ಪ್ರಧಾನ ಸುದ್ದಿ

ಐಎಂ ಉಗ್ರಗಾಮಿಗಳ ತಾಣ ಮಂಗಳೂರು!

ಐಎಂ ಉಗ್ರಗಾಮಿಗಳ ತಾಣ ಮಂಗಳೂರು!
Published On :

ನವದೆಹಲಿ: ಮಂಗಳೂರಿನಲ್ಲೂ ಇತ್ತು ಉಗ್ರರ ಅಡಗುತಾಣ!
 ಹೈದರಾಬಾದ್ ಸ್ಫೋಟಕ್ಕೆ ಮುನ್ನ ಉಗ್ರರು ಮಂಗಳೂರಿನ ಅಡಗುತಾಣಗಳಲ್ಲಿ ಕಾಲ ಕಳೆದಿದ್ದ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ)ಗೆ ಮಾಹಿತಿ ದೊರೆತಿದೆ.
 ಈ ಮಾಹಿತಿಯನ್ನು ನೀಡಿದ್ದು ಬೇರ್ಯಾರೂ ಅಲ್ಲ. ಇತ್ತೀಚೆಗಷ್ಟೇ ಬಂಧಿತನಾದ ಇಂಡಿಯನ್ ಮುಜಾಹಿದೀನ್ ಸಹಸ್ಥಾಪಕ ಯಾಸೀನ್ ಭಟ್ಕಳ್ನ ಸಹಚರ ಅಸಾದುಲ್ಲಾ ಅಖ್ತರ್ ಅಲಿಯಾಸ್ ಹಡ್ಡಿ. ತನಿಖೆಯ ವೇಳೆ ತಮ್ಮ ಅಡಗುದಾಣಗಳ ಬಗ್ಗೆ ವಿವರ ನೀಡಿರುವ ಅಸಾದುಲ್ಲಾ, ಆ ಪ್ರದೇಶಗಳನ್ನು ಎನ್ಐಎ ಅಧಿಕಾರಿಗಳಿಗೆ ತೋರಿಸಿದ್ದಾನೆ.

ಮಂಗಳೂರಿಗೆ ಪಾಕ್ನಿಂದ ಹಣ: ಮಂಗಳೂರು ಹಾಗೂ ಹೈದರಾಬಾದ್ನಲ್ಲಿದ್ದ ಉಗ್ರರ ಅಡಗುತಾಣಗಳನ್ನು ತನಿಖಾ ಅಧಿಕಾರಿಗಳಿಗೆ ತೋರಿಸಿಕೊಟ್ಟಿದ್ದಾನೆ ಅಸಾದುಲ್ಲಾ. ಜತೆಗೆ ಮಂಗಳೂರಿನಲ್ಲಿನ ವೆಸ್ಟರ್ನ್ ಯೂನಿಯನ್ ಮನಿ ಟ್ರಾನ್ಸ್ಫರ್ ಶಾಖೆಯೊಂದನ್ನೂ ತೋರಿಸಿದ್ದಾನೆ. ಹೈದರಾಬಾದ್ ಸ್ಫೋಟಕ್ಕೂ ಮೊದಲು ಇದೇ ಶಾಖೆಗೆ ಪಾಕಿಸ್ತಾನದಿಂದ ಹಣ ಬರುತ್ತಿತ್ತು. ಅದನ್ನು ನಾವು ಪಡೆದುಕೊಳ್ಳುತ್ತಿದ್ದೆವು. ನಾನು, ಭಟ್ಕಳ್, ವಖಾಸ್ ಹಾಗೂ ತಹ್ಸೀನ್ ಅಖ್ತರ್ ಇಲ್ಲೇ ವಾಸಿಸುತ್ತಿದ್ದೆವು ಎಂದಿದ್ದಾನೆ. ಇದೇ ವೇಳೆ, ಅಡಗುತಾಣದಿಂದ ಐಇಡಿ ಸರ್ಕ್ಯೂಟ್, ವಖಾಸ್ ಮತ್ತು ತಹ್ಸೀನ್ನ ಬಟ್ಟೆಬರೆ, ಸ್ಫೋಟಕಗಳ ಕುರುಹುಗಳು, ಸ್ಫೋಟಕಗಳನ್ನು ಒಯ್ಯಲು ಬಳಸಿದ್ದ ಬ್ಯಾಗ್ಗಳನ್ನು ಎನ್ಐಎ ವಶಪಡಿಸಿಕೊಂಡಿದೆ.
 ವಶಪಡಿಸಿಕೊಂಡಿರುವ ಭಟ್ಕಳ್ನ ಲ್ಯಾಪ್ಟಾಪ್ನಲ್ಲಿ 3 ಸಾವಿರ ಇಮೇಲ್ಗಳು ದೊರೆತಿದ್ದು, ಅವೆಲ್ಲವೂ ರಹಸ್ಯ ಭಾಷೆಯಲ್ಲಿವೆ. ಇವುಗಳನ್ನು ವಿವಿಧ ಸ್ಫೋಟಗಳ ಬಗ್ಗೆ ಪಾಕ್ನಲ್ಲಿದ್ದ ಉಗ್ರರಿಗೆ ಮಾಹಿತಿ ನೀಡಲು ಕಳುಹಿಸಿರಬಹುದು ಎಂದು ಅಂದಾಜಿಸಲಾಗಿದೆ. ಇದೇ ವೇಳೆ, ಭಟ್ಕಳ್ ಹಾಗೂ ಅಸಾದುಲ್ಲಾನನ್ನು ಸೆ.17ರವರೆಗೆ ಎನ್ಐಎ ವಶಕ್ಕೊಪ್ಪಿಸಿ ದೆಹಲಿ ಕೋರ್ಟ್ ಮಂಗಳವಾರ ಆದೇಶ ನೀಡಿದೆ.

ಮುಟ್ಟುಗೋಲು ಹಾಕಿ
ಅಲ್ಖೈದಾ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜತೆ ಸಂಪರ್ಕ ಹೊಂದಿರುವ 224 ವ್ಯಕ್ತಿಗಳು ಹಾಗೂ 64 ಸಂಘಟನೆಗಳ ಆಸ್ತಿ ಮುಟ್ಟುಗೋಲು ಮಾಡಲು ನೇಪಾಳ ಸರ್ಕಾರ ಆದೇಶಿಸಿದೆ.

ದಾಳಿಗೆ ಸಂಚು
ಮುಂಬೈನ ಜವೇರಿ ಬಜಾರ್ನಲ್ಲಿ 2011ರ ಜುಲೈ 13ರಂದು ಬಾಂಬ್ ಇಟ್ಟು 17 ಮಂದಿಯ ಸಾವಿಗೆ ಕಾರಣನಾದ ಉಗ್ರ ವಖಾಸ್ ಅಲಿಯಾಸ್ ಅಹ್ಮದ್ ಮತ್ತೆ ಭಾರತಕ್ಕೆ ಬಂದಿದ್ದಾನೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದವನಾದ ವಖಾಸ್ ದೇಶದಲ್ಲಿ ಮತ್ತಷ್ಟು ಸ್ಫೋಟಕ್ಕೆ ಸಂಚು ರೂಪಿಸಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.