ಶಾಲೆ ಬಿಟ್ಟ ಕಂಬಾರ; ಮರಳಿ ಕರೆ ತಂದ ಪುರಾಣಿಕ
ಗೋಕಾಕ: ಇಂದಿನ ಜಾಗತೀಕರಣ ವ್ಯವಸ್ಥೆಯಲ್ಲಿ ಕನ್ನಡ ಸಾಹಿತ್ಯ ನಶಿಸುತ್ತಿದೆ. ಇದರ ಜೀವಂತಿಕೆಗೆ ನಾವೆಲ್ಲರೂ ಒಂದಾಗಿ ನವಪೀಳಿಗೆಗೆ ಕನ್ನಡ ಸಾಹಿತ್ಯದ ಬಗ್ಗೆ ಅರಿವು ಮೂಡಿಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರ ಹೇಳಿದರು.
ನಗರದಲ್ಲಿ ಬುಧವಾರ ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ರೋಟರಿ ಸಂಸ್ಥೆಯ ಆಶ್ರಯದಲ್ಲಿ ಏರ್ಪಡಿಸಿದ್ದ ಹೆಸರಾಂತ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೃಷ್ಣಮೂರ್ತಿ ಪುರಾಣಿಕ ಅವರ ಸಾಹಿತ್ಯ ಸರ್ವಕಾಲಿಕ ಸತ್ಯವಾಗಿದೆ. ಅವರು ಒಬ್ಬ ಶಿಕ್ಷಕರಾಗಿ, ಶ್ರೇಷ್ಠ ಸಾಹಿತಿಯಾಗಿ ಹೊರಹೊಮ್ಮಿದ ಮಹಾನ್ ವ್ಯಕ್ತಿ. ಕಾದಂಬರಿ, ನಾಟಕ, ಕಥೆ ಹೀಗೆ ನೂರಾರು ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಸೃಜನಶೀಲ ಸಾಹಿತಿ. ಅಂಥ ಮಹಾನ್ ಸಾಹಿತಿ ಜನ್ಮ ಶತಮಾನೋತ್ಸವವನ್ನು ಅವರು ಹುಟ್ಟಿದ ನೆಲದಲ್ಲೇ ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.
ಪುರಾಣಿಕರನ್ನು ನೆನೆದು ಕಣ್ಣೀರಿಟ್ಟ ಕಂಬಾರರು: ಪುರಾಣಿಕ ಅವರು ನನ್ನ ನೆಚ್ಚಿನ ಗುರುಗಳಾಗಿದ್ದರು. ಬಡತನದ ಹಿನ್ನೆಲೆಯಲ್ಲಿ ನಾನು ಶಾಲೆ ಬಿಟ್ಟು ಮನೆಯಲ್ಲಿ ಕುಳಿತಾಗ ಮರಳಿ ನನಗೆ ಶಾಲೆಗೆ ಕರೆಯಿಸಿ ನನ್ನ ಓದು ಮುಂದುವರಿಸಲು ಅವರು ನೀಡಿದ ಸ್ಫೂರ್ತಿಯಿಂದಲೇ ಇಂದು ನಾನು ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು ಎಂದು ಸ್ಮರಸಿಕೊಳ್ಳುತ್ತ ಕಣ್ಣೀರಿಟ್ಟರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುರಾಣಿಕ ಅವರ ಪುತ್ರ ಆನಂದ ಪುರಾಣಿಕ ಅವರು ಮಾತನಾಡಿ, ಗೋಕಾಕನಲ್ಲಿ ಕುಳಿತು ಸಾಹಿತಿ ಕೃಷಿ ಮಾಡಿ ನಾಡಿಗೆ ಅರ್ಪಿಸಿದ ತಮ್ಮ ತಂದೆ ಪುರಾಣಿಕ ಅವರ ಬದುಕು ಬರಹ ಮೆಲಕು ಹಾಕಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

