ಪ್ರಧಾನ ಸುದ್ದಿ

ಕಟಕಟೆಯನ್ನೇ ಹತ್ತದ ಕಟುಕರು

ಕಟಕಟೆಯನ್ನೇ ಹತ್ತದ ಕಟುಕರು
Published On :

ಮುಂಬೈ ದಾಳಿ ನಡೆದು ಇಂದಿಗೆ 5 ವರ್ಷ. ಕಸಬ್ ಗಲ್ಲಿಗೇರಿಸಿದ್ದು ಬಿಟ್ಟರೆ ನಾವು ಸಾಧಿಸಿದ್ದು ಏನೇನೂ ಇಲ್ಲ. ಪಾಕ್‌ನಲ್ಲಿರುವ ನಿಜವಾದ ದುಷ್ಕರ್ಮಿಗಳ ವಿಚಾರಣೆಯೇ ಆರಂಭವಾಗಿಲ್ಲ.

166 ಮಂದಿ ಮುಂಬೈ ದಾಳಿ ವೇಳೆ ಮೃತಪಟ್ಟವರು
308 ಮಂದಿ ದಾಳಿ ವೇಳೆ ಗಾಯಗೊಂಡವರು

7 ಕಡೆ ತಾಜ್ ಹೊಟೇಲ್, ಛತ್ರಪತಿ ಶಿವಾಜಿ ಟರ್ಮಿನಸ್, ಲಿಯೋಫೋಲ್ಡ್ ಕೆಫೆ, ಕಾಮಾ ಆಸ್ಪತ್ರೆ ಸೇರಿದಂತೆ ಏಳು ಕಡೆ ದಾಳಿ ನಡೆದಿತ್ತು. 68 ಗಂಟೆ ಉಗ್ರರನ್ನು ಹೊಡೆದುರುಳಿಸಲು ಭದ್ರತಾ ಸಿಬ್ಬಂದಿ ತೆಗೆದುಕೊಂಡ ಸಮಯ. 10 ಮಂದಿ ಉಗ್ರರು ದಾಳಿಯಲ್ಲಿ ಪಾಲ್ಗೊಂಡಿದ್ದರು. 7 ಮಂದಿ ಪಾಕಿಸ್ತಾನದಲ್ಲಿರುವ ಆರೋಪಿಗಳು. ಈ ಏಳೂ ಮಂದಿ ಜಾಮೀನು ಮೇಲೆ ಬಿಡುಗಡೆಯಾಗಿದ್ದಾರೆ. ಎಲ್‌ಇಟಿ ಸಂಸ್ಥಾಪಕ ಹಫೀಜ್ ಸಯೀದ್, ಎಲ್‌ಇಟಿ ಮುಖಂಡ ಲಖ್ವಿ ಸೇರಿ 7 ಮಂದಿ.
17 ಮಂದಿ ಭದ್ರತಾ ಸಿಬ್ಬಂದಿ ಸಾವು

ಅಜ್ಮಲ್ ಕಸಬ್: ಪ್ರಕರಣದಲ್ಲಿ ಗಲ್ಲಿಗೆ ಗುರಿಯಾದ ಏಕೈಕ ಉಗ್ರ


ಇಡೀ ದೇಶವನ್ನೇ ನಡುಗಿಸಿದ ಮುಂಬೈ ದಾಳಿ ನಡೆದು ಇಂದಿಗೆ ಐದು ವರ್ಷ ಪೂರ್ಣಗೊಂಡಿದೆ. ಭಾರತದ ವಾಣಿಜ್ಯ ನಗರಿ ಮೇಲೆ ನಡೆದ ಈ ಪಾಕ್ ಪ್ರೇರಿತ ದಾಳಿಯಲ್ಲಿ ಮೃತಪಟ್ಟ 166 ಮಂದಿ ಕುಟುಂಬ ಇನ್ನೂ ಕಣ್ಣೀರು ಹಾಕುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆನ್ನುವ ಹೋರಾಟಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ. ದಾಳಿ ವೇಳೆ ಜೀವಂತವಾಗಿ ಸೆರೆ ಸಿಕ್ಕ ಪಾಕ್ ಉಗ್ರ ಅಜ್ಮಲ್ ಕಸಬ್‌ನನ್ನು ಗಲ್ಲಿಗೇರಿಸಿದ್ದು ಬಿಟ್ಟರೆ ಸರ್ಕಾರ ಸಾಧಿಸಿದ್ದೇನೂ ಇಲ್ಲ. ಇದೇ ರೀತಿಯ ಮತ್ತಷ್ಟು ದಾಳಿಗಳ ಭೀತಿಯ ನಡುವೆಯೂ ಭದ್ರತಾ ವ್ಯವಸ್ಥೆ ಬಲವರ್ಧನೆ ಕಾರ್ಯ ಆಮೆಗತಿಯಲ್ಲಿದೆ...

ನ. 26,2008, ಇಡೀ ವಿಶ್ವವೇ ಬೆಚ್ಚಿ ಬಿದ್ದ ದಿನವದು. ಮುಂಬೈನಲ್ಲಿನ ತಾಜ್ ಹೊಟೇಲ್ ಸೇರಿದಂತೆ 7 ಕಡೆಗಳಲ್ಲಿ ಪಾಕ್‌ನಿಂದ ಬಂದಿದ್ದ ಉಗ್ರರು ಮನಬಂದಂತೆ ಗುಂಡು ಹಾರಿಸುತ್ತಾ ನೂರಾರು ಜನರ ಪ್ರಾಣ ಬಲಿತೆಗೆದುಕೊಂಡಿದ್ದರು. ಅಂದು ಆರಂಭವಾದ ದಾಳಿ ಸತತ ನಾಲ್ಕು ದಿನ ನಡೆದಿತ್ತು. ಸರ್ಕಾರ ಕೈಕಟ್ಟಿ ಕುಳಿತಿದ್ದರೆ, ಯೋಧರು ಜನರ ರಕ್ಷಣೆಗೆ ಮುಂದಾಗಿದ್ದರು. ಇದು ನಡೆದು 5 ವರ್ಷವಾದರೂ ಜನರಿಗೆ ನ್ಯಾಯ ಸಿಕ್ಕಿಲ್ಲ ಎಂಬುದು ದುರ್ದೈವದ ಸಂಗತಿಯೇ ಸರಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.