ಪ್ರಧಾನ ಸುದ್ದಿ

ಮಳೆಗೆ ಬಾಲಕ ಬಲಿ

Published On :

ಬೆಂಗಳೂರು: ನಗರ ಸೇರಿದಂತೆ ಭಾನುವಾರ ತಡ ರಾತ್ರಿಯಿಂದ ಈಚೆಗೆ ಸುರಿದ ಮಳೆಗೆ ದಾವಣಗೆರೆಯಲ್ಲಿ ಬಾಲಕನೊಬ್ಬ ಬಲಿಯಾಗಿದ್ದಾನೆ. ಬಿಡದೆ ಸುರಿದ ಮಳೆಯಿಂದ ದಾವಣೆಗೆರೆಯಲ್ಲಿ ಭಾನುವಾರ ಚರಂಡಿಗಳ ತುಂಬಿದ್ದು, 11 ವರ್ಷದ ನಾಗಾರ್ಜುನ ಕೊಚ್ಚಿ ಹೋಗಿದ್ದ. ಮಳೆ ಎಂದು ಮಗ ಎಲ್ಲಿಯೋ ಆಶ್ರಯ ಪಡೆದಿರಬಹುದು ಎಂದು ಆತನ ಆಗಮನದ ನಿರೀಕ್ಷೆಯಲ್ಲಿದ್ದ ಪೋಷಕರಿಗೆ ಅವನ ಶವ ಸೋಮವಾರ ಪತ್ತೆಯಾಗಿದೆ.

ತಂಪಾಗಿದೆ ಇಳೆ:
ವಿಪರೀತ ಬಿಸಿಲಿನಿಂದ ಕುದಿಯುತ್ತಿದ್ದ ಗುಲ್ಬರ್ಗ ನಗರ ಹಾಗೂ ಸುತ್ತಮುತ್ತಲಿನ 20 ಕಿ.ಮೀ.ವ್ಯಾಪ್ತಿಯಲ್ಲಿ ಬಿರುಸಿನ ಮಳೆ ಸುರಿದು, ಇಳೆ ತಂಪಾಗಿದೆ. ಉರಿ ಬಿಸಿಲಿನೊಂದಿಗೇ ಮಳೆ ಸುರಿದ ಕಾರಣ ಬೆಳಕಿನಿಂದ ಫಳಫಳ ಹೊಳೆಯುತ್ತಿದ್ದ ಆಗಸದಲ್ಲಿ ಕಾಮನಬಿಲ್ಲು ಮೂಡಿದ್ದು, ಇದನ್ನು ಕಂಡ ಜನರು ಪುಳಕಿತರಾದರು.

ಫಸಲು ಹಾನಿ:
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕೆಲವು ಗ್ರಾಮಗಳಲ್ಲಿ ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಲಕ್ಷಾಂತರ ರುಪಾಯಿ ಮೌಲ್ಯದ ಫಸಲು ಹಾನಿಯಾಗಿದೆ. ಕೆಲವೆಡೆ ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದಿರುವುದರಿಂದ ವಿದ್ಯುತ್ ಕಡಿತಗೊಂಡಿದೆ. ಕೆಲವು ಮನೆಗಳ ಹಂಚುಗಳು ಗಾಳಿಗೆ ಹಾರಿ ಹೋದರೆ, ಮತ್ತಷ್ಟು ಮನೆಗಳಿಗೆ ನೀರು ನುಗ್ಗಿ ಹಾನಿಯುಂಟಾಗಿದೆ. ಮೈಸೂರು ನಗರ ಸೇರಿದಂತೆ ಜಿಲ್ಲೆಯ ಕೆಲವೆಡೆ ವರುಣನ ಸಿಂಚನವಾಗಿದೆ. ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಸುತ್ತಮುತ್ತ ನಿರಂತರವಾಗಿ ಸುರಿದ ಮಳೆಗೆ ಕೆಲವು ಕಾಫಿ ತೋಟಗಳಲ್ಲಿ ಭೂಕುಸಿತ ಉಂಟಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.