ಪ್ರಧಾನ ಸುದ್ದಿ

ಯುಪಿಎ ಸರ್ಕಾರದವರು ತಿಂದದ್ದು ಕಲ್ಲಿದ್ದಲು ಕಡತವನ್ನಲ್ಲ..

ಯುಪಿಎ ಸರ್ಕಾರದವರು ತಿಂದದ್ದು ಕಲ್ಲಿದ್ದಲು ಕಡತವನ್ನಲ್ಲ..
Published On :

ವಂದನೆಗಳು
ಬೆಂಗಳೂರಿನ, ಕರ್ನಾಟಕದ ಬಂಧು ಭಗಿನಿಯರೇ, ನಿಮಗೆಲ್ಲಾ ನನ್ನ ನಮಸ್ಕಾರಗಳು. ಬೆಂಗಳೂರು ನಿರ್ಮಾತೃ ಕೆಂಪೇಗೌಡ, ಸಂತ ಬಸವೇಶ್ವರ, ಕನಕದಾಸ, ಕಿತ್ತೂರು ರಾಣಿ ಚೆನ್ನಮ್ಮ ಎಲ್ಲರಿಗೂ ನನ್ನ ಸತ್ಪ್ರಣಾಮಗಳು.

ಜೀವ ಕಳೆದರು
ಕಲ್ಲಿದ್ದಲು ಹಗರಣ ಕಡತಗಳು ಕಾಣೆಯಾಗಿವೆ ಎಂದು ಯುಪಿಎ ಸರ್ಕಾರ ಸುಪ್ರೀಂನಲ್ಲಿ ಹೇಳಿತ್ತು. ಕಲ್ಲಿದ್ದಲಷ್ಟೇ ಅಲ್ಲ ಕಡತವನ್ನೂ ಅವರು ತಿಂದರು. ಆದರೆ, ಕಳೆದದ್ದು ಕಡತಗಳಲ್ಲ, ಹಿಂದೂಸ್ತಾನದ ಇಡೀ ಜೀವನ.

ಕೌಶಲ್ಯಬೇಕು
ನಾವು ಭಾಗ್ಯವಂತರು. ನಮ್ಮಲ್ಲಿ 2 ಅಮೂಲ್ಯ ವಸ್ತುಗಳಿವೆ. ಒಂದು ಶಕ್ತಿಶಾಲಿ ಪ್ರಜಾಪ್ರಭುತ್ವ. ಇನ್ನೊಂದು ಯುವ ಸಮುದಾಯ. ಅವರಿಗೆ ಕೌಶಲ್ಯ ತರಬೇತಿ ನೀಡಿದರೆ ದೇಶ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ.

ನಂಬದವರು
ಪ್ರಜಾಪ್ರಭುತ್ವದ ಕುತ್ತಿಗೆ ಹಿಸುಕುವುದು ಕಾಂಗ್ರೆಸ್ ಸಂಸ್ಕೃತಿ. ಸಾಮಾಜಿಕ ಜಾಲತಾಣಗಳಿಗೆ ಕಡಿವಾಣ ಹಾಕಲು ಹೊಸ ದಾರಿ ಹುಡುಕುತ್ತಿದೆ. ಇವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ.

ಕೀಳು ಭಾಷೆ
ಚಿದು ಹೇಳುತ್ತಾರೆ, 15 ಕೊಟ್ಟು ನೀರು ಕುಡಿಯುತ್ತೀರಿ. 20 ಕೊಟ್ಟು ಐಸ್‌ಕ್ರೀಂ ತಿನ್ನುತ್ತೀರಿ. ಅಕ್ಕಿ ಬೆಲೆ 1 ಹೆಚ್ಚಾದರೆ ಯಾಕೆ ಕೂಗುತ್ತೀರಿ ಎಂದು. ಇದು ಮಧ್ಯಮ ವರ್ಗದವರು, ಬಡವರ ಬಗ್ಗೆ ಬಳಸುವ ಭಾಷೆಯೇ?

ಜನಾದೇಶ
ಚುನಾವಣಾ ಪೂರ್ವ ಸಮೀಕ್ಷೆ, ಟಿವಿಗಳಲ್ಲಿ ಪ್ರಸಾರವಾಗುವುದನ್ನು ಬಂದ್ ಮಾಡಬಹುದು. ಆದರೆ, ಜನತಾ ಜನಾರ್ದನನ ಅಭಿಪ್ರಾಯವನ್ನು ತಡೆಯಲು ಸಾಧ್ಯವಿಲ್ಲ. ಚುನಾವಣೆಯಲ್ಲಿ ಆತ ತನ್ನ ಸಾಮರ್ಥ್ಯ ತೋರಿಸಲಿದ್ದಾನೆ.

ಐಸಿಯುಗೆ
ದೇಶದ ಆರ್ಥಿಕ ಸ್ಥಿತಿ ಸಂಕಷ್ಟದಲ್ಲಿದೆ. ರುಪಾಯಿ ಮೌಲ್ಯ ಕುಸಿಯುತ್ತಿದೆ. ಯುಪಿಎ ಸರ್ಕಾರ ರುಪಾಯಿಯನ್ನು ಐಸಿಯುಗೆ ತಳ್ಳಿದೆ. ಇದೇ ರೀತಿ ಮುಂದುವರಿದರೆ ಯಾವಾಗ, ಏನಾಗುತ್ತದೋ ಗೊತ್ತಿಲ್ಲ.

ಸಹಿಸದವರು
ಜನರಿಗೆ ಶಾಂತಿ, ನೆಮ್ಮದಿ ಮೂಡಿಸಿದ ಹಾಡುಗಳನ್ನು ಹಾಡಿದ ಲತಾ ಮಂಗೇಶ್ಕರ್ ಮೋದಿ ಪ್ರಧಾನಿಯಾದರೆ ಚೆನ್ನಾಗಿರುತ್ತದೆ ಎಂದರೆ ಆಕೆಗೆ ನೀಡಿದ ಭಾರತ ರತ್ನ ಹಿಂಪಡೆಯಿರಿ ಎಂದು ಕಾಂಗ್ರೆಸ್‌ನವರು ಒತ್ತಾಯಿಸುತ್ತಾರೆ.

ಜೈ ವಿಜ್ಞಾನ್
ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಜೈ ಜವಾನ್, ಜೈ ಕಿಸಾನ್ ಎಂದಿದ್ದರು. ವಾಜಪೇಯಿಯವರು ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಎಂದರು. ಇಂದು ಈ ಮೂರೂ ಕ್ಷೇತ್ರಗಳು ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಸಿಬಿಐ ಕಾರಣ
ನಾನು ಜವಾಬ್ದಾರಿಯಿಂದಲೇ ಈ ಮಾತು ಹೇಳುತ್ತಿದ್ದೇನೆ. ಯುಪಿಎ ಸರ್ಕಾರ ನಡೆಯುತ್ತಿರುವುದು ಬಹುಮತದ ಆಧಾರದ ಮೇಲೆ ಅಲ್ಲ, ಸಿಬಿಐ ಕಾರಣದಿಂದ. ಬಹುಮತ ಬೇಕಾದರೆ ಅವರು ಬೆದರಿಸುತ್ತಾರೆ.

ಜನಸಾಗರ
ಸಾಕಷ್ಟು ಬಾರಿ ಬೆಂಗಳೂರಿಗೆ ಬಂದಿದ್ದೆ. ಕರ್ನಾಟಕದ ಇತಿಹಾಸದಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೆ ಇಷ್ಟು ವಿಶಾಲ ಜನಸಾಗರ ನೋಡಲು ಸಾಧ್ಯವಾಗಲಿಲ್ಲ. ಇಂದಿನ ಜನಸ್ತೋಮ ನೋಡಿದರೆ ಕೇಸರಿ ಸಮುದ್ರ ಅಲೆ ಎಬ್ಬಿಸಿದಂತಿದೆ.

ವ್ಯಾಮೋಹ
ಅಧಿಕಾರ ವಿಷ ಎಂದು ಹೇಳಿ ಜನರನ್ನು ದೂರ ಇಡುವ ಕೆಲಸವನ್ನು ಒಂದು ಪಕ್ಷ, ಕುಟುಂಬ ಮಾಡುತ್ತಿದೆ. ವಿಷ ನಮಗಿರಲಿ, ನೀವು ಅದರತ್ತ ಸುಳಿಯಬೇಡಿ ಎಂದು ಹೇಳುತ್ತಾ ಅಧಿಕಾರವನ್ನು ಅನುಭವಿಸುತ್ತಿದ್ದಾರೆ.

ಅಮೃತವಾಗಲಿ
ಇನ್ನು 9 ವರ್ಷಗಳಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಗುತ್ತದೆ. ಈ ಅಮೃತ ವರ್ಷಾಚರಣೆ ನಿಜವಾಗಬೇಕಾದರೆ ದೇಶ ಸ್ವರಾಜ್ಯವಾಗಬೇಕು.  ಕುಶಾಸನ ದೂರ ಮಾಡಿ ಸುಶಾಸನವನ್ನು ರೂಪಿಸಬೇಕು.

ಅಭಿನಂದನೆ
ದೇಶದ ಗೌರವ ಹೆಚ್ಚಿಸಿದ ಪ್ರೊ.ಸಿ.ಎನ್.ಆರ್. ರಾವ್‌ಗೆ, ಕ್ರೀಡಾ ಜಗತ್ತನ್ನು ಹೊಸ ಉನ್ನತಿಗೆ ಕೊಂಡೊಯ್ದ ಸಚಿನ್ ತೆಂಡೂಲ್ಕರ್ ಅವರಿಗೂ ಭಾರತ ರತ್ನ ಸಿಕ್ಕಿದ್ದು, ಅವರಿಗೂ ತುಂಬು ಹೃದಯದ ಅಭಿನಂದನೆ.

ಷಡ್ಯಂತ್ರ
ಬಿಜೆಪಿ, ಮೋದಿ ಬಗ್ಗೆ ಎಂತೆಂಥ ಭಾಷೆ ಪ್ರಯೋಗಿಸಲಾಗುತ್ತಿದೆ. ಷಡ್ಯಂತ್ರಗಳನ್ನು ಮಾಡಲಾಗುತ್ತಿದೆ. ಸಾಗರೋಪಾದಿ ಕಾರ್ಯಕರ್ತರು ಪಾಲ್ಗೊಳ್ಳುವ ಸಮಾವೇಶಗಳ ದೃಶ್ಯ ನೋಡಲಾಗದೆ ಸಾಕಷ್ಟು ಪಿತೂರಿ ನಡೆಸಲಾಗುತ್ತಿದೆ.

ಇದು ವ್ಯಂಗ್ಯ
ದಿನಕ್ಕೆ 26 ಆದಾಯವಿದ್ದರೆ ಅದು ಬಡ ಕುಟುಂಬವಲ್ಲ ಎಂದು ಹೇಳುತ್ತಾರೆ. ಆದರೆ ಈ ಹಣಕ್ಕೆ ಅರ್ಧ ಕೆಜಿ ಈರುಳ್ಳಿಯೂ ಬರುವುದಿಲ್ಲ. ಇನ್ನು ಬಡತನ ಎಂಬುದು ಮಾನಸಿಕ ಅವಸ್ಥೆ ಎಂದು ಕಾಂಗ್ರೆಸ್‌ನವರು ಹೇಳುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.