ಸಾಮೂಹಿಕ ಅತ್ಯಾಚಾರ ಸಾಬೀತು; ನಾಳೆ ಶಿಕ್ಷೆ ಪ್ರಕಟ
ಕನ್ನಡಪ್ರಭ ವಾರ್ತೆ ಬೆಂಗಳೂರು ಸೆ.4
ನಗರದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ 6 ಆರೋಪಿಗಳ ವಿರುದ್ಧ ಆರೋಪ ಸಾಬೀತಾಗಿದ್ದು ಸೆಪ್ಟೆಂಬರ್ 6ರಂದು ಶಿಕ್ಷೆಯ ಪ್ರಮಾಣವನ್ನು ಐದನೇ ತ್ವರಿತಗತಿ ನ್ಯಾಯಾಲಯ ಪ್ರಕಟಿಸಲಿದೆ. ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಬಿ.ಸಂಗಣ್ಣನವರ್ ಶುಕ್ರವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಲಿದ್ದಾರೆ.
ಪ್ರಕರಣದಲ್ಲಿ ಸಾರ್ವಜನಿಕ ಅಭಿಯೋಜಕರಾಗಿ ಎಸ್.ವಿ.ಭಟ್ಟ ವಾದ ಮಂಡಿಸಿದ್ದರು. 2012ರ ಅಕ್ಬೋಬರ್ 13ರಂದು ಜ್ಞಾನಭಾರತಿ ಆವರಣದಲ್ಲಿರುವ ಗಾಂಧಿ ಅಧ್ಯಯನ ಕೇಂದ್ರ ಸಮೀಪ ಪ್ರಿಯಕರನೊಂದಿಗೆ ಕಾರಿನಲ್ಲಿ ಮಾತನಾಡಿಕೊಂಡು ಕುಳಿತಿದ್ದ ನೇಪಾಳ ಮೂಲದ ಕಾನೂನು ಪದವಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ದೆಹಲಿ ಸಾಮೂಹಿಕ ಅತ್ಯಾಚಾರ ಘಟನೆ ಬಳಿಕ ಈ ಪ್ರಕರಣ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಪ್ರಕರಣದ ತನಿಖೆ ನಡೆಸಿದ ಜ್ಞಾನಭಾರತಿ ಪೊಲೀಸರು ಘಟನೆ ನಡೆದ ಒಂದು ವಾರದಲ್ಲಿ 7 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ರಾಮನಗರ ಜಿಲ್ಲೆ ಕೈಲಾಂಚ ಹೊಬಳಿ ಮೆಟ್ಟಾಕದೊಡ್ಡಿಯ ಶಿವಣ್ಣ(20), ಯಳಯಯ್ಯ (23), ಈರ(20), ದೊಡ್ಡೀರಯ್ಯ(19), ಮದ್ದೂರ(20), ಮತ್ತು ರಾಮ (21)ಶಿಕ್ಷೆಗೆ ಗುರಿಯಾದವರು. ಮತ್ತೊಬ್ಬ ಬಾಲಾಪರಾಧಿಯಾಗಿದ್ದಾನೆ.
ಆರೋಪಿಗಳು ಶ್ರೀಗಂಧ ಮತ್ತು ಸಾಮಾನ್ಯ ಮರಗಳನ್ನು ಕಡಿದು ಸಾಗಿಸುವುದನ್ನು ಮಾಡುತ್ತಿದ್ದರು. ಮದ್ಯ ಸೇವನೆ, ಮಾದಕ ವ್ಯಸನ ಮಾಡುತ್ತಿದ್ದ ಆರೋಪಿಗಳು ಯುವತಿಯ ಮೇಲೆ ಅತ್ಯಾಚಾರ ಎಸಗಿ ಆಕೆಯ ಬಳಿ ಇದ್ದ ಮೊಬೈಲ್ ಫೋನ್ ದೋಚಿ ಪರಾರಿಯಾಗಿದ್ದರು. ದುಷ್ಕರ್ಮಿಗಳ ಸ್ಕೇಚ್ ಹಾಗೂ ಯುವತಿಯಿಂದ ಕದ್ದೊಯ್ದಿದ್ದ ಪೋನ್ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.
ಘಟನೆ: ನೇಪಾಳ ಮೂಲದ 21 ವರ್ಷದ ಯುವತಿ ಜ್ಞಾನಭಾರತಿ ಆವರಣದಲ್ಲಿರುವ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ದ್ವಿತೀಯ ವರ್ಷದಲ್ಲಿ ಕಾನೂನು ವ್ಯಾಸಂಗ ಮಾಡುತ್ತಿದ್ದಳು. ಕಾಲೇಜಿಗೆ ಹೊಂದಿಕೊಂಡತೆ ಇರುವ ಹಾಸ್ಟೇಲ್ನಲ್ಲಿ ವಾಸಿಸುತ್ತಿದ್ದಳು. ಅ.13ರ ರಾತ್ರಿ ತನ್ನ ಗೆಳೆಯನೊಂದಿಗೆ ಜ್ಞಾನಭಾರತಿ ಗಾಂಧಿ ಅಧ್ಯಯನ ಕೇಂದ್ರದ ಸಮೀಪ ಪೊದೆಯಂತಿರುವ ಪ್ರದೇಶದಲ್ಲಿ ಕಾರು ನಿಲ್ಲಿಸಿ ಮಾತನಾಡಿಕೊಂಡು ಕುಳಿತಿದ್ದಳು. ಈ ವೇಳೆ ಆಗಮಿಸಿದ್ದ 7 ದುಷ್ಕರ್ಮಿಗಳು ಕಾರಿಗೆ ಕಬ್ಬಿಣದ ರಾಡು ಹಾಗೂ ದೊಣ್ಣೆಯಿಂದ ಹೊಡೆದು ಇಬ್ಬರನ್ನು ಕೆಳಗಿಳಿಯಲು ಹೇಳಿದ್ದಾರೆ. ಕೆಳಗಿಳಿದ ಇಬ್ಬರನ್ನು ದಟ್ಟವಾದ ಕಾಡಿನ ಒಳಕ್ಕೆ ಕರೆದುಕೊಂಡು ಹೋಗಿ ಹಣ, ಮೊಬೈಲ್ ಫೋನ್ ಹಾಗೂ ಇತರ ವಸ್ತುಗಳನ್ನು ನೀಡುವಂತೆ ಕೇಳಿ ಹಲ್ಲೆ ನಡೆಸಿದ್ದಾರೆ.
ಯುವಕ ತಾನು ಕಾರಿನಲ್ಲಿ ಪರ್ಸ್ ಇಟ್ಟಿದ್ದು ಅದನ್ನು ತರುವುದಾಗಿ ಹೇಳಿ ಹೋದಾಗ ದುಷ್ಕರ್ಮಿಗಳು ಯುವತಿಯನ್ನು ದಟ್ಟವಾದ ಪೊದೆಯೊಳಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದರು.
ಘಟನೆಯ ಬಳಿಕ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದ ಯುವತಿ ನೇಪಾಳಕ್ಕೆ ವಾಪಸಾಗಿದ್ದಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

