ಪ್ರಧಾನ ಸುದ್ದಿ

ರಮಣಶ್ರೀ ಶರಣ ಪ್ರಶಸ್ತಿಗೆ ಆಯ್ಕೆ

Published On :

ಬೆಂಗಳೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ರಮಣಶ್ರೀ ಪ್ರತಿಷ್ಠಾನದ ಸಹಯೋಗದಲ್ಲಿ ನೀಡುವ 'ರಮಣಶ್ರೀ ಶರಣ ಪ್ರಶಸ್ತಿ'ಗೆ ಪ್ರಸಕ್ತ ಸಾಲಿಗೆ ಮೂವರು ಸಾಧಕರು ಹಾಗೂ ಒಂದು ಸಂಸ್ಥೆಯನ್ನು ಆಯ್ಕೆ ಮಾಡಿದೆ.
ಜತೆಗೆ, ಪ್ರಸಕ್ತ ಸಾಲಿನಿಂದ 'ಉತ್ತೇಜನ ಪ್ರಶಸ್ತಿ'ಯನ್ನೂ ಆರಂಭಿಸಿದ್ದು, ಅದಕ್ಕೂ ಮೂವರು ಸಾಧಕರು ಹಾಗೂ ಒಂದು ಸಂಸ್ಥೆಯನ್ನು ಆಯ್ಕೆ ಮಾಡಿದೆ. ಸಂಶೋಧನೆ, ವಚನ ರಚನೆ, ವಚನ ಸಂಗೀತ ಹಾಗೂ ಶರಣ ಸಂಸ್ಕೃತಿ ಪ್ರಸಾರ ಎಂಬ ನಾಲ್ಕು ವಿಭಾಗಗಳಲ್ಲಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಪ್ರಶಸ್ತಿ ಪ್ರದಾನ ಸಮಾರಂಭ ನ. 18ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.

ರಮಣಶ್ರೀಪ್ರಶಸ್ತಿ: ಮೈಸೂರಿನ ಡಾ.ಓ.ಎಲ್.ನಾಗಭೂಷಣ ಸ್ವಾಮಿ-ಸಂಶೋಧನೆ, ನಗರದ ಪ್ರೊ.ಜಿ.ಎಚ್.ಹನ್ನೆರಡು ಮಠ- ವಚನ ರಚನೆ, ರಾಯಚೂರಿನ ಪಂ. ಅಂಬಯ್ಯನುಲಿ- ವಚನ ಸಂಗೀತ ಮತ್ತು ಬಿಜಾಪುರದ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರ-ಶರಣ ಸಂಸ್ಕೃತಿ ಪ್ರಸಾರ ವಿಭಾಗಗಳಲ್ಲಿ ರಮಣಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ತಲಾ ರು. 25 ಸಾವಿರ ಗೌರವಧನ ಮತ್ತು ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ.

ಉತ್ತೇಜನ ಪ್ರಶಸ್ತಿ: ಭಾಲ್ಕಿಯ ಡಾ.ಮೀನಾಕುಮಾರಿ ಪಾಟೀಲ್-ಸಂಶೋಧನೆ, ಧಾರವಾಡದ ಶ್ವೇತಾ ಕರ್ಕಿ-ವಚನ ರಚನೆ, ನಗರದ ಪಂ. ರವೀಂದ್ರ ಸೊರಗಾವಿ- ವಚನ ಸಂಗೀತ ಮತ್ತು ನಗರದ ವಚನ ಜ್ಯೋತಿ ಬಳಗ-ಶರಣ ಸಂಸ್ಕೃತಿ ಪ್ರಸಾರ ವಿಭಾಗಗಳಲ್ಲಿ ಉತ್ತೇಜನ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಪ್ರಶಸ್ತಿಯು ತಲಾ ರು. 10 ಸಾವಿರ ಗೌರವಧನ ಮತ್ತು ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ ಎಂದು ಪರಿಷತ್ ಅಧ್ಯಕ್ಷ ಗೊ.ರು.ಚನ್ನಬಸಪ್ಪ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.