲಿ ಮರಿಬಾಶೆಟ್ಟಿ ಅವರ ಪುತ್ರ ಅರುಣ್ ಮರಿಬಾಶೆಟ್ಟಿ ಒಬ್ಬರು. ಇದರಿಂದ ಈ ಪ್ರಶಸ್ತಿ ಲಭಿಸಿರುವುದರ ಹಿಂದೆಯೂ ಅನುಮಾನ ಮೂಡತೊಡಗಿದೆ.
ಮೈಸೂರಿನ ಅಶ್ವಾರೋಹಿ ದಳದ ಕಮಾಂಡೆಂಟ್ ಮಕ್ಕಳಾದ ಕವಿತಾ ಮರಿಬಾಶೆಟ್ಟಿ ಮತ್ತು ಎಂ. ಅರುಣ್ ಮರಿಬಾಶೆಟ್ಟಿ ಒಂದೇ ಸ್ಪರ್ಧೆಯಲ್ಲಿ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದು, ಪ್ರಶಸ್ತಿ ಗಳಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಏನಾಗಿತ್ತು...: ವಕೀಲ ಕೆ. ಮಂಜುನಾಥ್ ಅವರು ನಜರ್ಬಾದ್ ಠಾಣೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಈ ಅಂಶವು ಅಡಕವಾಗಿದೆ. ಅದು, 1997ರಲ್ಲಿ ಕರ್ನಾಟಕ ಇಕ್ವಿಸ್ಟ್ರಿಯನ್ ಅಸೋಸಿಯೇಷನ್ ಮೈಸೂರಿನಲ್ಲಿ ನಡೆಸಿದ ಇಕ್ವೆಸ್ಟ್ರಿಯನ್ ಸ್ಪರ್ಧೆ ಕೇವಲ ಪ್ರದರ್ಶಕ ಕ್ರೀಡೆಯಾಗಿತ್ತೇ ಹೊರತು ಪದಕಕ್ಕೆ ಅರ್ಹವಾದ ಕ್ರೀಡೆಯಲ್ಲ ಎಂದು ಇಕ್ವೆಸ್ಟ್ರಿಯನ್ ಫೆಡರೇಷನ್ ಆಫ್ ಇಂಡಿಯಾ ಮಾಹಿತಿ ನೀಡಿದೆ.
ಆದರೆ, ಮರಿಬಾಶೆಟ್ಟಿ ಪುತ್ರಿ ಕವಿತಾ ಮರಿಬಾಶೆಟ್ಟಿ ಇಕ್ವೆಸ್ಟ್ರಿಯನ್ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ 2ನೇ ಸ್ಥಾನ ಪಡೆದು ಬೆಳ್ಳಿ ಪದಕ, 2500 ಬಹುಮಾನ ಹಾಗೂ ಇದೇ ಸ್ಪರ್ಧೆಯಲ್ಲಿ ಮರಿಬಾಶೆಟ್ಟಿ ಪುತ್ರ ಅರುಣ್ ಮರಿಬಾಶೆಟ್ಟಿ ಅವರನ್ನು ಎಂ. ಅರುಣ್ ಎಂದು ನಮೂದಿಸಿ, 3ನೇ ಸ್ಥಾನ ಪಡೆದು ಕಂಚಿನ ಪದಕ, 1001 ಬಹುಮಾನ ಪಡೆದಿದ್ದಾರೆ ಎಂದು ದಾಖಲೆಗಳಲ್ಲಿ ಇದೆ. ಒಂದೇ ಸ್ಪರ್ಧೆಯಲ್ಲಿ ಕವಿತಾ ಮರಿಬಾಶೆಟ್ಟಿ ಹಾಗೂ ಎಂ. ಅರುಣ್ ಅವರು ಕ್ರಮವಾಗಿ ದ್ವಿತೀಯ, ತೃತೀಯ ಸ್ಥಾನ ಗಳಿಸಿ, ಪದಕ ಹಾಗೂ ನಗದು ಬಹುಮಾನ ಪಡೆದಿರುವುದು ಅನುಮಾನಕ್ಕೆ ಕಾರಣವಾಗಿದೆ.
2009ರಲ್ಲಿ ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ಅರುಣ್ ಮರಿಬಾಶೆಟ್ಟಿ, ಈ ಪ್ರಶಸ್ತಿಗೆ ಪಡೆಯುವ ಮುನ್ನ ಪೂರಕವಾದ ಎಲ್ಲ ದಾಖಲೆ ಸಲ್ಲಿಸಿದ್ದು, ಅದರಲ್ಲಿ ಇಕ್ವೆಸ್ಟ್ರಿಯನ್ ಸ್ಪರ್ಧೆಯ ಪ್ರಮಾಣಪತ್ರವು ಸಲ್ಲಿಸಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ.
ಶಿಸ್ತು ಕ್ರಮ ಅಗತ್ಯವಿಲ್ಲ: ಮರಿಬಾಶೆಟ್ಟಿ ಅವರ ಮೇಲಿನ ಪ್ರಕರಣವು 14 ವರ್ಷದ ಹಿಂದಿನದಾಗಿದ್ದು, ಈಗ ಶಿಸ್ತು ಕ್ರಮ ಕೈಗೊಳ್ಳುವ ಅಗತ್ಯವಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕೆ.ಎಲ್. ಸುಧೀರ್ ಹೇಳಿದರು. ಅಶ್ವಾರೋಹಿದಳದ ಕೋ- ಆಪರೇಟಿವ್ ಸೊಸೈಟಿಯಲ್ಲಿ ಅವ್ಯವಹಾರ ನಡೆದಿತ್ತು. ಮರಿಬಾಶೆಟ್ಟಿ ಅವರು ಅದನ್ನು ಬಯಲಿಗೆ ಎಳೆದು, ಸಿಒಡಿ ತನಿಖೆ ಮಾಡಿಸಿದ್ದರು. ಸೊಸೈಟಿಯಲ್ಲಿದ್ದ ಕೆಲವು ನಿರ್ದೇಶಕರು ಈಗ 14 ವರ್ಷದ ಹಿಂದಿನ ಪ್ರಕರಣವನ್ನು ಕೆದಕಿದ್ದಾರೆ. ಮರಿಬಾಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಆಗಬೇಕಿದೆ ಎಂದು ಅವರು ಸ್ಪಷ್ಟಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

