ಮೈಕ್ರೋಸಾಫ್ಟ್ ಮಡಿಲಿಗೆ ನೋಕಿಯಾ
ಹೆಲ್ಸಿಂಕಿ/ಮುಂಬೈ: ಸಾಫ್ಟ್ವೇರ್ ದಿಗ್ಗಜ ಮೈಕ್ರೋಸಾಫ್ಟ್ ಕಂಪನಿಯು ಫಿನ್ಲೆಂಡ್ನ ಹ್ಯಾಂಡ್ಸೆಟ್ ಉತ್ಪಾದಕ ಕಂಪನಿ ನೋಕಿಯಾದ ಹ್ಯಾಂಡ್ಸೆಟ್ ಉದ್ದಿಮೆಯನ್ನು ಖರೀದಿಸುವುದಾಗಿ ಘೋಷಿಸಿದೆ. ಒಂದು ಕಾಲದಲ್ಲಿ ಮೊಬೈಲ್ ಫೋನ್ ಕ್ಷೇತ್ರದ ನಿರ್ವಿವಾದಿತ ದೊರೆಯಾಗಿ ಮೆರೆದ ನೋಕಿಯಾ ಕಂಪನಿ ಈಗ ಆ್ಯಪಲ್, ಸ್ಯಾಮ್ಸಂಗ್ನಂತಹ ಸ್ಮಾರ್ಟ್ಫೋನ್ ಉತ್ಪಾದಕರ ಪೈಪೋಟಿಯಿಂದಾಗಿ ನೆಲೆ ಕಳೆದುಕೊಳ್ಳುವ ಭೀತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ತನ್ನ ಜನಪ್ರಿಯತೆಯನ್ನು ಮತ್ತೆ ಪ್ರಚುರಪಡಿಸುವ ಉದ್ದೇಶದಿಂದ ನೋಕಿಯಾ, ಮೈಕ್ರೋಸಾಫ್ಟ್ ಈ ಒಪ್ಪಂದಕ್ಕೆ ಬಂದಿವೆ.
480 ಶತಕೋಟಿಗೆ ಖರೀದಿ: ನೋಕಿಯಾದ ಮೊಬೈಲ್ ಫೋನ್ ಉದ್ದಿಮೆಯನ್ನು ಮೈಕ್ರೋಸಾಫ್ಟ್ ಬರೋಬ್ಬರಿ 480 ಶತಕೋಟಿಗೆ ಖರೀದಿಸಲಿದೆ. 2014ರ ಮೊದಲ ತ್ರೈಮಾಸಿಕದಲ್ಲಿ ಈ ಒಪ್ಪಂದ ಪೂರ್ಣಗೊಳ್ಳಲಿದೆ.
ಒಪ್ಪಂದದ ಪ್ರಕಾರ, ಮೊದಲು ನೋಕಿಯಾದ ಎಲ್ಲ ಸಾಧನಗಳು ಹಾಗೂ ಸೇವೆಯನ್ನು ಖರೀದಿಸಲು ಮೈಕ್ರೋಸಾಫ್ಟ್ 335 ಶತಕೋಟಿ ನೀಡಲಿದೆ. ಬಳಿಕ ನೋಕಿಯಾದ ಪೇಟೆಂಟ್ಗಳನ್ನು ಪಡೆಯಲು 146 ಶತಕೋಟಿ ಪಾವತಿಸಲಿದೆ. ನೋಕಿಯಾದ ಲೈಸೆನ್ಸ್ ಹಾಗೂ ಮ್ಯಾಪಿಂಗ್ ಸೇವೆ ಕೂಡ ಮೈಕ್ರೋಸಾಫ್ಟ್ ಸ್ವಾಧೀನಕ್ಕೆ ಬರಲಿದೆ.
2011ರ ಜುಲೈನಲ್ಲಷ್ಟೇ ನೋಕಿಯಾವು, ತನ್ನ ಲೂಮಿಯಾ ಸ್ಮಾರ್ಟ್ಫೋನ್ ಸರಣಿಗೆ ವಿಂಡೋಸ್ ಸಾಫ್ಟ್ವೇರ್ ಬಳಸುವ ಮೂಲಕ ಮೈಕ್ರೋಸಾಫ್ಟ್ನೊಂದಿಗೆ ಪಾಲುದಾರಿಕೆ ಹೊಂದುತ್ತೇವೆ ಎಂದು ಘೋಷಿಸಿತ್ತು.
ಅಧಿಕಾರಿಗಳೂ ವಲಸೆ
ಕೇವಲ ಸ್ಮಾರ್ಟ್ಫೋನ್ ಬಿಸಿನೆಸ್ ಮಾತ್ರವಲ್ಲ, ನೋಕಿಯಾದ ದೊಡ್ಡ ದೊಡ್ಡ ತಲೆಗಳೂ ಮೈಕ್ರೋಸಾಫ್ಟ್ಗೆ ವಲಸೆ ಹೋಗಲಿವೆ. ನೋಕಿಯಾದ ಹಾಲಿ ಸಿಇಓ ಸ್ಟೀಫನ್ ಇಲೋಪ್ ಸೇರಿದಂತೆ ಹಿರಿಯ ಕಾರ್ಯಕಾರಿ ಅಧಿಕಾರಿಗಳು ಮೈಕ್ರೋಸಾಫ್ಟ್ಗೆ ಸೇರ್ಪಡೆಯಾಗಲಿದ್ದಾರೆ. ಆದರೆ ಅವರು ಅಲ್ಲಿ ಯಾವ ಹುದ್ದೆ ನಿರ್ವಹಿಸುತ್ತಾರೆ ಎಂಬ ಮಾಹಿತಿಯಿಲ್ಲ. ಈ ಅವಧಿಯಲ್ಲಿ ಟಿಮೋ ಇಹಾವುವೋಟಿಲಾ ಅವರು ನೋಕಿಯಾದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಇದೇ ವೇಳೆ, ಒಪ್ಪಂದವು ಪೂರ್ಣಗೊಂಡೊಡನೆ ನೋಕಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 32 ಸಾವಿರ ನೌಕರರು ಮೈಕ್ರೋಸಾಫ್ಟ್ಗೆ ವರ್ಗವಾಗಲಿದ್ದಾರೆ. ಇವರಲ್ಲಿ ಫಿನ್ಲೆಂಡ್ನ 4,700 ಮಂದಿಯೂ ಸೇರಿರುತ್ತಾರೆ. ಇದೇ ವೇಳೆ, ಸಂಸ್ಥೆಯ ಪ್ರಧಾನ ಕಚೇರಿ ಹಾಗೂ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ ಫಿನ್ಲೆಂಡ್ನಲ್ಲೇ ಇರಲಿವೆ.
ಹೈ ವ್ಯಾಲ್ಯೂ ಸೇವೆಗಳು
- ಮೈಕ್ರೋಸಾಫ್ಟ್ನಲ್ಲಿ ಆಫೀಸ್, ಸ್ಕೈಪ್, ಎಕ್ಸ್ಬಾಕ್ಸ್ ಲೈವ್, ಸ್ಕೈಡ್ರೈವ್, ಬಿಂಗ್
- ಮೊಬೈಲ್ಗೆ ಅಗತ್ಯವಾದ ಜಿಯೋಸ್ಪೇಷಿಯಲ್ ಹಾಗೂ ಮ್ಯಾಪಿಂಗ್
- ಗೂಗಲ್ಗೆ ಪರಿಣಾಮಕಾರಿ ಪರ್ಯಾಯದ ಸ್ಥಾಪನೆ: ಒಂದಕ್ಕಿಂತ ಹೆಚ್ಚು 'ವಿಶ್ವದ ಡಿಜಿಟಲ್ ಮ್ಯಾಪ್'
- ನೋಕಿಯಾ ಮೂಲಕ ಏಊಖಊ ಬಳಕೆದಾರರ ಸಂಖ್ಯೆಯನ್ನು ಗರಿಷ್ಠಗೊಳಿಸುವುದು
- ಭವಿಷ್ಯದ ದೃಷ್ಟಿಯಿಂದ ನೂತನ, ಸರಳ ಹಾಗೂ ಹೆಚ್ಚು ಪರಿಣಾಮಕಾರಿ ಪಾಲುದಾರಿಕೆ ಏಊಖಊ ಮ್ಯಾಪಿಂಗ್ ಆ್ಯಪ್ಗೆ ಮಾಲೀಕತ್ವಕ್ಕೆ ಸಮನಾದ ಹಕ್ಕನ್ನು ಮೈಕ್ರೋಸಾಫ್ಟ್ ಪಡೆಯುತ್ತದೆ. ನೋಕಿಯಾವು ಇತರೆ ಪ್ಲಾಟ್ಫಾರಂಗೆ ಈ ಆ್ಯಪ್ಗಳ ಅಭಿವೃದ್ಧಿಯನ್ನು ಮುಂದುವರಿಸುತ್ತದೆ.
- ಒಪ್ಪಂದದಂತೆ, ನೋಕಿಯಾವು ಮ್ಯಾಪಿಂಗ್ ಡೇಟಾ ಸೇವೆಗಾಗಿ ಮೈಕ್ರೋಸಾಫ್ಟ್ನಿಂದ ವಾರ್ಷಿಕ ಹಣ ಪಡೆಯಲಿದೆ.
ಯಾವ ರೀತಿ ಒಪ್ಪಂದ
335 ಶತಕೋಟಿ-ಪ್ರಮುಖ ಪೇಟೆಂಟ್ಗಳು ಸೇರಿದಂತೆ ನೋಕಿಯಾ ಸಾಧನ,ಸೇವೆಗಳಿಗೆ ಹಣ
146 ಶತಕೋಟಿ- ವಿಸ್ತೃತ ಬೌದ್ಧಿಕ ಆಸ್ತಿಯ ಲೈಸೆನ್ಸ್ಗೆ ನೀಡಿದ ಮೊತ್ತ
480 ಶತಕೋಟಿ-ಐಪಿ ಮತ್ತು ಪೇಟೆಂಟ್ ಒಪ್ಪಂದದ ಒಟ್ಟು ಮೌಲ್ಯ
8,500-ನೋಕಿಯಾದಿಂದಮೈಕ್ರೋಸಾಫ್ಟ್ ಪಡೆದುಕೊಂಡ ಒಟ್ಟು ಡಿಸೈನ್ ಪೇಟೆಂಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

